
ಖಾನಾಪುರ :- ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ತಹಸೀಲ್ದಾರ ಕಚೇರಿ ಎದುರು ತಾಲ್ಲೂಕಿನ ವಿವಿಧ ಸಂಘಟನೆಯ ಪದಾಧಿಕಾರಿಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲುಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಹಲಸಿ ಗ್ರಾಮದ ಕದಂಬ ರಾಜ ಮನೆತನದ ಆಳ್ವಿಕೆಯ ಕಾಲದ ಪುರಾತನ ದೇವಾಲಯಗಳು ಇನ್ನಿತರ ಸ್ಮಾರಕಗಳು ಸರಕಾರದ ದಿವ್ಯ ನಿರ್ಲಕ್ಷ್ಯತೆಯಿಂದ ಹಾಳು ಕೊಂಪೆಯಾಗಿ ಪರಿವರ್ತನೆ ಆಗ್ತಾ ಇದೆ ಮತ್ತು ಸರಕಾರದಿಂದ ಈ ಹಿಂದೆ ಆಚರಿಸಲಾದ ಕದಂಬೋತ್ಸವ ಸ್ಥಗಿತಗೊಳಿಸಿದ ಕಾರಣ ಸಂಘಟನಾಕಾರರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು .
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮವು ಕದಂಬರ ರಾಜ ಮನೆತನದ ಎರಡನೆಯ ರಾಜಧಾನಿಯಾಗಿದ್ದು ಇಲ್ಲಿ ಕದಂಬರ ಕಾಲದಲ್ಲಿ ನಿರ್ಮಾಣವಾದ ಪುರಾತನ ದೇವಾಲಯಗಳು .ಗ್ರಾಮದಲ್ಲಿ ಪ್ರಾಚೀನ ಕನ್ನಡದ ರಾಜ ಮನೆತನ ಕದಂಬ ದೊರೆಗಳ ಗತ ವೈಭವವನ್ನು ಇಂದಿಗೂ ಕೂಡಾ ಸಾರುತ್ತಿವೆ .ಈ ಕಾರಣದಿಂದ ಹಲಸಿ ಗ್ರಾಮವು ಇತಿಹಾಸದ ಪುಟಗಳಲ್ಲಿ ಸೇರ್ಪಡೆಯಾಗಿದೆ .ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮವನ್ನು ಪ್ರವಾಸಿ ಕೇಂದ್ರವನ್ನಾಗಿ ಘೋಷಣೆ ಮಾಡಿರುತ್ತವೆ . ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಕದಂಬರ ವಾಸ್ತು ಶಿಲ್ಪ ಕಲೆಗಳು ಮನಮೋಹಕವಾಗಿ ದ್ದರಿಂದ ಗ್ರಾಮಕ್ಕೆ ದಿನಂಪ್ರತಿ ದೇಶ ವಿದೇಶಗಳಿಂದ ಹಾಗೂ ರಾಜ್ಯದಿಂದ ಅಧ್ಯಯನಕ್ಕೆ ಹಾಗೂ ವಾಸ್ತುಶಿಲ್ಪವನ್ನು ಕಾಣಲು ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಾರೆ .