
ಹಳಿಯಾಳ:- ಬುಧವಾರ ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಹೋರಿ ಬೆದರಿಸುವ ಕಾರ್ಯಕ್ರಮ ಉತ್ಸಾಹದಿಂದ ನಡೆಯಿತು.
ತೇರಗಾಂವ ಗ್ರಾಮದಲ್ಲಿ ರೈತರು ತಮ್ಮ ಕೃಷಿ ಮಿತ್ರ ಎತ್ತುಗಳನ್ನು ವಿವಿಧ ಬಣ್ಣದ ಚಿತ್ತಾರಗಳಲ್ಲಿ ಅಲಂಕರಿಸಿ, ಪುಷ್ಟಗಳು ಸೇರಿದಂತೆ ವಿವಿಧ ವಸ್ತುಗಳಿಂದ ಶೃಂಗರಿಸಿ ಹೊರಿ ಬೆದರಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಡುವ ದಿನಿಸುಗಳಾದ ಕಡಬು, ಕೊಡಬಳೆ, ಚಕ್ಕುಲಿ, ಕೊಬ್ಬರಿ ಬಟ್ಟಲು, ಇನ್ನಿತರ ಪದಾರ್ಥಗಳು ಸೇರಿದಂತೆ ದುಡ್ಡನ್ನು ಎತ್ತು-ಹೊರಿಗಳಿಗೆ ಕಟ್ಟಿ ಓಡಿಸಲಾಗುತ್ತದೆ ಈ ಸಂದರ್ಭದಲ್ಲಿ ಎತ್ತು-ಹೋರಿಗಳನ್ನು ಹಿಡಿದು ಅದಕ್ಕೆ ಕಟ್ಟಿದ ಪದಾರ್ಥಗಳನ್ನು ಹಾಗೂ ಕಟ್ಟಿದ ಹಣವನ್ನು ತೆಗೆದುಕೊಳ್ಳುವುದೇ ವಿಶೇಷ ಕಾರ್ಯಕ್ರಮವಾಗಿದೆ.
ಕಳೆದ ಅನೇಕ ವರ್ಷಗಳಿಂದ ತೇರಗಾಂವ ಗ್ರಾಮದಲ್ಲಿ ಈ ವಿಶಿಷ್ಠ ಕಾರ್ಯಕ್ರಮ ಚಾಲ್ತಿಯಲ್ಲಿದೆ. ಗ್ರಾಮದ ನೂರಾರು ಯುವಕರು ಈ ಸ್ಪರ್ದೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.



Leave a Comment