
ಹಳಿಯಾಳ
ಜಿಲ್ಲೆಯ ಕೆಡಿಸಿಸಿ ಬ್ಯಾಂಕ್ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಮತ್ತು ಎಲ್ಲವೂ ಸರಿ ಇದೆ ಎಂದಾದರೇ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಎಸ್.ಎಲ್.ಘೋಟ್ನೇಕರ ಅವರು ಹೊರಗಿನ ಲೆಕ್ಕ ಪರಿಶೋಧಕರಿಂದ ಬ್ಯಾಂಕಿನ ಲೆಕ್ಕಪತ್ರ ಪರಿಶೋಧನೆ(ಓಡಿಟ್) ಮಾಡಿಸಲಿ ಹಾಗೂ ಸರ್ಕಾರದಿಂದ ಬ್ಯಾಂಕಿನ ಮೇಲೆ 64 ತನಿಖೆಗೆ ಠರಾವು ಪಾಸು ಮಾಡಿ ಸರ್ಕಾರಕ್ಕೆ ಪತ್ರ ಬರೆಯಲಿ ಎಂದು ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಸವಾಲ್ ಹಾಕಿದ್ದಾರೆ.
ಪಟ್ಟಣದಲ್ಲಿ ಬಿಜೆಪಿ ಪಕ್ಷದಿಂದ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಬಹುಪಾಲು ಸೊಸೈಟಿಗಳಲ್ಲಿ ಅವ್ಯವಹಾರ ನಡೆದಿದೆ. ಸಾಲ ಮನ್ನಾ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಘೋಟ್ನೇಕರ್ ಮೇಲೆ ಆರೋಪಗಳ ಸುರಿಮಳೆ:
ಘೋಟ್ನೇಕರ ಅವರ ತಟ್ಟೆ ಪೂರಾ ಕಲ್ಲಿನಿಂದ ತುಂಬಿದ್ದು ಜನರಿಗೆ ಕಾಣಿಸಲು ಮೇಲೆ ಮೊಸರು ಹಾಕಿದ್ದಾರೆ ಎಂದು ಲೇವಡಿ ಮಾಡಿದ ಹೆಗಡೆ ಘೋಟ್ನೇಕರ ಭ್ರμÁ್ಟಚಾರದ ಕೂಪವಾಗಿದ್ದಾರೆಂದು ಆರೋಪಗಳ ಸುರಿಮಳೆಗೈದರು.
ಕೆಡಿಸಿಸಿ ಬ್ಯಾಂಕ್ನಲ್ಲಿ ಸಿಬ್ಬಂದಿ ನೇಮಕದ ವಿಚಾರದಿಂದ ಹಿಡಿದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ದಾಂಡೇಲಿಯ ಶ್ರೀನಿಧಿ ಕಾಗದ ಕಾರ್ಖಾನೆಯವರೆಗೆ ಸಾಲ ನೀಡುವಲ್ಲಿವರೆಗೆ ತಮ್ಮ ಮನಸ್ಸಿಗೆ ತೋಚಿದ್ದನ್ನು ಮಾಡಿರುವ ಘೋಟ್ನೇಕರ ಅವರು ಇನ್ನೂ ಎರಡು ವರ್ಷಗಳ ಕಾಲ ಕೆಡಿಸಿಸಿ ಬ್ಯಾಂಕಿನಲ್ಲಿ ದರ್ಬಾರ್ ಮಾಡಿದರೇ ಈ ಬ್ಯಾಂಕ್ ದಿವಾಳಿ ತೆಗೆಯುವುದು ನಿಶ್ಚಿತವೆಂದು ಭವಿಷ್ಯ ನುಡಿದರು.
