
ಹಳಿಯಾಳ/ದಾಂಡೇಲಿ :- ಹಳಿಯಾಳ ತಾಲೂಕಾ ಬಿಜೆಪಿ ನೂತನ ಅಧ್ಯಕ್ಷರಾಗಿ ಗಣಪತಿ ಸಹದೇವ ಕರಂಜೆಕರ, ಜೋಯಿಡಾ ಅಧ್ಯಕ್ಷರಾಗಿ ಸಂತೋಷ ರೆಡಕರ ಹಾಗೂ ದಾಂಡೇಲಿ ನಗರ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಚಂದ್ರಕಾಂತ ಕ್ಷೀರಸಾಗರ ಅವರು ಆಯ್ಕೆಯಾಗಿದ್ದಾರೆ.
ಸೋಮವಾರ ದಾಂಡೇಲಿಯಲ್ಲಿ ನಡೆದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳ ಚುನಾವಣೆಯಲ್ಲಿ ನೂತನ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಚುನಾವಣಾಧಿಕಾರಿಯಾಗಿ ಉಮೇಶ ಭಾಗ್ವತ ಅವರು ಕಾರ್ಯನಿರ್ವಹಿಸಿದರು.
ಹಳಿಯಾಳಕ್ಕೆ ನೂತನ ಪ್ರಧಾನ ಕಾರ್ಯದರ್ಶಿಗಳಾಗಿ ಸಂಘ ಪರಿವಾರದ ಹಿನ್ನೆಲೆಯ ಅನಿಲ ಮುತ್ನಾಳೆ ಹಾಗೂ ವಿಎಮ್ ಪಾಟೀಲ್ ಅವರನ್ನು ಮತ್ತು ದಾಂಡೇಲಿಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಗುರುನಾಥ ಮಠಪತಿ ಮತ್ತು ಗಿರಿಶ ಟೋಸುರ, ಜೋಯಿಡಾಕ್ಕೆ ಸುಭಾಷ ಮಾಂಜ್ರೇಕರ ಅವರು ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಹಳಿಯಾಳದ ನಿರ್ಗಮಿತ ಅಧ್ಯಕ್ಷ ಶಿವಾಜಿ ನರಸಾನಿ ಅವರು ನೂತನ ಅಧ್ಯಕ್ಷ ಗಣಪತಿ ಕರಂಜೆಕರ ಅವರಿಗೆ ಹಾಗೂ ದಾಂಡೇಲಿ ನಿರ್ಗಮಿತ ಅಧ್ಯಕ್ಷ ಬಸವರಾಜ ಕಳಶೆಟ್ಟಿ ಅವರು ನೂತನ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರಗೆ ಮತ್ತು ಜೋಯಿಡಾದ ನಿರ್ಗಮಿತ ಅಧ್ಯಕ್ಷ ತುಕಾರಾಮ ಮಾಂಜ್ರೇಕರ ಅವರು ನೂತನ ಅಧ್ಯಕ್ಷ ಸಂತೋಷ ರೆಡಕರ ಅವರಿಗೆ ಬಿಜೆಪಿ ಪಕ್ಷದ ಧ್ವಜ ನೀಡುವ ಮೂಲಕ ತಮ್ಮ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಹಳಿಯಾಳ ಮಾಜಿ ಶಾಸಕರಾದ ಸುನೀಲ್ ವಿ ಹೆಗಡೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎನ್.ಎಸ್.ಹೆಗಡೆ, ಪ್ರಮುಖರಾದ ಮಂಗೇಶ ದೇಶಪಾಂಡೆ ಇತರ ಪ್ರಮುಖರು ಇದ್ದರು.


Leave a Comment