
ಹಳಿಯಾಳ:- “ಭಾಷೆಗೆ ಭಾವನೆಗಳೆ ಆಧಾರ, ಭಾವನೆಗಳನ್ನು ವ್ಯಕ್ತ ಪಡಿಸುವ ಮಾಧ್ಯಮವೇ ಮಾತೃಭಾಷೆ. ಮಾತೃ ಭಾಷೆಗೆ ತನ್ನದೆ ಆದ ಮಹತ್ವವಿದೆ. ಮಾತೃಭಾಷೆ ಪ್ರತಿಯೊಬ್ಬರಿಗೂ ಕರುಳ ಬಳ್ಳಿಯ ಸಂಬಂಧ ವಿದ್ದಹಾಗೆ, ಕನ್ನಡ ಭಾಷೆಯನ್ನು ಪ್ರೀತಿಸಿ, ಅನ್ಯ ಭಾಷೆಯನ್ನು ಗೌರವಿಸಿ” ಎಂದು ಹಳಿಯಾಳದ ಹಿರಿಯ ಉಪನೋಂದಣಾಧಿಕಾರಿಗಳಾದ ನಜೀರ ನದಾಫ ಕರೆ ನೀಡಿದರು.
ಪಟ್ಟಣದ ವಿಮಲ ವಿ. ದೇಶಪಾಂಡೆ ವಿದ್ಯಾಲಯದಲ್ಲಿ ನಡೆದ 64ನೇ ಕನ್ನಡ ರಾಜ್ಯೋತ್ಸವದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿ.ಆರ್.ಡಿ.ಎಮ್. ಟ್ರಸ್ಟನ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಡಿ.ಪಿ.ಐ.ಟಿ.ಐ.ನ ಪ್ರಾಂಶುಪಲ ದಿನೇಶ ನಾಯ್ಕ, ಶಾಲೆಯ ಪ್ರಾಶುಂಪಾಲ ಡಾ.ಸಿ.ಬಿ. ಪಾಟೀಲರವರು ಭುವನೇಶ್ವರಿ ಮಾತೆಗೆ ಪೂಜೆ ಸಲ್ಲಿಸಿದರು.
ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ‘ಕರುನಾಡ ತಾಯಿ ಸದಾ ಚಿನ್ಮಯಿ ಈ ಪೂಣ್ಯ ಭೂಮಿ ನಮ್ಮ ದೇವಾಲಯ’ ಎನ್ನುವ ಕರುನಾಡಿನ ನೃತ್ಯವನ್ನು ಪ್ರಸ್ತುತ ಪಡಿಸಿದರು. ವಿದ್ಯಾರ್ಥಿ ವೈಷ್ಣವಿ ಸಿನ್ನೂರ ಮತ್ತು ಪ್ರಶಾಂತ ಇಟಗಿ ಕಾರ್ಯಕ್ರಮ ನೆರವೇರಿಸಿದನು.





Leave a Comment