
ಹಳಿಯಾಳ:- ನವರಾತ್ರಿ ಉತ್ಸವದ ಅಂಗವಾಗಿ ತಾಲೂಕಿನ ಅರ್ಲವಾಡ ಗ್ರಾಮದಲ್ಲಿ ಇದೇ ಪ್ರಥಮ ಬಾರಿಗೆ ಗ್ರಾಮಸ್ಥರು ಸಾರ್ವಜನೀಕ ಶ್ರೀ ದುರ್ಗಾದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ಅಲ್ಲದೇ ಪ್ರಥಮ ಬಾರಿಗೆ ದುರ್ಗಾದೌಡನ್ನು ಪ್ರಾರಂಭಿಸುವ ಮೂಲಕ ವಿಜೃಂಭಣೆಯಿಂದ ನವರಾತ್ರಿ ಉತ್ಸವ ಆಚರಿಸುತ್ತಿದ್ದಾರೆ.
ಹಳಿಯಾಳ ಪಟ್ಟಣದಲ್ಲಿ ನಡೆಯುವ ದುರ್ಗಾದೌಡ ಕಾರ್ಯಕ್ರಮದಿಂದ ಪ್ರೇರಿಪಿತರಾದ ದಕ್ಷಿಣ ಭಾರತದ
ಏಕೈಕ ಸೂರ್ಯನಾರಾಯಣ ದೇವಸ್ಥಾನ ಹೊಂದಿರುವ ಹಳಿಯಾಳ ತಾಲೂಕಿನ ಅರ್ಲವಾಡ ಗ್ರಾಮಸ್ಥರು ಒಕ್ಕೋರ ನಿರ್ಧಾರ ಕೈಗೊಂಡು ಪ್ರಸಕ್ತ ವರ್ಷದಿಂದ ಗ್ರಾಮದಲ್ಲಿ ದುರ್ಗಾಮಾತೆ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪ್ರತಿದಿನ ವಿಶೇಷ ಪೂಜೆ, ಪುನಸ್ಕಾರ, ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೆರಿಸುತ್ತಿದ್ದಾರೆ. ಸಾಯಂಕಾಲ ಭಜನೆ, ಕಿರ್ತನೆ ಕಾರ್ಯಕ್ರಮಗಳು ಹಾಗೂ ಬೆಳಗಿನ ಜಾವ ದುರ್ಗಾದೌಡನ್ನು ಯಶಸ್ವಿಯಾಗಿ ನೆರವೆರಿಸುತ್ತಿದ್ದಾರೆ.



Leave a Comment