
ಹಳಿಯಾಳ:- ಸ್ವಚ್ಚತೆ ಹಾಗೂ ಸಾರ್ವಜನೀಕರ ಆರೋಗ್ಯದ ಹಿತದೃಷ್ಠಿಯಿಂದ ಸಾರ್ವಜನೀಕ ಶೌಚಾಲಯಗಳನ್ನು ನಿರ್ಮಿಸಬೇಕು, ಪಟ್ಟಣದಲ್ಲಿ ನಡೆಯುವ ವಾರದ ಸಂತೆಯನ್ನು ವಿಸ್ತರಿಸಬೇಕು, ಅಪರಾಧ ತಡೆಯಲು ಹೆಚ್ಚಿನ ಸಿಸಿ ಟಿವಿ ಕ್ಯಾಮೇರಾ ಅಳವಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನಿಟ್ಟು ಮುಂದಿಟ್ಟುಕೊಂಡು ಹಳಿಯಾಳ ವ್ಯಾಪಾರಸ್ಥರ ಒಕ್ಕೂಟವು ಹಳಿಯಾಳ ತಹಶೀಲ್ದಾರ್ ಹಾಗೂ ಪೋಲಿಸ್ ವೃತ್ತ ನೀರಿಕ್ಷಕ(ಸಿಪಿಐ) ಅವರಿಗೆ ಮನವಿ ಸಲ್ಲಿಸಿದೆ.
ಗುರುವಾರ ವ್ಯಾಪಾರಸ್ಥರ ಒಕ್ಕೂಟದವರು ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಹಳಿಯಾಳ ಪೋಲಿಸ್ ವೃತ್ತ ನೀರಿಕ್ಷಕ ಲೋಕಾಪುರ ಅವರಿಗೂ ಮನವಿಯನ್ನು ಸಲ್ಲಿಸಿದರು.
ಮನವಿಯಲ್ಲಿ ಕಳೆದ ತಿಂಗಳ ದಿ.13 ರಂದು ತಹಶೀಲ್ದಾರ್ ಕಾರ್ಯಾಲಯದಲ್ಲಿ ನಡೆದ ಅಧಿಕಾರಿಗಳ ಮತ್ತು ವ್ಯಾಪಾರಸ್ಥರ ನಡುವಿನ ಸಭೆಯಲ್ಲಿ ವ್ಯಾಪಾರಸ್ಥರು ಪಾಲಿಸಬೇಕಾದ ನಿಯಮಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಬಳಿಕ ವ್ಯಾಪಾರಸ್ಥರಿಂದ ಸಲಹೆ-ಸೂಚನೆ ಬೇಡಿಕೆಗಳಿದ್ದರೇ ತಿಳಿಸುವಂತೆ ಹೇಳಲಾಗಿತ್ತು ಅದರಂತೆ ಒಕ್ಕೂಟದವರು ಸಭೆ ಸೇರಿ ಸಾಕಷ್ಟು ವಿಷಯಗಳ ಕುರಿತು ಚರ್ಚಿಸಿದ್ದು ಹಲವು ಸಲಹೆ ಸೂಚನೆಗಳನ್ನು ಹಾಗೂ ಬೇಡಿಕೆಗಳನ್ನು ತಾಲೂಕಾಡಳಿತ ಹಾಗೂ ಪೋಲಿಸ್ ಇಲಾಖೆಯ ಮುಂದೆ ಇಡುತ್ತಿರುವುದಾಗಿ ಹೇಳಲಾಗಿದೆ.
