
ಹಳಿಯಾಳ:- 6 ತಿಂಗಳಿಂದ ಮುಚ್ಚಲ್ಪಟ್ಟಿದ್ದ ದಾಂಡೇಲಿಯ ಶ್ರೀನಿಧಿ ಕಾಗದ ಕಾರ್ಖಾನೆಗೆ ಕಾರ್ಮಿಕರ ಹಿತದೃಷ್ಠಿಯಿಂದ ಸಾಲ ನೀಡಿ ಮತ್ತೇ ಕಾರ್ಖಾನೆ ಪುನರಾರಂಭಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದು ತಮ್ಮ ತಪ್ಪೇ ಎಂದು ವಿಧಾನ ಪರಿಷತ್ ಸದಸ್ಯರು ಆಗಿರುವ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಎಸ್.ಎಲ್.ಘೋಟ್ನೇಕರ ಪ್ರಶ್ನೀಸಿದರು.
ಇತ್ತೀಚೆಗೆ ದಾಂಡೇಲಿಯಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಪತ್ರಿಕಾಗೊಷ್ಠಿಯಲ್ಲಿ ನಷ್ಟದಲ್ಲಿರುವ ಶ್ರೀನಿಧಿ ಕಾಗದ ಕಾರ್ಖಾನೆಗೆ ಕೆಡಿಸಿಸಿ ಬ್ಯಾಂಕ್ನಿಂದ ಸಾಲ ನೀಡಿದ್ದು ತಪ್ಪು, ನಿಯಮ ಉಲ್ಲಂಘಿಸಲಾಗಿದೆ ಹಾಗೂ ನಿಯಮ ಬಾಹಿರ ಸಾಲ ನೀಡಲಾಗಿದೆ ಎಂದು ಆರೋಪಿಸಿದ್ದರು. ಇದಕ್ಕೆ ಶನಿವಾರ ಪತ್ರಿಕಾಗೊಷ್ಠಿಯಲ್ಲಿ ಪ್ರತಿಕ್ರಿಯಿಸಿದ ಘೋಟ್ನೆಕರ ಅವರು ಸುನೀಲ್ ಹೆಗಡೆ ಹಳಿಯಾಳದ ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಸಮಯದಲ್ಲಿ ಬ್ಯಾಂಕ್ ದಿವಾಳಿ ತೆಗೆಯಿತು ಅಂತಹವರಿಂದ ನಾನೇನು ಕಲಿಯುವ ಅವಶ್ಯಕತೆ ಇಲ್ಲವೆಂದರು.
ಸುನೀಲ್ ಹೆಗಡೆ ಹಾಗೂ ಅವರ ಕುಟುಂಬದವರು ಕೆಡಿಸಿಸಿ ಬ್ಯಾಂಕ್ನಲ್ಲಿ ಕಟಬಾಕಿದಾರರಾಗಿದ್ದು ಮರೆಯಿತೇ ? ಬಳಿಕ ಓಟಿಎಸ್ ಮಾಡಿಕೊಂಡಿದ್ದು ಹೆಗಡೆ ಮರೆತಂತಿದೆ. ಬ್ಯಾಂಕಗಳ ಸಾಲಗಳನ್ನು ಸರಿಯಾಗಿ ಪಾವತಿಸದ ಮಾಜಿ ಶಾಸಕರಿಂದ 3 ಬಾರಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ನಾನು ಏನು ಪಾಠ ಕಲಿಯಬೇಕಾಗಿಲ್ಲ ಹೆಗಡೆ ಕೇವಲ ಟಿಕೆ ಟಿಪ್ಪಣಿಗಳಲ್ಲಿಯೇ ಕಾಲ ಕಳೆಯುವ ಮನಸ್ಥಿತಿಯವನು ಎಂದು ಟಿಕಾ ಪ್ರಹಾರ ನಡೆಸಿದರು.
