
ರಬಕವಿ/ಬನಹಟ್ಟಿ :- ಸ್ವರಾಜ್ಯ ಕಲ್ಪನೆ ಹರಿಕಾರರಾಗಿದ್ದ ಶಿವಾಜಿ ಮಹಾರಾಜರು ಹುಟ್ಟು ಹೋರಾಟಗಾರರು, ಬಾಲ್ಯದಿಂದಲೇ ಕ್ರೀಯಾಶೀಲರಾಗಿ, ಉತ್ತಮ ನಾಯಕತ್ವ ಗುಣ ಬೆಳೆಸಿಕೊಂಡಿದ್ದ ಅವರು ಜೀವನದುದ್ದಕ್ಕೂ ಸಮಾನತೆ ಸಾಧಿಸಲು ಶ್ರಮಿಸಿದ್ದಾರೆ ಅಲ್ಲದೇ ಸಮಾಜದಲ್ಲಿ ಶಾಂತಿಯಿAದ ನ್ಯಾಯಯುತವಾಗಿ ಬದುಕಲು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಎಲ್ಲರೂ ನಡೆದರೇ ಬದುಕು ಸಾರ್ಥಕವಾಗುವುದು ಎಂದು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಪೀಠದ ಮರಾಠಾ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ ಮಹಾರಾಜರು ಹೇಳಿದರು.
ತಾಲೂಕಿನ ಆಸಂಗಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಬೃಹತ್ ಕಂಚಿನ ಪ್ರತಿಮೆ ಲೋಕಾರ್ಪಣೆ ಸಂದರ್ಭ ನಡೆದ ಶಿವಾಜಿ ಮಹಾರಾಜರ ಚಿಂತನ ಕರ‍್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಹಿಂದೂ ಸಮಾಜದ ಮೇಲಿನ ದಾಳಿಗಳಿಗೆ ಪ್ರತಿರೋಧ ತೊರುವ ಮೂಲಕ ಹಿಂದೂ ಸಂಸ್ಕೃತೀ ರಕ್ಷಣೆ ಮಾಡಿದ ಇತಿಹಾಸ ಪುರುಷ ಛತ್ರಪತಿ ಶಿವಾಜಿ ಮಹಾರಾಜರಾಗಿದ್ದು ಹಿಂದೂಗಳಿಗೆ ಸ್ಪೂರ್ತಿಯಾಗಿದ್ದಾರೆಂದರು.
ಮಂಡ್ಯದ ವಿವೇಕ ಶೀಕ್ಷಣ ವಾಹಿನಿಯ ನಿತ್ಯಾನಂದ ವಿವೇಕವಂಶಿ ಮಾತನಾಡಿ ಶಿವಾಜಿ ಮಹಾರಾಜರು ತಾಯಿ ಜೀಜಾಬಾಯಿ ಮಾರ್ಗದರ್ಶನ ಮತ್ತು ತುಕಾರಾಮ ಅವರ ಪ್ರಭಾವದಿಂದ ಪ್ರೇರಣೆ ಪಡೆದಿದ್ದರು ಪ್ರಸ್ತುತ ಅವರ ಚಿಂತನೆಗಳು ಪ್ರತಿಯೊಬ್ಬರಿಗೂ ದಾರಿ ದೀಪವಾಗಿವೆ ಎಂದ ಅವರು ದೇಶ ಹಾಗೂ ಧರ್ಮಕ್ಕಾಗಿ ಸಂಘಟನೆ ಕೈಗೊಂಡ ಶಿವಾಜಿ ಪರಾಕ್ರಮಿ ಹೋರಾಟಗಾರರು ಎಂದು ಬಣ್ಣಿಸಿದರು.
ಮರಾಠಾ ಸಮಾಜದ ಜಿಲ್ಲಾಧ್ಯಕ್ಷ ಸಿದ್ದು ದಿವಾಣ, ಪರಶುರಾಮ ಗಾಯಕವಾಡ, ಮೋಹನ ಜಾಧವ ಸೇರಿದಂತೆ ಮೊದಲಾದವರು ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.


Leave a Comment