ಕದಂಬರ ದೊರೆಗಳ ಸ್ಮರಣೆಗೋಸ್ಕರ ಈ ಹಿಂದೆ ಗ್ರಾಮಸ್ಥರು ಕಿತ್ತೂರು ಉತ್ಸವ ಹಾಗೂ ಹಂಪಿ ಉತ್ಸವಗಳ ಮಾದರಿಯಲ್ಲಿ ಹಲಸಿ ಗ್ರಾಮದಲ್ಲಿ ಪ್ರತಿ ವರ್ಷ ಕದಂಬೋತ್ಸವ ಆಚರಿಸುವಂತೆ ಸರಕಾರಕ್ಕೆ ಮನವಿ ಮಾಡಿಕೊಂಡಾಗ ಸರ್ಕಾರವು ಎರಡು ವರ್ಷಗಳ ಕಾಲ ಗ್ರಾಮದಲ್ಲಿ ಕದಂಬ ರಾಜಮನೆತನದ ಸ್ಮರಣೆಗೋಸ್ಕರ ಸರ್ಕಾರದ ವತಿಯಿಂದ ಕದಂಬೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದರ ಮುಖಾಂತರ ಗಡಿ ಭಾಗದಲ್ಲಿ ಕನ್ನಡದ ಹಾಗೂ ಕನ್ನಡಿಗರ ಹಿತರಕ್ಷಣೆಯನ್ನು ಕಾಪಾಡುವ ಕೆಲಸ ಮಾಡಿತ್ತು .ಮತ್ತು ಉತ್ಸವವನ್ನು ಪ್ರತಿ ವರ್ಷ ನಡೆಸುವುದಾಗಿ ಆದೇಶ ಮಾಡಿರುವ ಸರ್ಕಾರದ ನಿರ್ಧಾರದಿಂದ ರಾಜ್ಯದ ಗಡಿ ಭಾಗದ ಸಾಹಿತಿಗಳಿಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪದಾಧಿಕಾರಿಗಳಿಗೂ ಹಾಗೂ ಕನ್ನಡ ಪರ ಸಂಘಟನೆಗಳು ಹಾಗೂ ಇತಿಹಾಸ ತಜ್ಞರಿಗೆ ಮತ್ತು ತಾಲೂಕಿನ ಜನತೆಗೆ ವಿಷಯವು ಸಂತೋಷದಾಯಕವಾಗಿತ್ತು.ಅಲ್ಲದೆ ಗಡಿ ಭಾಗದಲ್ಲಿ ಕನ್ನಡ ಬೆಳೆಸಿ ಉಳಿಸಲು ಸಾಕ್ಷಿಯಾಗಿತ್ತು .
ಆದರೆ ಸರ್ಕಾರವು ಆದೇಶವನ್ನು ಗಾಳಿಗೆ ತೂರಿ ಈ ಉತ್ಸವವನ್ನು ಸ್ಥಗಿತಗೊಳಿಸಿ ಗಡಿಭಾಗದ ಕನ್ನಡಿಗರಿಗೆ ಹಾಗೂ ಕನ್ನಡಕ್ಕೆ ಅವಮಾನ ಮಾಡಿದ್ದು ಇದರಿಂದ ಜಿಲ್ಲೆ ಹಾಗೂ ತಾಲ್ಲೂಕಿನ ಜನತೆಗೆ ತೀವ್ರ ಬೇಸರ ಉಂಟಾಗಿ .ಸರ್ಕಾರದ ಈ ಕ್ರಮವನ್ನು ಖಂಡಿಸಿ ಈ ಖಂಡಿಸಿ ಇಂದು
ತಾಲ್ಲೂಕಿನ ತಹಶೀಲ್ದಾರ್ ಕಚೇರಿ ಎದುರು ತಾಲ್ಲೂಕಿನ ವಿವಿಧ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು . ಇನ್ನು ಮುಂದೆ ಸರ್ಕಾರವು ಗ್ರಾಮವನ್ನು ಅಭಿವೃದ್ಧಿಪಡಿಸಿ ಗ್ರಾಮದಲ್ಲಿ ಕಿತ್ತೂರು ಉತ್ಸವ ಹಂಪಿ ಉತ್ಸವ ಹಾಗೂ ಸಂಗೊಳ್ಳಿ ರಾಯಣ್ಣನ ಉತ್ಸವ ಮಾದರಿ ಪ್ರತಿ ವರ್ಷ ತಪ್ಪದೆ ಕದಂಬೋತ್ಸವವನ್ನು ಆಚರಿಸುವುದಾಗಬೇಕೆಂದು ತಹಶೀಲ್ದಾರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿಮಾಧ್ಯಮಗಳೊಂದಿಗೆ ಮಾತನಾಡಿದ ಗಡಿನಾಡು ಹಿತರಕ್ಷಣಾ ವೇದಿಕೆಯ ರಾಜ್ಯದ ಪ್ರಧಾನ ಕಾರ್ಯದರ್ಶಿಯಾದ ರಾಜುಬಾಯ ಅವರು .