ದಶಕಗಳ ಹಿಂದೆ ಆರ್ಥಿಕ ಸಂಕಷ್ಟದಲ್ಲಿದ್ದ ದಾಂಡೇಲಿಯ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಗೂ 70 ಒಮ್ಮೆ 30 ಕೋಟಿ ಸಾಲ ನೀಡಲಾಗಿತ್ತು. ಅಲ್ಲದೇ ದಾಂಡೇಲಿಯ ಇನ್ನೊಂದು ಡಿಎಫ್ಎ ಕಂಪೆನಿಗೂ 9 ಕೋಟಿ ಸಾಲ ನೀಡಿ ಸಹಾಯ ಮಾಡಲಾಗಿತ್ತು ಅವೆಲ್ಲವು ವಸೂಲಿಯಾಗಿವೆ. ನಷ್ಟದಲ್ಲಿರುವ ಕಂಪೆನಿಗಳಿಗೆ ಸಾಲ ನೀಡುವುದರಿಂದ ಅಲ್ಲಿರುವ ಸಾವಿರಾರು ಕಾರ್ಮಿಕರು ಬೀದಿಗೆ ಬರುವುದು ತಪ್ಪುತ್ತದೆ ಹೀಗಾಗಿ ಸದ್ಯ ಆರ್ಥೀಕ ಸಂಕಷ್ಟದಲ್ಲಿದ್ದ ಶ್ರೀನಿಧಿ ಕಾಗದ ಕಾರ್ಖಾನೆಗೆ ಸಾಲ ನೀಡುವ ಮೂಲಕ ಬಿದಿಗೆ ಬಿಳಲಿದ್ದ ಕಾರ್ಮಿಕ ಕುಟುಂಬಗಳಿಗೆ ನೆರವು ನೀಡಲಾಗಿದೆ ಎಂದು ವಿವರಿಸಿದರು.
ಪ್ರಾರಂಭವಾಗಿದ್ದ ಈ ಕಾರ್ಖಾನೆಗೆ ಬೊನಸ್ ನೆಪ ಮುಂದೆ ಮಾಡಿಕೊಂಡು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮತ್ತೇ ಕಾರ್ಖಾನೆ ಮುಚ್ಚಲು ಕಾರಣವಾಗಿವೆ. ಕಾರ್ಮಿಕ ಮುಖಂಡ ಎನ್ನುವ ಬಿಡಿ ಹಿರೆಮಠ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಮತ್ತೇ ಮುಚ್ಚಲ್ಪಟ್ಟಿರುವ ಈ ಕಂಪೆನಿಯನ್ನು ಪುನಃ ಪ್ರಾರಂಭಿಸಿ ಕಾರ್ಮಿಕರಿಗೆ ನೆರವಾಗಲಿ ಎಂದು ಸವಾಲ್ ಹಾಕಿದರು.

ಶ್ರೀನಿಧಿ ಕಾಗದ ಕಾರ್ಖಾನೆಗೆ ನಿಯಮದಂತೆ ಸಾಲ ನೀಡಲಾಗಿದೆ. ಈ ಮೂಲಕ ಬೀದಿಪಾಲಾಗಿದ್ದ 200 ಕಾರ್ಮಿಕರ ಕುಟುಂಬಗಳಿಗೆ ಅನ್ನ ನೀಡುವ ಕೆಲಸವನ್ನು ಮಾಡಲಾಗಿದೆ. ಆದರೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಹಾಗೂ ಕೆಡಿಸಿಸಿ ಬ್ಯಾಂಕ್ ಹೆಸರು ಕೆಡಿಸಲು ಸಾಕಷ್ಟು ಪ್ರಯತ್ನ ಪಡುತ್ತಿದ್ದು ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಕಾರ್ಮಿಕರು ಹಾಗೂ ಜನರಿಗೆ ತಪ್ಪು