
ಹಳಿಯಾಳ:- ಪಟ್ಟಣದ ಸಿದ್ದರಾಮೇಶ್ವರ ದೇವಸ್ಥಾನದಿಂದ ಗಾಂಧಿಕೇರಿಯ ಚವಾಟೆಪ್ಪ ದೇವಸ್ಥಾನಕ್ಕೆ ತಲುಪುವ ಮೂಲಕ ಹಳಿಯಾಳದಲ್ಲಿ ದುರ್ಗಾದೌಡ ಮೂರನೇ ದಿನ ಯಶಸ್ವಿಯಾಗಿ ಪೂರೈಸಿದೆ.
ಸಿದ್ದಾರಾಮೇಶ್ವರಗಲ್ಲಿ, ಕೈಲಾಸ ಆಶ್ರಯ ನಗರ, ಕಾರ್ಮೆಲ್ ಸ್ಕೂಲ್ ಪ್ರದೇಶ, ಕಾಕರ ಗಲ್ಲಿ, ರಾಮದೇವ ಗಲ್ಲಿ, ಸೆಂಟ್ಝೇವಿಯರ್ ರಸ್ತೆ, ಗೌರಿ ಗುಡಿ ರಸ್ತೆ, ಯಲ್ಲಾಪುರ ನಾಕಾ, ಲಕ್ಷ್ಮೀ ಕೇರಿಯ ಮೂಲಕ ಗಾಂಧಿಕೇರಿಯನ್ನು ಪ್ರವೇಶಿಸಿ ಚವಾಟೆಪ್ಪ ದೇವಸ್ಥಾನದಲ್ಲಿ 3 ನೇ ದಿನದ ದುರ್ಗಾದೌಡ ಅಂತ್ಯಗೊಂಡಿತು.
ದುರ್ಗಾದೌಡನಲ್ಲಿ ಛದ್ಮವೇಷಗಳಷ್ಟೇ ಅಲ್ಲದೇ ಹೆಲ್ಮೇಟ್ ಅನ್ನು ಕಡ್ಡಾಯವಾಗಿ ಬಳಸುವಂತೆ ಹೆಲ್ಮೆಟ್ನೊಂದಿಗೆ ಜಾಗೃತಿ ಸಾರುವ ಸಂದೇಶವನ್ನು ಯಲ್ಲಾಪುರ ನಾಕಾದ ಗಾಂಧಿಕೇರಿ ಜನರು ಮಾಡಿದ್ದು ಇತರರಿಗೆ ಮಾದರಿಯಾಗಿತ್ತು. ಬಂದೋಬಸ್ತಗೆ ಆಗಮಿಸಿದ್ದ ಪಿಎಸ್ಐ ಆನಂದಮೂರ್ತಿ, ಸಿಪಿಐ ಲೋಕಾಪುರ ಹಾಗೂ ಇತರರು ಜನರ ಜಾಗೃತಿ ಸಂದೇಶದ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.

ಎಲ್ಲ ಬಡಾವಣೆಗಳಲ್ಲಿ 60ಕ್ಕೂ ಹೆಚ್ಚು ಪುಟಾಣಿ ಮಕ್ಕಳು ವಿವಿಧ ಬಗೆಯ ಛದ್ಮವೇಷಗಳಲ್ಲಿ ಜನರ ಮನಸೂರೆಗೊಂಡರು. ಅತ್ಯಾಕರ್ಷಕ ಬೃಹತ್ ರಂಗೋಲಿಗಳು ಗಮನ ಸೆಳೆದವು.
ಮಂಗಳವಾರ ನಡೆದ 3 ನೇ ದಿನದ ದುರ್ಗಾದೌಡನಲ್ಲಿ ಉತ್ತರ ಕನ್ನಡ ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಭಾಗವಹಿಸಿದ್ದರು.
ಇನ್ನೂ ನಾಲ್ಕನೇ ದಿನದ ದುರ್ಗಾದೌಡ ಇದೇ ಚವಾಟೆಪ್ಪ ದೇವಾಸ್ಥಾನದಿಂದ ಆರಂಭವಾಗಲಿದ್ದು ಕಸಬಾಗಲ್ಲಿ, ಹೊಸರುಗಲ್ಲಿ, ಚೌಕಿಮಠ, ಜಂಬ್ಯಾಳಗಲ್ಲಿ ಮೂಲಕ ದುರ್ಗಾದೌಡ ಸಾಗಲಿದ್ದು ಕಸಬಾಗಲ್ಲಿಯ ಆಂಜನೇಯ ದೇವಸ್ಥಾನ ತಲುಪಲಿದೆ



Leave a Comment