
ಹಳಿಯಾಳ:- ನವರಾತ್ರಿ ಉತ್ಸವವನ್ನು ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿಯೂ ಶ್ರೀ ದುರ್ಗಾಮಾತೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿ-ವಿಶೇಷ ಪೂಜೆ ಪುನಸ್ಕಾರ, ಕೀರ್ತನೆ, ಭಜನೆ, ಪುರಾಣ ವಾಚನ ಕಾರ್ಯಕ್ರಮಗಳ ಮೂಲಕ ಧಾರ್ಮಿಕ ಕಾರ್ಯಕ್ರಮವನ್ನು ಅತ್ಯಂತ ಶೃದ್ದಾಭಕ್ತಿ ಹಾಗೂ ಸಡಗರದಿಂದ ಆಚರಿಸುತ್ತಿದ್ದಾರೆ.
ತೇರಗಾಂವದಲ್ಲಿ :- ತಾಲೂಕಿನ ತೇರಗಾಂವ ಗ್ರಾಮದಲ್ಲಿ ನವರಾತ್ರಿ ಉತ್ಸವದಲ್ಲಿ ಕಳೆದ 5 ವರ್ಷಗಳಿಂದ ದುರ್ಗಾಮಾತೇಯ ಮೂರ್ತಿ ಪ್ರತಿಷ್ಠಾಪಿಸಿ ದಸರಾ ಆಚರಣೆ ಮಾಡಲಾಗುತ್ತಿದೆ. ಅಲ್ಲದೇ ಕಳೆದ 4 ವರ್ಷಗಳಿಂದ ಹಳಿಯಾಳದ ದುರ್ಗಾದೌಡನಿಂದ ಪ್ರಭಾವಿತರಾಗಿ ತೇರಗಾಂವ ಗ್ರಾಮದಲ್ಲಿಯೂ ದುರ್ಗಾದೌಡನ್ನು ಆರಂಭಿಸಲಾಗಿದೆ.
ಮುರ್ಕವಾಡದಲ್ಲಿ:- ಇನ್ನೂ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ಕಳೆದ 4 ವರ್ಷಗಳಿಂದ ಸಾರ್ವಜನೀಕ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಈ ಬಾರಿ ಪಶ್ಚಿಮ ಬಂಗಾಳದವರು ಮಾಡಿರುವ ಅತ್ಯಂತ ಆಕರ್ಷಣೀಯವಾಗಿರುವಂತಹ ಮಹಿಷಾಸುರ ಮರ್ಧಿನಿ ದುರ್ಗಾಮಾತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೆರಿಸಲಾಗುತ್ತಿದ್ದು. ಅಲ್ಲದೇ ಮುರ್ಕವಾಡ ಗ್ರಾಮದಲ್ಲಿಯೂ ಕಳೆದ 3 ವರ್ಷಗಳಿಂದ ದುರ್ಗಾದೌಡ ಧಾರ್ಮಿಕ ನಡಿಗೆ ಕಾರ್ಯಕ್ರಮ ಪ್ರಾರಂಭಿಸಲಾಗಿದ್ದು ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಇನ್ನೂ ಇಲ್ಲಿ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು, ಪ್ರವಚನ, ಭಜನೆ ಕಾರ್ಯಕ್ರಮಗಳನ್ನು ನಡೆಸಲಾಗುವುದು ವಿಶೇಷವಾಗಿದೆ ಎಂದು ಗ್ರಾಮಸ್ಥ ನಾಗರಾಜ ಗೌಡ ಮಾಹಿತಿ ನೀಡಿದರು.




Leave a Comment