
ಹಳಿಯಾಳ:- ಹಳಿಯಾಳದ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನಲ್ಲಿ ಗಾಂಧಿ ಜಯಂತಿ ಅಂಗವಾಗಿ ಯುವ ರೆಡಕ್ರಾಸ್ ಘಟಕ, ಎನ್.ಸಿಸಿ, ಎನ್.ಎಸ್.ಎಸ್, ಕ್ರೀಡಾ ಸ್ಕೌಟ್,- ಗೈಡ್ಸ್, ಐಕ್ಯೂಎಸ್ಸಿ ಪಂಡಿತ ಸರ್ಕಾರಿ ಆಸ್ಪತ್ರೆ, ಬ್ಲಡ್ ಬ್ಯಾಂಕ್ ಶಿರಸಿ, ತಾಲೂಕಾ ಆಸ್ಪತ್ರೆ ಹಳಿಯಾಳ ಹಾಗೂ ವಿಆರ್ಡಿಎಮ್ ಟ್ರಸ್ಟ್ ಹಳಿಯಾಳದವರ ಸಂಯುಕ್ತಾಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಸಲಾಯಿತು. ಈ ಸಂದರ್ಭದಲ್ಲಿ 40 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಕಾಲೇಜಿ ದೈಹಿಕ ಶಿಕ್ಷಣ ನಿರ್ದೇಶಕರಾದ ರೇಖಾ ಎಮ್.ಆರ್, ಪ್ರಾಂಶುಪಾಲರಾದ ಡಾ.ಚಂದ್ರಶೇಖರ ಲಮಾಣಿ, ವಿಆರ್ಡಿಎಮ್ ಟ್ರಸ್ಟ್ನ ವಿನಾಯಕ ಚವ್ವಾಣ ಮೊದಲಾದವರು ಇದ್ದರು.


Leave a Comment