• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅವಹೇಳನ – ಕ್ರಮ ಕೈಗೊಳ್ಳುವಂತೆ ಪಕ್ಷಾತೀತವಾಗಿ ಆಗ್ರಹ- ದೂರು ನೀಡಿದ ನಾಯಕರು.

November 20, 2019 by Yogaraj SK Leave a Comment

shivajige avahelana pratibhatane

ಹಳಿಯಾಳ:- ಸಾಮಾಜಿಕ ಜಾಲತಾಣ “ಯುಟ್ಯೂಬ್”ನಲ್ಲಿ ಕಿಡಿಗೇಡಿಗಳು ರಾಷ್ಟ್ರಪುರುಷ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಹಿಂದೂಗಳ ಬಗ್ಗೆ ಅವಹೇಳನಕಾರಿ ಪೊಸ್ಟ್ ಹಾಕಿ ವಿಕೃತಿ ಮೆರೆದಿದ್ದು ಈ ಬಗ್ಗೆ ಮಂಗಳವಾರ ರಾತ್ರಿ ಹಿಂದೂ ಸಮುದಾಯದವರು ಹಾಗೂ ಪಕ್ಷಾತೀತವಾಗಿ ಮುಖಂಡರುಗಳು, ಕಾರ್ಯಕರ್ತರು ಹಳಿಯಾಳ ಪೋಲಿಸ್ ಠಾಣೆ ಎದುರು ಜಮಾಯಿಸಿ ದುಷ್ಕøತ್ಯ ಎಸಗಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿದರು.
ಸಾಮಾಜಿಕ ಜಾಲತಾಣ ಯುಟ್ಯೂಬ್‍ನಲ್ಲಿ “MIYA BHAI SAB KA BAAP” (ಮಿಯಾ ಬಿವಿ ಸಬಕಾ ಬಾಪ) ಎಂದು ಆಂಗ್ಲದಲ್ಲಿ ಬರೆದಿರುವ ಖಾತೆ ಹೊಂದಿರುವ ಅನಾಮಧೆಯ ವ್ಯಕ್ತಿ ಕಳೆದ 6 ದಿನಗಳ ಹಿಂದೆ ಹಳಿಯಾಳದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಡೆದ ಮೇರವಣಿಗೆಯಲ್ಲಿ ಅಶ್ವಾರೂಢ ಶಿವಾಜಿ ಪುಥ್ಥಳಿ ಇರುವ ಶಿವಾಜಿ ವೃತ್ತದ ಬಳಿಯಿಂದ ಸಾಗಿದಾಗ ಹಾಗೂ ಹಿಂದೂ ದೇವಾಲಯದ ಎದುರಿನಿಂದ ಸಾಗಿದ ವಿಡಿಯೋ ತುಣುಕುಗಳನ್ನು ಅಪಲೋಡ್ ಮಾಡಿ ಅದಕ್ಕೆ ರಾಷ್ಟ್ರಪುರುಷ ಶಿವಾಜಿ ಮಹಾರಾಜರ ಹಾಗೂ ಹಿಂದೂಗಳ ಮಾತೆಯರಿಗೆ ಅವಹೇಳನವಾಗುವ ರೀತಿಯಲ್ಲಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ.

shivajige avahelana pratibhatane


ಇದನ್ನು ನೋಡಿದ ಯುವಕರು ತಕ್ಷಣ ಹಿರಿಯ ಗಮನಕ್ಕೆ ತಂದಿದ್ದು ಮಂಗಳವಾರ ರಾತ್ರಿ ಮೊದಲು ಬಿಜೆಪಿ ಪಕ್ಷ, ವಿಶ್ವ ಹಿಂದೂ ಪರಿಷತ್, ಮರಾಠಾ ಸಂಘಟನೆ, ಆರ್.ಎಸ್.ಎಸ್, ಭಜರಂಗದಳ ಸೇರಿದಂತೆ ವಿವಿಧ ಸಂಘಟನೆಯವರು ಹಾಗೂ ಬಳಿಕ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು, ಮರಾಠಾ ಸಮಾಜದವರು, ಹಿಂದೂ ಮುಖಂಡರು ಠಾಣೆಗೆ ಆಗಮಿಸಿ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸಿಕೊಂಡು ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವ ಕಿಡಿಗೇಡಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಲಿಖಿತ ದೂರು ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಜು ಧೂಳಿ, ಸಂತೋಷ ಘಟಕಾಂಬಳೆ, ತಾನಾಜಿ ಪಟ್ಟೇಕರ, ವಿಲಾಸ ಯಡವಿ, ವಿಜಯ ಬೋಬಾಟಿ, ತುಕಾರಾಮ ಪಟ್ಟೇಕರ, ಅಪ್ಪಾರಾವ ಪೂಜಾರಿ, ಶ್ರೀನಿವಾಸ ಘೊಟ್ನೇಕರ, ಕೃಷ್ಣಾ ಶಹಾಪುರಕರ, ಎಲ್.ಎಸ್.ಅರಿಶೀನಗೇರಿ, ಅನಿಲ ಚವ್ವಾಣ, ಶಂಕರ ಬೆಳಗಾಂವಕರ, ಚೂಡಪ್ಪಾ ಬೋಬಾಟಿ, ಅಜೋಬಾ ಕರಂಜೆಕರ, ಸಿದ್ದು ಶೆಟ್ಟಿ ಮೊದಲಾದವರು ಇದ್ದರು.

 shivajige avahelana pratibhatane
 shivajige avahelana pratibhatane

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, Trending Tagged With: MIYA BHAI SAB KA BAAP, ಕಠಿಣ ಕಾನೂನು ಕ್ರಮ, ಕಿಡಿಗೇಡಿಗಳ ವಿರುದ್ದ, ಕಿಡಿಗೇಡಿಗಳು ರಾಷ್ಟ್ರಪುರುಷ ಛತ್ರಪತಿ ಶಿವಾಜಿ ಮಹಾರಾಜರು, ಕ್ರಮ ಕೈಗೊಳ್ಳುವಂತೆ ಪಕ್ಷಾತೀತವಾಗಿ ಆಗ್ರಹ, ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅವಹೇಳನ, ಯುಟ್ಯೂಬ್”ನಲ್ಲಿ, ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವ, ಸಾಮಾಜಿಕ ಜಾಲತಾಣ, ಹಿಂದೂಗಳ ಬಗ್ಗೆ ಅವಹೇಳನಕಾರಿ ಪೊಸ್ಟ್ ಹಾಕಿ ವಿಕೃತಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...