
ಹಳಿಯಾಳ :- ಪೌರತ್ವ ತಿದ್ದುಪಡಿ ವಿಧೇಯಕದ ಬಗ್ಗೆ ಕಾಂಗ್ರೇಸ್ ಪಕ್ಷ ಸೇರಿದಂತೆ ಇತರೇ ವಿರೋಧ ಪಕ್ಷಗಳು ಮುಸ್ಲಿಂ ಸಮುದಾಯದವರಿಗೆ ತಪ್ಪು ತಿಳುವಳಿಕೆ ನೀಡುತ್ತಾ, ಅವರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಹೊರತು ಈ ವಿಧೇಯಕದ ಸತ್ಯಾಸತ್ಯತೆ ಬಗ್ಗೆ ವಿವರಿಸಿ ಅರಿವು ನೀಡುವ ಬದಲು ರಾಜಕೀಯ ಮಾಡುತ್ತಿದ್ದಾರೆಂದು ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಆರೋಪಿಸಿದರು.
ಪಟ್ಟಣದಲ್ಲಿ ಬಿಜೆಪಿ ಘಟಕದಿಂದ ನಡೆದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪಕ್ಕದ ಮುಸ್ಲಿಂ ರಾಷ್ಟ್ರಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಭಾರತಕ್ಕೆ ಅತಿಕ್ರಮಣ ಪ್ರವೇಶ ಮಾಡಿದ ನುಸುಳುಕೊರರಿಗೆ ದೇಶದ ಪೌರತ್ವ ನೀಡಬೆಕೇ ? ಎಂದು ಪ್ರಶ್ನೀಸಿದರು.
ಈ ಹಿಂದೆ ಧರ್ಮದ ಆಧಾರದ ಮೇಲೆ ಕಾಂಗ್ರೇಸ್ ಪಕ್ಷ ದೇಶ ವಿಭಜನೆ ಮಾಡಿತ್ತು. ಅಂದು ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾದೇಶದಲ್ಲಿ ನೆಲೆಸಿರುವ ಹಿಂದೂಗಳು ಇಂದು ಅಲ್ಪಸಂಖ್ಯಾತರಾಗಿದ್ದು ನಿರಂತರ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಹಿಂದೂಗಳಿಗೆ ಭಾರತ ಒಂದೆ ದೇಶವಾಗಿದ್ದು ಭಾರತಕ್ಕೆ ಬಂದ ಅವರು ಇವರೆಗೆ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದು ಅಂತಹವರಿಗೆ ಹಲವು ದಶಕಗಳ ಹಿಂದೆ ಪೌರತ್ವ ನೀಡಬೇಕಿತ್ತು ಆದರೇ ಅದು ಇಂದು ಸಫಲವಾಗುತ್ತಿದೆ ಎಂದರು.

ದೇಶದಲ್ಲಿನ ಮೂಲ ಮುಸ್ಲಿಂರಿಗೆ ಈ ವಿಧೇಯಕದಿಂದ ಯಾವುದೇ ತೊಂದರೇ ಇಲ್ಲ ಭಾರತದ ಗಡಿಯ ಮೂಲಕ ಅಕ್ರಮವಾಗಿ ಒಳ ನುಸುಳಿರುವ ಬಾಂಗ್ಲಾದೇಶ, ಪಾಕಿಸ್ತಾನ, ಅಪಘಾನಿಸ್ತಾನ ಹಾಗೂ ರೋಹಿಂಗ್ಯಾ ಮುಸ್ಲಿಂರನ್ನು ದೇಶದಿಂದ ಹೊರಹಾಕಲಾಗುತ್ತದೆ ಅದಕ್ಕೆ ದೇಶದಲ್ಲಿನ ಮೂಲ ಮುಸ್ಲಿಂರು ಭಯ ಪಡುವ ಅಗತ್ಯತೆ ಇಲ್ಲ ಹಾಗೂ ಪೌರತ್ವ ತಿದ್ದುಪಡಿ ವಿಧೇಯಕದ ಬಗ್ಗೆ ಸಂಪೂರ್ಣವಾಗಿ ಅರಿತು ಬಳಿಕ ಪ್ರತಿಭಟನೆಗಳನ್ನು ನಡೆಸುವಂತೆ ಸುನೀಲ್ ಮನವಿ ಮಾಡಿದರು.
ಅಖಂಡ ಭಾರತದ ಸಂಕಲ್ಪ ಹೊಂದಿರುವ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಯು ಜಾತಿ, ಧರ್ಮ ಆಧಾರಿತವಾಗಿ ರಾಜಕಾರಣ ಮಾಡುವುದಿಲ್ಲ ಹೊರತು ರಾಷ್ಟ್ರದ, ಜನತೆಯ ಹಿತಕ್ಕಾಗಿ ಎಲ್ಲರೂ ಸಮಾನರು ಎಂಬ ನೆಲೆಗಟ್ಟಿನ ಮೇಲೆ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕೆಲಸ ಮಾಡುತ್ತಿದೆ ಎಂದರು.
ವಿರೋಧ ಪಕ್ಷಗಳು ಧರ್ಮದ ಆಧಾರದ ಮೇಲೆ ಮುಸ್ಲಿಂರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ಪೌರತ್ವ ತಿದ್ದುಪಡಿ ವಿಧೇಯಕದ ಕುರಿತು ಹಳಿಯಾಳದ ಮುಸ್ಲಿಂ ಸಮುದಾಯದವರಲ್ಲಿ ಇರುವ ಸಂಶಯಗಳನ್ನು ಬಹಿರಂಗ ವೇದಿಕೆಯಲ್ಲಿ ಪರಿಹರಿಸಲು ತಾವು ಸಿದ್ದರಿದ್ದು. ವಿಧೇಯಕದ ಕುರಿತು ಸರಿಯಾಗಿ ಮಾಹಿತಿ ತಿಳಿಯದೇ ಪ್ರತಿಭಟನೆಗಳನ್ನು ಮಾಡದಂತೆ ಮಾಜಿ ಶಾಸಕ ಸುನೀಲ್ ಹೆಗಡೆ ಮನವಿಯನ್ನು ಮಾಡಿದರು.
ಸುದ್ದಿಗೊಷ್ಠಿಯಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಪುರಸಭೆ ಸದಸ್ಯರಾದ ಚಂದ್ರಕಾಂತ ಕಮ್ಮಾರ, ಸಂತೋಷ ಘಟಕಾಂಬಳೆ, ಪ್ರಮುಖರಾದ ಅನಿಲ ಮುತ್ನಾಳ, ಅಜೋಬಾ ಕರಂಜೆಕರ, ಯಲ್ಲಪ್ಪಾ ಹೊನ್ನೊಜಿ, ಶಂಕರ ಗಳಗಿ, ವಿಲಾಸ ಯಡವಿ ಇತರರು ಇದ್ದರು.
Leave a Comment