
ಹಳಿಯಾಳ:- ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಜ್ಞಾನ ಕೇಂದ್ರ, ಇಂಗ್ಲೀಷ್ ಕಲಿಕಾ ಕೇಂದ್ರ, ರೈತರಿಗೆ ವೈಜ್ಞಾನಿಕ ಸಲಹೆ ಮಾಹಿತಿ ಕೇಂದ್ರ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲು ಯೋಚಿಸಲಾಗಿದ್ದು ಎಲ್ಲರ ಸಹಕಾರ ಅವಶ್ಯಕವಾಗಿದೆ ಎಂದು ಯಶಸ್ವಿ ಉದ್ಯಮಿ ಹಾಗೂ ಸಮಾಜ ಸೇವಕ ನಾರಾಯಣ ಟೋಸುರ ಹೇಳಿದರು.
ಪಟ್ಟಣದ ಟೋಸರು ಸಂಕೀರ್ಣದಲ್ಲಿರುವ ಪಂ.ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಅಭಿವೃದ್ದಿ ಕೇಂದ್ರ, ಆರ್.ವೈಇ ಸ್ಕೀಲ್ ಸೆಂಟರ್ನಲ್ಲಿ ತಾಲೂಕಿನ ಶಿಕ್ಷಕರು ಆಯೋಜಿಸಿದ ಸಾಧಕರಿಗೆ ಸನ್ಮಾನ ಹಾಗೂ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಿದ್ದರೇ ನಿರ್ದಿಷ್ಟ ಗುರಿ ಹೊಂದಿರಬೇಕು. ಸತತ ಪರಿಶ್ರಮ, ಮಾಡಬೇಕೆಂದಿರುವ ಕಾರ್ಯದಲ್ಲಿ ಶ್ರದ್ದೆ, ಪ್ರಾಮಾಣಿಕತೆ ಹಾಗೂ ತಾಳ್ಮೆಯು ಅತ್ಯಗತ್ಯವಾಗಿದೆ ಎಂದರು. ಪ್ರತಿಯೊಬ್ಬರಿಗೂ ಸಮಯ ಪ್ರಜ್ಞೆ ಜೊತೆಗೆ ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು ನಾವು ಗಳಿಸುವ ಹಣದಲ್ಲಿ ಸಮಾಜಕ್ಕೂ ಒಂದು ಪಾಲು ನೀಡಬೇಕು ಎಂದ ಟೊಸುರ ಸಮಾಜ ಸೇವೆಯು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾದರೇ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದು ಪ್ರತಿಪಾದಿಸಿದರು.
ಪ್ರಸ್ತುತ ಆಧುನಿಕ ಯುಗದಲ್ಲಿ ಪಾಶ್ಚಾತ್ಯ ಸಂಸ್ಕøತಿಗೆ ಮಾರು ಹೊಗುತ್ತಿರುವ ಇಂದಿನ ಮಕ್ಕಳಿಗೆ ಬಾಲ್ಯದಿಂದಲೇ ಭಾರತೀಯ ಸಂಸ್ಕøತಿ ಹಾಗೂ ಶಿಸ್ತನ್ನು ಕಲಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಳಿಯಾಳದ ಆರ್ವೈಇ ಸ್ಕೀಲ್ ಸೆಂಟರ್ ಸಂಸ್ಥೆಯಿಂದ ಉಚಿತವಾಗಿ ತರಬೇತಿ ಪಡೆದ ಒಂದು ಸಾವಿರಕ್ಕೂ ಹೆಚ್ಚು ಯುವಕ-ಯುವತಿಯರು ಸದ್ಯ ಉದ್ಯೋಗ ಹೊಂದಿ ಉತ್ತಮ ಜೀವನ ನಡೆಸುತ್ತಿರುವುದು ನಮಗೆ ಸಂತಸ ತಂದಿದೆ ಎಂದ ಸಂಸ್ಥೆಯ ಸಂಸ್ಥಾಪಕರು ಆಗಿರುವ ನಾರಾಯಣ ಟೋಸುರ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜ ಸೇವೆಯೇ ನಮ್ಮ ಗುರಿಯಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಜ್ಞಾನ ಕೇಂದ್ರ, ಇಂಗ್ಲೀಷ್ ಕಲಿಕಾ ಕೇಂದ್ರ, ರೈತರಿಗೆ ವೈಜ್ಞಾನಿಕ ಸಲಹೆ ಮಾಹಿತಿ ಕೇಂದ್ರ ಇಲ್ಲಿ ರೈತರಿಗೆ ತಂತ್ರಜ್ಞರೊಂದಿಗೆ ಸಂಪರ್ಕ ಕಲ್ಪಿಸಿ ಉಚಿತ ಸಲಹೆ-ಮಾಹಿತಿಗಳನ್ನು ನೀಡುವ ಮೂಲಕ ಅವರು ಉತ್ತಮ ಫಸಲು ತೆಗೆಯಲು ಅನುಕೂಲ ಕಲ್ಪಿಸುವುದು ಸೇರಿದಂತೆ ಇನ್ನಿತರ ಮಹತ್ವದ ಯೋಜನೆಗಳನ್ನು ಯಾವುದೇ ರಾಜಕೀಯವನ್ನು ಬೆರೆಸದೆ ತಮ್ಮ ಸಂಸ್ಥೆಯಿಂದ ಹಾಗೂ ಸ್ವಂತ ಖರ್ಚಿನಲ್ಲೇ ಮಾಡಬೇಕೆನ್ನುವ ಮುಂದಾಲೋಚನೆ ತಮ್ಮದಾಗಿದ್ದು ಎಲ್ಲರ ಸಲಹೆ-ಸಹಕಾರ ಕೊರಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಠ್ಠಲ ಬೊರೆಕರ ಹಾಗೂ ಶಿಕ್ಷಕ ಸುರೇಂದ್ರ ಬಿರ್ಜೆ ಮಾತನಾಡಿ ನಾರಾಯಣ ಟೋಸುರ ಅವರ ಸಾಮಾಜಿಕ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. ಗ್ರಾಮೀಣ ಭಾಗದ ಬಡ ಹಾಗೂ ನಿರುದ್ಯೋಗಿ ಯುವಕರಿಗೆ, ರೈತರಿಗೆ ಅನುಕೂಲವಾಗಲು ಹಲವು ಯೋಜನೆಗಳನ್ನು ರೂಪಿಸಿದ್ದು ಶ್ಲಾಘನೀಯವಾಗಿದ್ದು ತಮ್ಮೇಲ್ಲರ ಸಹಕಾರ ಸದಾ ಇರುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶೀಕ್ಷಕರಾದ ಭಾರತಿ ನಲವಡೆ, ಅರ್ಜುನ ಗುರವ, ಡಿಎಚ್ ಅರಿಶೀನಗೇರಿ, ಗೀತಾ ಹೊಸುರ, ವಿಠ್ಠಲ ಕೊರ್ವೆಕರ, ನಿಂಗಪ್ಪ ದೊಡಮನಿ, ಗುಲಾಬಿ ಗುರವ, ಆನಂದ ತೊರ್ಲೆಕರ, ವಿ.ಆರ್.ಖವರಿ, ಕೇದಾರಿ ದೇವರಮನಿ, ಪಾಂಡುರಂಗ ಮಿರಾಶಿ, ಗೋಪಾಲ ತೊರ್ಲೆಕರ ಮತ್ತು ಸಂಸ್ಥೆಯ ರಾಘವೇಂದ್ರ ಸಾಂಬ್ರೆಕರ ಇದ್ದರು.
Leave a Comment