ಕಾರ್ಮಿಕರಿಗೆ ಮೋಸ:
ದಾಂಡೇಲಿಯ ಶ್ರೀನಿಧಿ ಪೇಪರ್ ಆಡಳಿತ ಮಂಡಳಿಯ ವಿಫಲತೆಯಿಂದ ಬಂದ್ ಆಗಿದ್ದು ಅದಕ್ಕೆ ಬೇರೆ ಯಾರೂ ಹೊಣೆಗಾರರಲ್ಲ ಎಂದ ಹೆಗಡೆ ಕಾರ್ಖಾನೆಯು ಕಾರ್ಮಿಕರ ವೇತನ ಶ್ರೇಣಿಕರಣ (ಗ್ರೇಡಿಂಗ್) 1 ಕೋಟಿಗೂ ಅಧಿಕ ಹಣ ಕೊಡಬೇಕಿದೆ. ಪ್ರಾವಿಡಂಟ್ ಫಂಡ್(ಪಿಎಫ್) 45 ಲಕ್ಷ ಹಣ ಹಾಗೂ ಇನ್ಸೂರನ್ಸ್ ಹಣ 30 ಲಕ್ಷ ಸರ್ಕಾರಕ್ಕೆ ಪಾವತಿಸಬೇಕಿದೆ.
ಆದರೆ ಇದನ್ನು ಮಾಡದೇ ಅಪರಾಧವೆಸಗಿದೆ ಎಂದು ಆಪಾದಿಸಿದ ಮಾಜಿ ಶಾಸಕರು ಇದμÉ್ಟ ಅಲ್ಲದೇ ಕಾರ್ಮಿಕರ ಬೋನಸ್ ಕೂಡ ನೀಡದೆ ಕಾರ್ಮಿಕರಿಗೆ ಪ್ರತಿ ಹಂತದಲ್ಲಿ ಮೋಸವೆಸಗಿದೆ ಎಂದರು.

ಆಪಾದನೆಗಳ ಸುರಿಮಳೆ:
ಪ್ರತಿ ಹಂತದಲ್ಲಿ ಪ್ರಮಾದಗಳನ್ನು ಮಾಡಿರುವ ಈ ಶ್ರೀನಿಧಿ ಕಾಗದ ಕಾರ್ಖಾನೆಯ ಬಗ್ಗೆ ಮಾಹಿತಿ ಕೆಡಿಸಿಸಿ ಬ್ಯಾಂಕ್ ಪಡೆದಿಲ್ಲವೇ.? ಅಲ್ಲದೇ ಇವರಿಗೆ 3.5 ಕೋಟಿ ಹಣ ಸಾಲ ಮಂಜೂರಿ ಮಾಡಿದ್ದು ಈಗಾಗಲೇ 2 ಕೋಟಿ 80 ಲಕ್ಷ ಬಿಡುಗಡೆ ಮಾಡಲಾಗಿದೆ. ಆದರೆ ಉಳಿದ 70 ಲಕ್ಷ ಹಣವನ್ನು ಬಿಡುಗಡೆ ಮಾಡಲು ಕೆಡಿಸಿಸಿ ಬ್ಯಾಂಕಿನ ಲೀಗಲ್ ಡಿಪಾರ್ಟ್ಮೆಂಟ್ (ಕಾನೂನು ಸಲಹಾ ಸಮಿತಿ) ತಡೆ ಓಡ್ಡಿದೆ ಏಕೆಂದರೆ ಸಾಲ ಮಂಜೂರಿ ಮಾಡಿದ್ದೇ ನಿಯಮ ಬಾಹಿರವಾಗಿದ್ದು ಇಲ್ಲಿ ಕಂಪೆನಿ ಹಾಗೂ ಘೋಟ್ನೇಕರ ಅವರ ನಡುವೆ ಒಪ್ಪಂದ ಆಗಿದ್ದೇ ನಷ್ಟದಲ್ಲಿರುವ ಕಂಪೆನಿಗೆ ಸಾಲ ಮಂಜೂರಿ ಮಾಡಲು ಕಾರಣವಾಗಿದೆ ಎಂದು ಆಪಾದನೆಗಳ ಮೇಲೆ ಆಪಾದನೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಗಣಪತಿ ಕರಂಜೆಕರ, ಪುರಸಭೆ ಸದಸ್ಯರಾದ ಸಂತೋಷ ಘಟಕಾಂಬಳೆ, ಚಂದ್ರು ಕಮ್ಮಾರ, ಪ್ರಮುಖರಾದ ತುಕಾರಾಮ ಪಟ್ಟೇಕರ, ಶಿವಾಸಿ ನರಸಾನಿ, ನಾರಾಯಣ ಬೆಳಗಾಂವಕರ, ಅನಿಲ ಮುತ್ನಾಳ, ಸಂತಾನ ಸಾವಂತ, ವಿಜಯ ಬೋಬಾಟಿ, ವಿಜಯಲಕ್ಷ್ಮಿ ಚವ್ವಾಣ, ಮೋಹನ ಮಾವಳಂಗಿ, ವಾಸುದೇವ ಪೂಜಾರಿ, ಸಿದ್ದು ಶೆಟ್ಟಿ, ಯಲ್ಲಪ್ಪಾ ಹೊನ್ನೊಜಿ ಮೊದಲಾದವರು ಉಪಸ್ಥಿತರಿದ್ದರು.
ಘೋಟ್ನೇಕರ್ ಕಾರ್ಖಾನೆಯ ಪರವಾಗಿದ್ದಾರೆ ಹೊರತು ಕಾರ್ಮಿಕರ ಪರವಿಲ್ಲ:
ಘೋಟ್ನೇಕರ ಅವರು ಕಾರ್ಮಿಕರ ಪರವಿಲ್ಲ ಹೊರತಾಗಿ ಕಾರ್ಖಾನೆಯ ಪರವಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಈ ಹಿಂದೆ ದಾಂಡೇಲಿಯ ಡಿಎಫ್ ಎ ಕಾರ್ಖಾನೆಗೆ 9 ಕೋಟಿ ಸಾಲ ನೀಡಿ ಬಳಿಕ ಓಟಿಎಸ್ ಮಾಡಿ ಬಡ್ಡಿ ಮಾತ್ರವಲ್ಲದೇ ಅಸಲು ಮೊತ್ತದಲ್ಲೂ 6 ಕೋಟಿ ಬಿಟ್ಟು 3 ಕೋಟಿ ಬ್ಯಾಂಕಿಗೆ ಭರಣ ಮಾಡಿಕೊಳ್ಳಲಾಗಿದ್ದು ಘೋಟ್ನೇಕರ ಅವರಿಗೆ ತಿಳಿದಿಲ್ಲವೇ ಈ ಬಗ್ಗೆ ಜನರಿಗೂ ಅವರು ಮಾಹಿತಿ ನೀಡಲಿ ಎಂದು ಆಗ್ರಹಿಸಿದರು.
ಇನ್ನೂ ತಾವು ಪಾರದರ್ಶಕ ಹಾಗೂ ಪ್ರಾಮಾಣಿಕರಿದ್ದರೇ
ಕೆಡಿಸಿಸಿ ಬ್ಯಾಂಕ್ನಿಂದಲೇ ಲೆಕ್ಕಪರಿಶೋಧನೆ ಆಗುವ ಎಲ್ಲ ಸೊಸೈಟಿಗಳ ಮೇಲೆ ಹಾಗೂ ಕೆಡಿಸಿಸಿ ಬ್ಯಾಂಕ್ ಮೇಲೂ ಸರ್ಕಾರದಿಂದ ತನಿಖೆಗೆ ಅವಕಾಶ ನೀಡಿ ಇದಕ್ಕೆ ಘೊಟ್ನೇಕರ ತಯಾರಿದ್ದಾರಾ? ಎಂದು ಹೆಗಡೆ ಪ್ರಶ್ನಿಸಿದರು.
Leave a Comment