
ಜೋಯಿಡಾ –
ಜೋಯಿಡಾ ತಾಲೂಕಿನ ರಾಮನಗರದಲ್ಲಿ ನಡೆಯುತ್ತಿರುವ ಬ್ಲಾಸ್ಟಿಂಗ್ ನಿಂದ ಇಲ್ಲಿನ ಗ್ರಾಮಸ್ಥರಿಗೆ ತೊಂದರೆ ಆಗುತ್ತಿದೆ.ಕೂಡಲೇ ಇಲ್ಲಿ ನಡೆಯುತ್ತಿರುವ ಅಕ್ರಮ ಬ್ಲಾಸ್ಟಿಂಗ್ ನಿಲ್ಲಿಸಬೇಕು ಎಂದು ರಾಮನಗರದ ನೂರಾರು ಗ್ರಾಮಸ್ಥರು ತಹಶೀಲ್ದಾರಗೆ ನ್ಯಾಯ ಒದಗಿಸಿ ಎಂದು ಪಟ್ಟು ಹಿಡಿದ ಘಟನೆ ಇಂದು ಸೋಮವಾರ ರಾಮನಗರದ ಗ್ರಾಮ ಪಂಚಾಯತದಲ್ಲಿ ನಡೆಯಿತು.
ರಾಮನಗರದಲ್ಲಿ ಕೆಲವು ಕಲ್ಲು ಕ್ವಾರಿಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ರಾಮನಗರದ ಜನತೆಗೆ ತೊಂದರೆ ಆಗುವಂತೆ ಬ್ಲಾಸ್ಟಿಂಗ್ ನಡೆಸುತ್ತದೆ,ಇದರಿಂದ ದೂಳು ಮತ್ತು ಪರಿಸರ ಮಾಲಿನ್ಯ ಆಗುತ್ತಿದೆ, ಅಲ್ಲದೇ ರಾಮನಗರದಲ್ಲಿ ನಡೆಯುವ ಕಲ್ಲು ಕ್ವಾರಿಗಳ ಜಾಗದ ಬಗ್ಗೆ ತನಿಖೆ ನಡೆಯಲಿ ಎಂದು ಹಿರಿಯರಾದ ಮಲ್ಲಾರ ರಾಣೆ ಹೇಳಿದರು.
ನಿವೃತ್ತ ಸೈನಿಕ ಸಾಗರ ದೇಸಾಯಿ ಮಾತನಾಡಿ ನೂರಾರು ಜನರ ಮನೆಗಳು ಬಿರುಕು ಬಿಟ್ಟಿವೆ, ಇದಕ್ಕೆಲ್ಲ ಕಾರಣ ಕ್ವಾರಿಯವರು ತಮ್ಮ ಜಾಗ ಬಿಟ್ಟು ಹೊರಗೆ ಬ್ಲಾಸ್ಟಿಂಗ್ ನಡೆಸಿರುವುದು. ಕೂಡಲೇ ಇದನ್ನು ನಿಲ್ಲಿಸಬೇಕು ಎಂದರು.
ನೂರಾರು ಜನರು ಕ್ವಾರಿಯಿಂದ ತಮಗಾದ ತೊಂದರೆ ಬಗ್ಗೆ ತಹಶೀಲ್ದಾರಗೆ ತಿಳಿಸಿದರು.

ಕೆಲ ಕಾಲ ಕ್ವಾರಿ ಮಾಲಿಕರಿಗೆ ಮತ್ತು ಸಾರ್ವಜನಿಕರಿಗೆ ಮಾತಿನ ಚಕಮಕಿ ನಡೆಯಿತು. ನಂತರ ಪೋಲಿಸರು ಸಭೆ ಶಾಂತಗೊಳಿಸಿದರು.
ಜೋಯಿಡಾ ತಹಶೀಲ್ದಾರ ಸಂಜಯ ಕಾಂಬಳೆ ಮಾತನಾಡಿ ನಾನು ಈ ಬಗ್ಗೆ ತನಿಖೆ ನಡೆಸಿ ಯಾವ ಕಲ್ಲು ಕ್ವಾರಿ ಅನಧಿಕೃತವಾಗಿದೆ ಎಂಬುದನ್ನು ಪರೀಶಿಲಿಸಿ ಕೂಡಲೇ ಅದನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಬಂದ ಮಾಡಿಸುತ್ತೇನೆ ಎನ್ನುವ ಭರವಸೆ ನೀಡಿದರು.
ನಂತರ ಮಾತನಾಡಿದ ಕಲ್ಲು ಕ್ವಾರಿ ಮಾಲಿಕ ಮಹದೇವ ಗಾಂದಲೆ ನಾವು ಹತ್ತಾರು ವರ್ಷ ಗಳಿಂದ ಕ್ವಾರಿ ನಡೆಸುತ್ತಿದ್ದೇವೆ, ಸರ್ಕಾರದ ಪರವಾನಿಗೆ ನಮಗಿದೆ, ಆದರೆ ಈಗ ಕೂಡಲೇ ಇದನ್ನು ಬಂದ ಮಾಡಿ ಎಂದರೇ ನಾವೇನು ಮಾಡಬೇಕು ಕೋಟಿ ಕೋಟಿ ಸಾಲ ಮಾಡಿ ನಾವು ಇದನ್ನು ನಡೆಸುತ್ತಿದ್ದೇವೆ.ಇದನ್ನು ಬಂದ ಮಾಡಿ ನಾವೇನು ಬಿದಿಗೆ ಬರಬೇಕೆ ಎಂದು ತಹಶೀಲ್ದಾರಗೆ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಕೆ ಕಾರವಾರದ ಹರೀಷ್ ಎಸ್, ಪರಿಸರ ಇಲಾಕೆಯ ಗಣಪತಿ ಹೆಗಡೆ,ರಾಮನಗರ ಪಿ.ಎಸ್.ಐ. ಮಂಜುಳಾ ರಾವುಜಿ ಉಪಸ್ಥಿತರಿದ್ದರು.
ದೀಲಿಪ್ ಬೀಲ್ಡಕಾಮ್ ಕಂಪನಿಯನ್ನು ಕೂಡಲೇ ಬಂದ ಮಾಡಿಸಿ ಇದರಿಂದಲೇ ರಾಮನಗರ ಜನರಿಗೆ ತೊಂದರೆ ಆಗುತ್ತಿದೆ,ಅಲ್ಲದೇ ಇವರು ಸರ್ಕಾರದ ಪರವಾನಿಗೆ ಮೀರಿ ಬ್ಲಾಸ್ಟಿಂಗ್ ನಡೆಸಿದ್ದಾರೆ,ಇವರು ಜನರನ್ನು ಖರೀದಿ ಮಾಡಿದಂತೆ ಮಾತನಾಡುತ್ತಾರೆ ಎಂದು ಜನರು ಕೂಗಾಡಿದರು.
ರಾಮನಗರದ ಪಂಚಾಯತ್ ಒಳ ಭಾಗದ ಇಕ್ಕಟ್ಟಾದ ಜಾಗದಲ್ಲಿ ಸಭೆ ನಡೆಸಲಾಗಿತ್ತು, ನೂರಾರು ಜನರು ಸೇರುವ ಪ್ರತಿಭಟನೆಗೆ ಕೆಲ ಪತ್ರಕರ್ತರಿಗೆ ಮಾತ್ರ ಆಹ್ವಾನ ನೀಡಿದ್ದು ಕಂಡಬಂದಿತ್ತು.

Leave a Comment