
#ಅಂಕೋಲಾ:- #ವೃದ್ದ ದಂಪತಿಗಳಿಬ್ಬರನ್ನು #ಕೈಕಾಲು #ಕಟ್ಟಿಹಾಕಿ #ಅಮಾನುಷವಾಗಿ #ಕೊಲೆ ಮಾಡಿರುವ ಘಟನೆ ಅಂಕೋಲಾ ತಾಲೂಕಿನ ಮೊಗಟಾ ಗ್ರಾಮ ಪಂಚಾಯತ ವ್ಯಾಪ್ತಿಯ #ಆಂದ್ಲೆ #ಗ್ರಾಮದಲ್ಲಿ ನಡೆದಿದೆ.
ಶುಕ್ರವಾರದಿಂದ ಶನಿವಾರ ಬೆಳಗಿನ ಜಾವದಲ್ಲಿ ಘಟನೆ ನಡೆದಿರಬಹುದೆಂದು ಹೇಳಲಾಗುತ್ತಿದೆ. ಜೋಡಿ ಕೊಲೆಯ ಸುದ್ದಿ ಹರಡುತ್ತಿದ್ದಂತೆ ಅಂಕೋಲಾ ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದು ಘಟನಾ ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ.
#ಕೊಲೆಯಾದ ದಂಪತಿಗಳನ್ನು #ನಾರಾಯಣ ಬೊಮ್ಮಯ್ಯಾ #ನಾಯ್ಕ (78) ಆತನ ಪತ್ನಿ #ಸಾವಿತ್ರಿ ನಾಯ್ಕ ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಎಎಸ್ಪಿ #ಶಿವಪ್ರಕಾಶ #ದೇವರಾಜು,
#ಡಿವೈಎಸ್ಪಿ #ಶಂಕರ ಮಾರಿಹಾಳ, ಪಿಎಸ್ ಐಗಳಾದ #ಸಂಪತ್ ಕುಮಾರ, #ನಾರಾಯಣ ಸೇರಿದಂತೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ #ಪರಿಶೀಲನೆ ನಡೆಸುತ್ತಿದ್ದಾರೆ.
ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ #ಶ್ವಾನದಳ ಹಾಗೂ #ಬೆರಳಚ್ಚು #ತಜ್ಞರು ಆಗಮಿಸಿ ಪರಿಶೀಲನೆಯನ್ನು ನಡೆಸಲಿದ್ದಾರೆ.
ಕೊಲೆಗೆ ಹಳೆಯ ಯಾವುದಾದರೂ ವೈಷಮ್ಯ ಕಾರಣವೋ ಅಥವಾ ದರೊಡೆ ಮಾಡಲು ಬಂದವರು ಕೊಲೆ ಮಾಡಿದರೋ ಎಂಬುದು ಪೋಲಿಸರ ತನಿಖೆಯಿಂದ ತಿಳಿದು ಬರಬೇಕಿದೆ.


Leave a Comment