ಬೇಡಿಕೆಗಳು :- ಹಳಿಯಾಳದಲ್ಲಿ ವಾರದ ಸಂತೆಯಾದ ರವಿವಾರದಂದು ಶಿವಾಜಿ ವೃತ್ತದಲ್ಲಿ ಪರ ಊರಿನಿಂದ ಬಂದ ತರಕಾರಿ ಇನ್ನಿತರೇ ವಸ್ತುಗಳನ್ನು ಹೇರಿಕೊಂಡು ಬಂದ ಸಾರಿಗೆ ವಾಹನಗಳಾದ ಲಾರಿಗಳು ಮತ್ತು ಮಿನಿ ಟ್ರಕ್ಗಳು ರಸ್ತೆ ಮೇಲೆ ಸಾಮಾನು ಇಳಿಸುತ್ತಿದ್ದು ಇದು ಭಾರಿ ವಾಹನ ದಟ್ಟನೆಯ ಪ್ರದೇಶವಾಗಿದ್ದು ಯಾವುದೇ ಸಮಯದಲ್ಲಿ ಅಹಿತಕರ ಘಟನೆಗಳು ಸಂಭವಿಸಬಹುದಾಗಿದೆ. ಹಾಗಾಗಿ ಈ ವೃತ್ತದಲ್ಲಿ ಬರುವ ಸರಕು ವಾಹನಗಳನ್ನು ವಿಶಾಲವಾಗಿರುವ ವಾಹನ ಸಂದನಿ ಇಲ್ಲದ ಸಂಗೊಳ್ಳಿ ರಾಯಣ್ಣ ವೃತ್ತ (ಅರ್ಬನ ಬ್ಯಾಂಕ ಸರ್ಕಲ್)ದಲ್ಲಿ ಇಳಿಸಲು ಅನುವು ಮಾಡಿಕೊಡಬೇಕು ಹಾಗೂ ಇದನ್ನು ಕಡ್ಡಾಯಗೊಳಿಸಬೇಕು.
ರವಿವಾರದ ಸಂತೆಯ ದಿನದ ಮಾರುಕಟ್ಟೆಯನ್ನು ಕೆನರಾ ಬ್ಯಾಂಕವರೆಗೂ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದ ಕೆ.ಡಿ.ಡಿ.ಸಿ.ಸಿ ಬ್ಯಾಂಕ ವರೆಗೆ ವಿಸ್ತರಿಸಬೇಕು. ಸಂತೆಗೆ ಬರುವ ವ್ಯಾಪಾರಸ್ಥರ ಮತ್ತು ಗ್ರಾಹಕರ ಹಾಗೂ ಸ್ವಚ್ಛತೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಪಟ್ಟಣದ ಮುಖ್ಯ ಭಾಗಗಳಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ ಮೂತ್ರಾಲಯಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಡಬೇಕು.
ಮಾರುಕಟ್ಟೆ ಪ್ರದೇಶದಲ್ಲಿ ಯಾವುದೇ ಅಪರಾಧಗಳು ನಡೆಯದಂತೆ ತಡೆಯಲು ಇನ್ನೂ ಹೆಚ್ಚಿನ ಸಿ.ಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು ¬¬¬¬ಎಂದು ಆಗ್ರಹಿಸಲಾಗಿದೆ.
ಮನವಿ ಸಲ್ಲಿಸುವಾಗ ಸಂಘದ ಅಧ್ಯಕ್ಷರಾದ ಸಚೀನ ಹಳ್ಳಿಕೇರಿ, ಪ್ರಮುಖರಾದ ಯಲ್ಲಪ್ಪಾ ಮಾಲವನಕರ, ಇಮ್ತಿಯಾಜ ಮನಿಯಾರ, ಬಾಳಕೃಷ್ಣ ಶಹಾಪುರಕರ, ಅರುಣ ಮಹೇಂದ್ರಕರ, ಎಬಿ ರಂಜಲ, ಪ್ರಕಾಶ ಗಿರಿ, ಎಲ್.ಎಸ್.ಹಿರೆಮಠ, ವಿಶ್ವನಾಥ ಬೆಂಗಳೂರು, ಭುಜಂಗ ಶೆಟ್ಟಿ, ನಾಮದೇವ ಲಾಡ, ಲಕ್ಷ್ಮಣ ಕಂಚನಾಳಕರ, ಚೇತನ ದೇಸಾಯಿ, ಮಧೂಸೂಧನ, ಅಬ್ದುಲಗನಿ, ಯೂಸೂಫ ಮೊದಲಾದವರು ಇದ್ದರು.


Leave a Comment