
ಹಳಿಯಾಳ;- ಸರಕಾರಿ ಶಿವಾಜಿ ಪದವಿ ಕಾಲೇಜ್, ಆರೋಗ್ಯ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಳಿಯಾಳ ತಾಲೂಕಾ ಮಟ್ಟದ ವಿಶ್ವ ಏಡ್ಸ ದಿನಾಚಾರಣೆ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಜಾಥಾ ನಡೆಸಿ ಜನಜಾಗೃತಿ ಮೂಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಪಟ್ಟಣದ ಸರಕಾರಿ ಶಿವಾಜಿ ಪದವಿ ಪೂರ್ವ ಕಾಲೇಜ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕಾ ಆರೋಗ್ಯಾಧಿಕಾರಿ ಡಾ|| ರಮೇಶ ಕದಂ ಉಧ್ಘಾಟಿಸಿ ಮಾತನಾಡಿ ಎಚ.ಐ.ವ್ಹಿ. ಏಡ್ಸ ಹರಡುವ ರೀತಿ, ರೋಗ ಲಕ್ಷಣಗಳು ಮತ್ತು ಚಿಕಿತ್ಸೆ ಕುರಿತು ವಿವರಿಸಿದರು.
ತಾಪಂನ ನರೇಗಾ ಸಹಾಯಕ ನಿರ್ದೇಶಕ ಪರಶುರಾಮ ಗಸ್ತಿ ಮಾತನಾಡಿ ದೇಶದ ನಿಜವಾದ ಸಂಪತ್ತು ಆರೋಗ್ಯವಂತ ಸಮಾಜವಾಗಿದ್ದು ಪ್ರತಿಯೊಬ್ಬರು ಏಡ್ಸ ರೋಗದ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದರು ಅಲ್ಲದೇ ವೈಜ್ಞಾನಿಕ ಅವಿಷ್ಕಾರಗಳನ್ನು ಒಳ್ಳೆ ಪ್ರಗತಿಗೆ ಬಳಸಿಕೊಳ್ಳುವಂತೆ ಕರೆ ನೀಡಿದರು.
ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರವಿನಕುಮಾರ ಸಾಲಿ ಮಾತನಾಡುತ್ತಾ ಎಚ್.ಐ.ವ್ಹಿ ಸೋಂಕನ್ನು ತಡೆಗಟ್ಟಲು ಸಮುದಾಯಗಳು ಬದಲಾವಣೆ ಉಂಟುಮಾಡುವ ಶಕ್ತಿಯನ್ನು ಹೊಂದಿವೆ ಆದ್ದರಿಂದ ಈ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ವಿಠ್ಠಲ ಭೊವಿ, ಮುಖ್ಯೋಪಾದ್ಯಾಯ ವಿಷ್ಣು ನಾಯ್ಕ, ಪ್ರಾ ಆ ಕೇಂದ್ರಗಳ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂಧಿಗಳು, ಆಶಾ ಕಾರ್ಯಕರ್ತೆಯರು ಹಾಗೂ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ ಜಿ ಮಾನೆ ಇದ್ದರು.
Leave a Comment