
ಹಳಿಯಾಳ :- ಕೆಎಸ್ ಆರ್ಟಿಸಿ ಚಾಲಕನ ಅತಿವೇಗ ಹಾಗೂ ನೀರ್ಲಕ್ಷ್ಯತನದಿಂದ ಸಂಭವಿಸುತ್ತಿದ್ದ ದೊಡ್ಡ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು ಪುರಸಭೆ ಸದಸ್ಯನೊರ್ವ ಹಾಗೂ ಆತನ ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶನಿವಾರ ಮಧ್ಯಾಹ್ನ ಹಳಿಯಾಳದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಹಳಿಯಾಳದ ಪುರಸಭೆಯ ಬಿಜೆಪಿಯ ಚುನಾಯಿತ ಸದಸ್ಯ ಚಂದ್ರಕಾಂತ ಕಮ್ಮಾರ ಅವರ 4 ವರ್ಷದ ಪುತ್ರ ಶ್ಲೋಕನೊಂದಿಗೆ ಹಳಿಯಾಳ ಬಸ್ ನಿಲ್ದಾಣಕ್ಕೆ ಬಂದು ಬೆಳಗಾವಿ ಹೊಗುವ ಬಸ್ಗೆ ಪಾರ್ಸೆಲ್ ಒಂದನ್ನು ನೀಡಿ ಬಸ್ ನಿಲ್ದಾಣದಿಂದ ಹೊರಗೆ ಬರುವಾಗ ತಿರುವಿನಲ್ಲಿ ಇನ್ನೇನು ದಾಟಬೇಕು ಎನ್ನುವಷ್ಟರಲ್ಲಿ ಹೊರಗಡೆಯಿಂದ ಅತಿ ವೇಗವಾಗಿ ಬಂದ ಬಸ್ ಚಂದ್ರಕಾಂತ ಅವರಿಗೆ ನೇರವಾಗಿ ಡಿಕ್ಕಿ ಹೊಡೆಯುವುದರಲ್ಲಿತ್ತು ಆಗ ತಕ್ಷಣ ಎಚ್ಚೆತ್ತುಕೊಂಡ ಕಮ್ಮಾರ್ ಬೈಕ ಅನ್ನು ಪಕ್ಕದ ಚರಂಡಿಗೆ ಇಳಿಸಿದ್ದರಿಂದ ಬೈಕ್ ಜಖಂ ಆಗಿದ್ದು ಅವರಿಗೆ ಹಾಗೂ ಮಗನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಒಂದಾನುವೇಳೆ ಬಸ್ ನೇರವಾಗಿ ಡಿಕ್ಕಿ ಹೊಡೆದಿದ್ದರೇ ದೊಡ್ಡ ಅಪಘಾತವೇ ಸಂಭವಿಸುತ್ತಿತ್ತು ಎಂದು ಸ್ಥಳದಲ್ಲಿದ್ದ ಹತ್ತಾರು ಜನ ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಘಟನೆ ನಡೆದ ಬಳಿಕ ನೂರಾರು ಜನ ಸ್ಥಳದಲ್ಲಿ ಜಮಾಯಿಸಿ ಕೆಎಸ್ಆರ್ಟಿಸಿಯ ಹಲವು ಚಾಲಕರ ಅತಿ ವೇಗ ಹಾಗೂ ನಿಷ್ಕಾಳಜಿಯ ಚಾಲನೆಯ ಬಗ್ಗೆ ಕಿಡಿ ಕಾರಿದರು. ಈ ಕುರಿತು ಮಾತನಾಡಿದ ಪುರಸಭಾ ಸದಸ್ಯ ಚಂದ್ರಕಾಂತ ಕಮ್ಮಾರ ಪೋಲಿಸ್ ಠಾಣೆಗೆ ದೂರು ನೀಡುವುದಾಗಿ ಹೇಳಿದರು.

Leave a Comment