
ಹೊನ್ನಾವರ: ರಾಜ್ಯ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ಪಿ.ಜಿ.ಎಮ್. ಪಾಟೀಲ್ರನ್ನು ಹೊನ್ನಾವರ ವಕೀಲರ ಸಂಘದ ಸದಸ್ಯರು ಹಾಗೂ ನ್ಯಾಯಾಧೀಶರು ಶನಿವಾರ ಹೊನ್ನಾವರ ಪ್ರವಾಸಿ ಮಂದಿರದಲ್ಲಿ ಸ್ವಾಗತಿಸಿದರು.
ನ್ಯಾಂiÀiಮೂರ್ತಿಗಳು ತಮ್ಮ ಖಾಸಗಿ ಪ್ರಯಾಣದ ವೇಳೆಗೆ ತಾವು ಇಡಗುಂಜಿಗೆ ತೆರಳುವ ಮಾರ್ಗದಲ್ಲಿ ಹೊನ್ನಾವರಕ್ಕೆ ಭೇಟಿ ನೀಡಿದರು.
ನ್ಯಾಯಮೂರ್ತಿಗಳು ಈ ಹಿಂದೆ ಹೊನ್ನಾವರ ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ಹಾಗೂ ನಂತರ ಹೊನ್ನಾವರ ಎಮ್.ಎ.ಸಿ.ಟಿ. ಹಾಗೂ ಸಿವಿಲ್ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿದ್ದರು. ನ್ಯಾಯಮೂರ್ತಿಗಳನ್ನು ವಕೀಲರ ಸಂಘದ ಪರವಾಗಿ ಹಾಗೂ ಸ್ಥಳೀಯ ನ್ಯಾಯಧೀಶರ ಪರವಾಗಿ ಸ್ವಾಗತಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹೊನ್ನಾವರ ನ್ಯಾಯಧೀಶರಾದ ಮಧುಕರ ಕೆ. ಭಾಗ್ವತ್, ಸನ್ಮತಿ ಎಸ್.ಆರ್. ಉಪಸ್ಥಿತರಿದ್ದರು.
ವಕೀಲರ ಸಂಘದ ಅಧ್ಯಕ್ಷ ಕೆ.ವಿ. ನಾಯ್ಕ, ಕಾರ್ಯದರ್ಶಿ ಸೂರಜ ನಾಯ್ಕ, ಹಿರಿಯ ವಕೀಲರಾದ ಮಾಧವ ಜಾಲಿಸತ್ಗಿ, ಜಿ.ವಿ. ಭಟ್, ವಿ.ಎಮ್. ಭಂಡಾರಿ, ಆರ್.ಎಸ್. ಕಾಮತ್ ಹಾಗೂ ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.



Leave a Comment