
ಗೋಕರ್ಣ:- ಇಲ್ಲಿನ ಮೊಡರ್ನ ಎಜ್ಯುಕೇಶನ ಟ್ರಸ್ಟನ ಪ್ರಸಿದ್ಧ ವಿದ್ಯಾಸಂಸ್ಥೆಯಾದ ಶ್ರೀ ರಾಘವೇಶ್ವರ ಭಾರತಿ ಶಾಲೆಯನ್ನು ವಿಕ್ಷಿಸಿ, ಇಲ್ಲಿಯ ಗೋಕರ್ಣ ಸಮೀಪದ ರುದ್ರಪಾದ ಊರಿನಲ್ಲಿ ಕೆಲವು ತಿಂಗಳ ಕಾಲ ವಾಸಿಸಲು ಬಂದ ವಿದೇಶಿಯರಾದ ಜರ್ಮನಿ ಮೂಲದವರಾದ ಇರಿಸ್ ಹಾಗೂ ಡ್ರಿಕ್ ದಂಪತಿಗಳು ರಾಘವೇಶ್ವರ ಭಾರತಿ ಶಾಲೆಯಲ್ಲಿನ ಸುಂದರವಾದ ಪರಿಸರ, ಬೃಹದಾಕಾರದ ಶಾಲಾ ಕಟ್ಟಡ, ಆಟದ ಮೈದಾನ, ಮಕ್ಕಳ ಶಿಸ್ತು ಹಾಗೂ ಇನ್ನಿತರ ಚಟುವಟಿಕೆಗಳನ್ನು ವಿಕ್ಷಿಸಿ ಮನಸೂರೆಗೊಂಡು ಶಾಲೆಗೆ ಒಮ್ಮೆ ಬೇಟಿನೀಡಿ ತಮ್ಮ ತಾಯಿನಾಡಿನಿಂದ ತಂದ ಎರಡು ಸೈಕಲ್ ನ್ನು ಈ ಶಾಲೆಯ ಮಕ್ಕಳಿಗೆ ಉಪಯೋಗವಾಗುವಂತೆ ಕೊಡುಗೆ ನೀಡಿದ್ದಾರೆ.ಶಾಲೆಯ ಅಭಿವೃದ್ಧಿಯ ಮೆಚ್ಚುಗೆಯನ್ನು ಕಂಡು,ಪ್ರೀತಿ ವಿಶ್ವಾಸವನ್ನು ತೋರಿ ಸೈಕಲ ಕೊಡುಗೆ ನೀಡಿದ ಇರಿಸ್ ಹಾಗೂ ಡ್ರಿಕ್ ದಂಪತಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಸಂತೋಷ ನಾಯಕ ತೊರ್ಕೆ, ಉಪಾಧ್ಯಕ್ಷರಾದ ನಾಗೇಂದ್ರ ಶೇಟ್, ಮೆನೆಜಿಂಗ್ ಟ್ರಸ್ಟಿಗಳಾದ ಡಾ. ಎಂ.ಡಿ.ನಾಯ್ಕ, ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕವೃಂದದವರು ಹಾಗೂ ಮುದ್ದು ಮಕ್ಕಳು ಅಭಿನಂದಿಸಿರುತ್ತಾರೆ.
Leave a Comment