ಸಿ ಗ್ರಾಮದಲ್ಲಿ ಕದಂಬರ ಆಳ್ವಿಕೆಯಲ್ಲಿ ನಿರ್ಮಾಣವಾದ ಪುರಾತನ ದೇವಾಲಯಗಳು ಹಾಗೂ ಇನ್ನಿತರ ಸ್ಮಾರಕಗಳು ಸರ್ಕಾರದ ನಿರ್ಲಕ್ಷ್ಯತೆಯಿಂದ ಹಾಳು ಕೊಂಪೆಯಾಗಿ ಮಾರ್ಪಡುತ್ತಿವೆ.ಮತ್ತು ಗ್ರಾಮದಲ್ಲಿ ಕದಂಬರ ಕಾಲದಲ್ಲಿ ನಿರ್ಮಾಣವಾದ ಭವ್ಯವಾದ ಸುಂದರ ಕಲಾಕೃತಿಯ ಕದಂಬರ ವಾಸ್ತುಶಿಲ್ಪ ಒಳಗೊಂಡ ರಥ ಸಿತಲಾ ಅವಸ್ಥೆ .ಗೊಂಡು ಸಂಪೂರ್ಣ ನಶಿಸಿ ಹೋಗಿರುತ್ತದೆ ಕಾರಣ ಐತಿಹಾಸಿಕ ಭವ್ಯವಾದ ರಥವನ್ನು ಹೊಸದಾಗಿ ನಿರ್ಮಾಣ ಮಾಡುವದು ಅನಿವಾರ್ಯವಾಗಿ. ಗ್ರಾಮಸ್ಥರು ಈಗಾಗಲೇ ನೂತನವಾಗಿ ಪುರಾತನ ಮಾದರಿಯಲ್ಲಿಯೇ ಭವ್ಯ ರಥ ನಿರ್ಮಿಸುವ ಕಾರ್ಯವನ್ನು ಪ್ರಾರಂಭ ಮಾಡಿದ್ದು . ಈ ನಿರ್ಮಾಣ ಕಾರ್ಯದಲ್ಲಿ ಸರ್ಕಾರ ಕೈಜೋಡಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಅರ್ಥಪೂರ್ಣವಾಗಿ ಕದಂಬೋತ್ಸವ ಆಚರಣೆ ಮಾಡುವುದಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು
ಮತ್ತು ಹೊಸದಾಗಿ ನಿರ್ಮಾಣ ಮಾಡುವ ರಥದ ಕಾರ್ಯಕ್ಕೆ ಸಾರ್ವಜನಿಕರು ಕೂಡ ತಮ್ಮ ಧನಸಹಾಯವನ್ನು ದೇವಸ್ಥಾನದ ಖಾತೆ ನಂಬರ್ 89032829462 IFC CODE NO KVGB0002605 ಖಾತೆಯಲ್ಲಿ ಜಮೆ ಮಾಡುವುದರ ಮುಖಾಂತರ ಈ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿಕೊಂಡರು
ಈ ಸಂದರ್ಭದಲ್ಲಿ ಗಡಿನಾಡು ಹಿತರಕ್ಷ ಣೆ ಅಧ್ಯಕ್ಷರಾದ ಬಸವರಾಜ ಭಂಗಿ .ಅಖಿಲ ಭಾರತ ದಲಿತ ಯುವ ಸಂಘಟನೆ ತಾಲ್ಲೂಕಿನ ಅಧ್ಯಕ್ಷರಾದ ಎನ್ ಸಿ ತಳವಾರ .ಬಹುಜನ ಸಮಾಜವಾದಿ ಪಕ್ಷದ ತಾಲ್ಲೂಕಿನ ಅಧ್ಯಕ್ಷರಾದ ನಾರಾಯಣ ಚಲವಾದಿ .ಹಾಗೂ ದೇವಸ್ಥಾನದ ಟ್ರಸ್ಟ್ ಕಮೀಟಿ ಅಧ್ಯಕ್ಷರಾದ ಶ್ರೀಕಾಂತ್ ಗುರವ.ವಾಸುದೇವ ತಳವಾರ. ಪ್ರದೀಪ್ ಪತ್ತೇದಾರ ವಿಠ್ಠಲ್ ಕೋಲ್ಕಾರ್ . ಬಸವರಾಜ ಮಾದಾರ .ಪುಂಡಲಿಕ ಕಾಮತಿ ಸಂಜಯ್ ಕಾಮತಿಮುಂತಾದವರು ಹಾಜರಿದ್ದರು .

Leave a Comment