
ಹಳಿಯಾಳ:- ಪ್ರತಿದಿನದ ನೂರಾರು ಮಕ್ಕಳು ದೇವತೆಗಳ, ವಿವಿಧ ಮಹಾಪುರುಷರ, ಸೈನಿಕರ ಛದ್ಮವೇಷಗಳಲ್ಲಿ ಹಾಗೂ ಹಲವು ರೂಪಕಗಳಲ್ಲಿ ಕಂಗೋಳಿಸುವ ಮೂಲಕ ಹಳಿಯಾಳದಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿರುವ ದುರ್ಗಾದೌಡಗೆ ಕಳೆ ತುಂಬಿದ್ದಾರೆ.

ಗುರುವಾರ ಕಸಬಾಗಲ್ಲಿಯ ಆಚಿಜನೇಯ ದೇವಸ್ಥಾನದಿಂದ ಜಂಬ್ಯಾಳಗಲ್ಲಿಯ ವೀರಕ್ತಮಠಕ್ಕೆ ತಲುಪುವುದರ ಮೂಲಕ ದುರ್ಗಾದೌಡ 5ನೇ ದಿನ ಪೂರೈಸಿದೆ. 5 ನೇ ದಿನದ ದುರ್ಗಾದೌಡ ಪಟ್ಟಣದ ದೊಡ್ಡ ಜಾಮೀಯಾ ಮಸೀದಿ ಎದುರಿನಿಂದ ಮುಂದೆ ಸಾಗಿತು.

ದಿ.4 ರಂದು 6ನೇ ದಿನ ಇದೇ ವೀರಕ್ತಮಠದಿಂದ ದುರ್ಗಾದೌಡ ಮುಂದೆ ಸಾಗಲಿದೆ. 5ನೇ ದಿನದ ದುರ್ಗಾದೌಡನಲ್ಲಿ ಮಕ್ಕಳಷ್ಟೇ ಅಲ್ಲದೇ ಮಹಿಳೆಯರು ಗುಜಾರಾತಿ ಶೈಲಿಯ ಕೋಲಾಟದ {ಗರ್ಭಾ) ಪೋಷಾಕು ತೊಟ್ಟು ಕೋಲಾಟದ ಭಂಗಿಯಲ್ಲಿ ಚಿಣ್ಣರೊಂದಿಗೆ ಪಾಲ್ಗೊಳ್ಳುವ ಮೂಲಕ ಎಲ್ಲರ ಗಮನ ಸೆಳೆದರು. ಇನ್ನೊಂದೆಡೆ ಬೃಹತ್ ಶಿವಲಿಂಗ, ಪುಟಾಣಿ ಸೈನಿಕರು ಹಾಗೂ ಅಮರನಾಥ ಗುಹೆಯ ಮಾದರಿ ಕೂಡ ಆಕರ್ಷಣೀಯವಾಗಿತ್ತು.




Leave a Comment