ತಿಳುವಳಿಕೆ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಕಳೆದ ಎರಡು ತಿಂಗಳಿಂದ ಸ್ಥಗೀತವಾಗಿರುವ ದಾಂಡೇಲಿಯ ಶ್ರೇಯಸ್ ಹಾಗೂ ಶ್ರೀನಿಧಿ ಪೇಪರ್ ಮಿಲ್ನ ಬೀಗಮುದ್ರೆಯನ್ನು ತಕ್ಷಣ ತೆರವುಗೊಳಿಸುವಂತೆ ಸರ್ಕಾರದ ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯದರ್ಶಿ ಕ್ಯಾ.ಪಿ.ಮಣಿವಣ್ಣನ್ ಆದೇಶಿಸಿದ್ದಾರೆ ಎಂದು ಇತ್ತೀಚೆಗೆ ಪತ್ರಿಕಾಗೊಷ್ಠಿಯಲ್ಲಿ ಹೇಳಿದ್ದ ಕಾರ್ಮಿಕ ಸೇವಾ ಸಂಘಟನೆಯ ಅಧ್ಯಕ್ಷ ಬಿಡಿ ಹಿರೇಮಠ ಅವರೇ ಕಂಪೆನಿ ಎಂದು ಪ್ರಾರಂಭವಾಗುತ್ತವೆ ಎಂದು ಪ್ರಶ್ನೀಸಿದ ಘೊಟ್ನೇಕರ ಅವರು ಕಾರ್ಮಿಕರ ಹಿತದೃಷ್ಠಿ ಹಿರೆಮಠ ಹಾಗೂ ಸುನೀಲ್ ಹೆಗಡೆಗೆ ಬೇಕಿಲ್ಲ ಎಂದು ಕಿಡಿ ಕಾರಿದರು.
ಈಗಾಗಲೇ ದೇಶದಲ್ಲಿ ಸಾಕಷ್ಟು ಕಂಪೆನಿಗಳು ಬಂದ್ ಆಗಿವೆ ಸಾವಿರಾರು ನೌಕರರು ಬೀದಿಪಾಲಾಗಿದ್ದಾರೆ ಇದನ್ನು ಮಾಜಿ ಶಾಸಕರು ಅರಿತು ಮಾತನಾಡಬೇಕು ಅಲ್ಲದೇ ಸುನೀಲ್ ಹೆಗಡೆ ಅವರು ನಷ್ಟದಲ್ಲಿರುವ ಈ ಕಾರ್ಖಾನೆಗಳಿಗೆ ಸಾಲ ನೀಡಿ ಬಿದಿಪಾಲಾಗುವ ನೌಕರರ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿ ತೊರಿಸಲಿ ಎಂದು ಸವಾಲ್ ಹಾಕಿದರು.
ದಾಂಡೇಲಿ ಮಜ್ದೂರ್ ಸಂಘದವರು ನ್ಯಾಯಾಲಯದಲ್ಲಿ ದಾವೆ ಹೂಡಿ ನಿರಂತರ ಹೋರಾಟ ನಡೆಸಿ ನೂರಾರು ಗುತ್ತಿಗೆ ನೌಕರರಿಗೆ ಬರಬೇಕಿದ್ದ ಹೆಚ್ಚುವರಿ ಸಂಬಳದ ಹಣ(ಅರಿಯರ್ಸ್) ಬರುವಂತೆ ಮಾಡುವಲ್ಲಿ ಸಫಲರಾಗಿದ್ದೇವೆ ಎಂದು ಮಜ್ದೂರ್ ಸಂಘದ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ ಮಾಹಿತಿ ನೀಡಿದರು.
ಸುದ್ದಿಗೊಷ್ಠಿಯಲ್ಲಿ ಪುರಸಭೆ ಸದಸ್ಯ ಅನಿಲ ಚವ್ವಾಣ, ಪ್ರಮುಖರಾದ ಎಲ್.ಎಸ್.ಅರಿಶೀನಗೇರಿ, ಶಿವಪುತ್ರಪ್ಪಾ ನುಚ್ಚಂಬ್ಲಿ, ಪರಶುರಾಮ ಹರ್ಲಿ ಇದ್ದರು.

Leave a Comment