
ಹಳಿಯಾಳ:- ಹಳಿಯಾಳ ತಾಲೂಕ ವಾರಕರಿ ಸಂಘ ಹಾಗೂ ಸದ್ಬಕ್ತರ ಆಶ್ರಯದಲ್ಲಿ 32ನೇ ವರ್ಷದ ಪಂಡರಪೂರ ಪಾದಯಾತ್ರೆಯ ಸಾಧನಾ ಫಲವಾಗಿ ಪಟ್ಟಣದ ಬೆಳಗಾಂವ ರಸ್ತೆಯಲ್ಲಿರುವ ಗಣೇಶ ನಗರ(ಗುತ್ತಿಗೇರಿ)ಯಲ್ಲಿ ನಿರ್ಮಿಸಿದ ಮಂದಿರದಲ್ಲಿ ಅಖಂಡ ಹರಿನಾಮ ಸಪ್ತಾಹ ಗ್ರಂಥರಾಜ ಶ್ರೀ ಜ್ಞಾನೇಶ್ವರಿ ಹಾಗೂ ಮಂಚರಿ ಪಾರಾಯಣ ಸೋಹಳಾ ಕಾರ್ಯಕ್ರಮ ಅತ್ಯಂತ ಶೃದ್ದಾಭಕ್ತಿಯಿಂದ ಜರುಗುತ್ತಿದೆ.
ಈಗಾಗಲೇ ಆರಂಭವಾಗಿರುವ ಜ್ಞಾನೇಶ್ವರಿ ಪರಾಯಣ ಹಾಗೂ ಪ್ರವಚನ ಕಾರ್ಯಕ್ರಮಗಳು ದಿ.6 ಶುಕ್ರವಾರದ ವರೆಗೆ ನಡೆಯಲಿವೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಪ್ರಸಿದ್ದ ಸುಕ್ಷೇತ್ರ ಪಂಡರಪೂರದ ಹಬಪ ಪ್ರಸಾದ ವಿವೇಕಾನಂದ ವಾಸ್ಕರ(ಬಾವು ಮಾಲಕ), ಹಬಪ ಕೌಸ್ತುಬ ವಿವೇಕಾನಂದ ವಾಸ್ಕರ(ರಾವು ಮಾಲಕ), ಹಬಪ ದೇವವೃತ ವಿವೇಕಾನಂದ ವಾಸ್ಕರ(ರಾಣು ಮಾಲಕ) ಮಹಾರಾಜರ ಆದಿಷ್ಠಾನದಲ್ಲಿ ಸತತ 7 ದಿನಗಳ ಕಾಲ ನಡೆಯಲಿರುವ ಈ ಆಧ್ಯಾತ್ಮೀಕ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಸಂತರು ಪಾಲ್ಗೊಳ್ಳುತ್ತಿದ್ದಾರೆ.
ದಿನ ನಿತ್ಯದ ಕಾರ್ಯಕ್ರಮಗಳ ವಿವರ :- ಬೆಳಿಗ್ಗೆ 4ರಿಂದ 6 ವರೆಗೆ ಕಾಕಡಾರತಿ, 7ರಿಂದ 12 ಶ್ರೀ ಜ್ಞಾನೇಶ್ವರ ಗ್ರಂಥ ಪರಾಯಣ, 3ರಿಂದ 4ರ ವರೆಗೆ ಮಂಚರಿ ಭಜನೆ, 4ರಿಂದ 5 ಹರಿಪಾಠ, 6ರಿಂದ 7 ಪ್ರವಚನ, 7ರಿಂದ 9ಗಂಟೆವರೆಗೆ ಕೀರ್ತನೆ ಹಾಗೂ ರಾತ್ರಿ 11 ಗಂಟೆಯಿಂದ ಬೆಳಗ್ಗಿನ 4 ಗಂಟೆಯವರೆಗೆ ಜಾಗರ ಭಜನೆ ಕಾರ್ಯಕ್ರಮಗಳು ಅತ್ಯಂತ ಶೃದ್ದಾಭಕ್ತಿಯಿಂದ ನಡೆಯುತ್ತಿವೆ.
ಆಳಂದಿಯ ಪ್ರಖ್ಯಾತ ಗಾಯಕರಾದ ಹಬಪ ಬಂಡು ಅಪ್ಪಾ ಸಾವಂತ, ಹುಲಿಕೇರಿಯ ಹಬಪ ಪಿಂಟೂ ಭಜಂತ್ರಿ ಇವರಿಂದ ಪ್ರತಿನಿತ್ಯ ರಾತ್ರಿ ಕಿರ್ತನದಲ್ಲಿ ಗಾಯನ ಕಾರ್ಯಕ್ರಮ ನಡೆಯುತ್ತಿವೆ.
ದಿ.2 ರಂದು ಗೋಕಾಕನ ಹಬಪ ಪುಂಡ್ಲಿಕ ಬೆಣಚಮರಡಿ ಅವರಿಂದ ಕನ್ನಡ ಕಿರ್ತನೆ, ದಿ.3 ರಂದು ಆಳಂದಿಯ ಹಬಪ ಆನಂದ ಜಾಧವ ಅವರಿಂದ ಕಿರ್ತನೆ ಹಾಗೂ ಹಲವು ಗ್ರಾಮಗಳ ಭಜನಾ ಮಂಡಳಗಳಿಂದ ಜಾಗರಣೆ ಕಾರ್ಯಕ್ರಮ ನಡೆಯಿತು. ದಿ.4 ಬುಧವಾರದಂದು ಕೊಲ್ಲಾಪುರದ ಔಚಿತವಾಡಿಯ ಹಬಪ ಪಾಂಡುರಂಗ ಉಪಲಾನಿ ಅವರಿಂದ ಕಿರ್ತನೆ ಕಾರ್ಯಕ್ರಮ ನಡೆಯಲಿದೆ.
ದಿ. 6 ರಂದು ದಶಮಿ ಕಾಲಾ ಕಿರ್ತನೆ ನಂತರ ಮಹಾಪ್ರಸಾದ ಹಾಗೂ ನಗರ ಪ್ರದಕ್ಷಿಣೆ ಕಾರ್ಯಕ್ರಮ ಮತ್ತು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಪಿಠದ ಮರಾಠಾ ಜಗದ್ಗುರು, ವೇದಾಂತಾಚಾರ್ಯರಾದ ಮಂಜುನಾಥ ಮಹಾರಾಜರಿಂದ ಆಶೀರ್ವಚನ ನೆರವೆರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Leave a Comment