
ಇಂದೂ ಅನಿಸಿದೆ ನಿನ್ನ ನೋಡಲೆಂದುಮನವು ಹೇಳಿದೆ ನೀನೆ ಬೇಕೆಂದುನಿಂತು ಕಾಯಲೇ ನಿನ್ನ ದರುಶನಕೆಸಿರಿತನವಾಗು ನನ್ನ ಈ ಹೃದಯದ ಬಡತನಕೆ
ದಿನವಿಡಿ ಮನಸಲ್ಲಿ ನಿಂದೆ ನೆನಪಿನ ಬಣ್ಣನಿನ್ನಾರೂಪ ಕಾಣಲು ಮುಚ್ಚೆನು ಈ ನನ್ನ ಕಣ್ಣಆಸೆಯ ಗೀತೆಯು ಮನಸ್ಸಿನ ಪುಟದಲಿಪ್ರೀತಿಯನು ಹಂಚಿಕೊಂಡು ಹೃದಯವೆ ಹಾಡಲಿ
ಬದುಕಿನಲಿ ಎಲ್ಲವ ಮೀರಿ ನಿನ್ನನೆ ನೆನೆದೆಉಸಿರಿನ ಉಸಿರಾದ ನಿನ್ನನ್ನೆ ನೆನಪಿಸಿ ನಲಿದೆಬರಗಾಲದಲ್ಲಿ ಮಳೆ ಬಂದಿರುವ ಹಾಗಿದೆಮಾತು ಮಾತಿಗೂ ನಿನ್ನ ಹೆಸರನೆ ಕೂಗಿದೆ
ನಿನ್ನಾ ಹಚ್ಚಿಕೊಂಡ ಭಗ್ನಪ್ರೇಮಿ ನಾನೊಬ್ಬನೆನಿನ್ನಿಲ್ಲದೆ ಆಗದು ನನಗೆ ಶುಭ ಮುಂಜಾನೆಕನಸಿನ ಸಾಗರದ ಮೇಲೆ ನಿನ್ನಾ ಸುಂದರ ಹೆಸರಿದೆನಿನ್ನಯ ಹುಚ್ಚಿಗೆ ನನ್ನ ಮನೆಯ ದಾರಿಯೆ ಮರೆತಿದೆ.

Leave a Comment