
ಹಳಿಯಾಳ:- ಆಲ್ ಇಂಡಿಯಾ ಡ್ರ್ಯಾಗನ್ ಕರಾಟೆ ಅಸೋಶಿಯನ್ ರವರು ನಡೆಸಿದ “ಬೆಲ್ಟಾ” ಪರೀಕ್ಷೆಯಲ್ಲಿ ಹಳಿಯಾಳದ ಛತ್ರಪತಿ ಶಿವಾಜಿ ಶಿಕ್ಷಣ ಸಂಸ್ಥೆಯ ಎಸ್.ಎಲ್.ಘೋಟ್ನೇಕರ ಆಂಗ್ಲ ಮಾಧ್ಯಮ ಶಾಲೆಯ 16 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡಿದ್ದು, ನವೆಂಬರ್ ತಿಂಗಳ ದಿ.24 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಸಂಸ್ಥಾಪಕರಾಗಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಆಡಳಿತ ಮಂಡಳಿಯ ಅಧ್ಯಕ್ಷ ಆರ್.ಎಸ್.ಅರಶಿಣಗೇರಿ, ಸದಸ್ಯರು, ಪ್ರಾಶುಂಪಾಲರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಕರಾಟೆ ತರಬೇತಿದಾರರಾದ ಸೆನ್ಸಾಯಿ ರಮೇಶ ವಾಯ್ ಸೋಲ್ಲಾಪುರರವರು ಕರಾಟೆ ತರಬೇತಿ ನೀಡುತ್ತಿದ್ದಾರೆ.



Leave a Comment