
ಜೋಯಿಡಾ –
ಜೋಯಿಡಾ ತಾಲೂಕಿನ ರಾಮನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಕಾಣಿಸುತ್ತಿದ್ದು,ಕಸ ಹಾಕುವ ತೊಟ್ಟಿಗಳು ತುಂಬಿ ತುಳುಕುತ್ತಿದ್ದರು ಸರಿಪಡಿಸುವ ಅಧಿಕಾರಿಗಳು ಮಾತ್ರ ಸುಮ್ಮನೆ ಕುಳಿತಿರುವುದು ಸಾರ್ವಜನಿಕ ವಲಯದಲ್ಲಿ ಬೇಸರ ಮೂಡಿಸಿದೆ.
ಹಲವಾರು ವರ್ಷಗಳಿಂದಲೂ ಇಲ್ಲಿ ಇದೇ ಸಮಸ್ಯೆ ಇದ್ದು, ಗೋವಾ – ರಾಮನಗರ ಹೆದ್ದಾರಿ ಪಕ್ಕದಲ್ಲಿ ಕಸದ ರಾಶಿಗಳು ಇದ್ದು ,ರಾಮನಗರದ ಶಿವಾಜಿ ಸರ್ಕಲ ಬಳಿ ಕಸದ ತೊಟ್ಟಿಗಳು ತುಂಬಿದರು ಸಂಭಂದಪಟ್ಟ ಅಧಿಕಾರಿಗಳು ಕ್ಯಾರೆ ಮಾಡದಿರುವುದು ಅವರ ನಿರ್ಲಕ್ಷ್ಯ ವನ್ನು ಏತ್ತಿ ತೋರಿಸುತ್ತಿದೆ.
ಪ್ಲಾಸ್ಟಿಕ್ ನಿಷೇದ ರಾಮನಗರದಲ್ಲಿ ಇಲ್ಲವೇ –
ರಾಮನಗರದಲ್ಲಿ ಪ್ಲಾಸ್ಟಿಕ್ ನಿಷೇದ ಇಲ್ಲವೇ ? ರಾಜ್ಯಾದಂತ ಪ್ಲಾಸ್ಟಿಕ್ ನಿಷೇದ ಖಾಯಿದೆ ಜಾರಿಯಲ್ಲಿದ್ದರೂ ರಾಮನಗರದಲ್ಲಿ ಮಾತ್ರ ಪ್ಲಾಸ್ಟಿಕ್ ನಿಷೇದ ಕಾಯಿದೆ ಜಾರಿಯಾದಂತಿಲ್ಲ, ಇಲ್ಲಿನ ಕಸದ ತೊಟ್ಟಿಗಳಲ್ಲಿ ಪ್ಲಾಸ್ಟಿಕ್ ಕಸಗಳೇ ಹೆಚ್ಚಾಗಿ ಕಾಣಿಸುತ್ತಿದ್ದು, ಇದರಿಂದ ಇಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇದವಾಗಿಲ್ಲ ಎಂಬುದು ಕಣ್ಣಿಗೆ ಕಾಣುವಂತಿದೆ, ಇಲ್ಲವಾದರೆ ಗ್ರಾ.ಪಂದವರು ಇಲ್ಲಿನ ಕಸದ ತೊಟ್ಟಿ ಖಾಲಿ ಮಾಡದೇ ವರ್ಷಗಳೇ ಕಳೆದಿವೆಯೋ ಗೊತ್ತಿಲ್ಲ ಕಸದ ತೊಟ್ಟಿಯಲ್ಲಿ ಪ್ಲಾಸ್ಟಿಕ್ ಕಸ ಮಾತ್ರ ರಂಗು ರಂಗಾಗಿ ಕಾಣುತ್ತಿದೆ.
ಜಾನುವಾರುಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಕಸ –
ಬೇಕಾಬಿಟ್ಟಿ ಪ್ಲಾಸ್ಟಿಕ್ ಎಸೆಯುದರಿಂದ ,ಪ್ಲಾಸ್ಟಿಕ್ ಗೆ ಅಂಟಿರುವ ಪದಾರ್ಥಗಳನ್ನು ತಿನ್ನಲು ಪಾಪ ದನ,ನಾಯಿ,ಕುರಿಯಂತ ಮೂಕ ಪ್ರಾಣಿಗಳು ಹವಣಿಸುತ್ತಿರುತ್ತವೆ,ಪ್ಲಾಸ್ಟಿಕ್ ನಲ್ಲಿ ಇರುವ ಪದಾರ್ಥ ತಿನ್ನಲು ಹೋಗಿ ಪ್ಲಾಸ್ಟಿಕ್ ನುಂಗುತ್ತವೆ. ಇದರಿಂದ ಪ್ರಾಣಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಸೇರುವ ಸಾಧ್ಯತೆ ಹೆಚ್ಚಿದ್ದು , ಸಂಭಂದ ಪಟ್ಟ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕಿದೆ.
ಒಟ್ಟಾರೆಯಾಗಿ ರಾಮನಗರದಲ್ಲಿ ಕಸ ಸ್ವಚ್ಚತೆ ನಡೆಸಿ ವರ್ಷಗಳೇ ಆದಂತೆ ಕಾಣುತ್ತಿದೆ.
Leave a Comment