• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪ್ರಸಿದ್ದ ಉಳವಿ ಜಾತ್ರೆ‌ ಹಿನ್ನೆಲೆ‌ ಪೂರ್ವಭಾವಿ ಸಭೆ.

December 24, 2019 by Sandesh Desai Leave a Comment

watermarked 19 jyd 2 a

ಜೋಯಿಡಾ –
    ಜೋಯಿಡಾ ತಾಲೂಕಿನ ಪ್ರಸಿದ್ದ ಮತ್ತು ಉತ್ತರ ಕರ್ನಾಟಕದ ಪ್ರಸಿದ್ದ ಜಾತ್ರೆಯಾದ ಉಳವಿ ಜಾತ್ರಾ ಪೂರ್ವಭಾವಿ ಸಭೆಯು ಇಂದು ಗುರುವಾರ ಮದ್ಯಾಹ್ನ ಉತ್ತರಕನ್ನಡ ಜಿಲ್ಲಾ ಸಹಾಯಕ ಕಮೀಷನರ(ಎ.ಸಿ.) ಪ್ರಿಯಾಂಕ ಎಂ .ಅದ್ಯಕ್ಷತೆಯಲ್ಲಿ ಉಳವಿಯ ಚನ್ನಬಸವೇಶ್ವರ ಟ್ರಸ್ಟ ಕಮಿಟಿಯ ಸಭಾ ಭವನದಲ್ಲಿ ನಡೆಯಿತು.
     ಫೆಬ್ರವರಿ ೧ರಿಂದ ಆರಂಭವಾಗಲಿರುವ ಜಾತ್ರೆ ,ಫೆ ೧೦ ಕ್ಕೆ ರಥೋತ್ಸವ ನಡೆಯಲಿದ್ದು ಇದಕ್ಕೆ ಬೇಕಾದ ಸಂಪೂರ್ಣ ಸಿದ್ದತೆಗಾಗಿ ಉಳವಿ ಜಾತ್ರಗೆ ಸಂಭಂಧ ಪಡುವ ತಾಲೂಕಿನ ಎಲ್ಲಾ ಸರ್ಕಾರಿ ಇಲಾಕೆ ಅಧಿಕಾರಿಗಳನ್ನು ಕರೆಯಲಾಗಿತ್ತು.
   ಸಭೆಯ ಆರಂಭದಲ್ಲಿ ಜಾತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಕುಡಿಯುವ ನೀರು ಸರಬರಾಜು ಇಲಾಕೆಗೆ ತಿಳಿಸಲಾಯಿತು. ಹೆಚ್ಚುವರಿ ನೀರಿಗಾಗಿ ಕೊಡತ್ತಳ್ಳಿ ಹಳ್ಳದಿಂದ ಹೊಸ ಪೈಪ್ ಲೈನ ಮಾಡಿ ಕೊಡಿ ಎಂದು ಜಿ.ಪಂ ಸದಸ್ಯ ರಮೇಶ ನಾಯ್ಕ ಅವರ ಹತ್ತಿರ ಸಾರ್ವಜನಿಕರು ಮನವಿ ಮಾಡಿದರು.
   ಜಾತ್ರೆಯಲ್ಲಿ ಸಂಪೂರ್ಣ ಮದ್ಯಪಾನ ನಿಷೇದ ಮಾಡಿ ಮದ್ಯ ಮಾರಾಟ ಕಂಡು ಬಂದಲ್ಲಿ ಕೂಡಲೇ ಕ್ರಮ‌ ಕೈಗೊಳ್ಳುವಂತೆ ಅಬಕಾರಿ ಮತ್ತು ಪೋಲಿಸ್ ಇಲಾಕೆಯ ಅಧಿಕಾರಿಗಳಿಗೆ ತಿಳಿಸಲಾಯಿತು. ಅಲ್ಲದೇ ಹೆಚ್ಚಿನ ಪೋಲಿಸ್ ಸಿಬ್ಬಂದಿಗಳು ರಥೋತ್ಸವದ ಸಮಯದಲ್ಲಿ ರಥಕ್ಕೆ ಕಾವಲು ನೀಡಬೇಕು ಹಾಗೂ ಲೇಡಿ ಪೋಲಿಸ್ ಅಧಿಕಾರಿಗಳು ಅವಶ್ಯವಾಗಿ ಇರಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.
       ತಾಲೂಕಿನ ಪೋಟೋಲಿ – ಉಳವಿ ,ಕುಂಬಾರವಾಡಾ ರಸ್ತೆ ತೀರಾ ಹಾಳಾಗಿದ್ದು ಕೂಡಲೇ ರಿಪೇರಿ ಕಾಮಗಾರಿ ಕೈಗೊಳ್ಳಬೇಕು ಅಲ್ಲದೇ ಶಿವಪುರ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸಭೆಯಲ್ಲಿ ಲೋಕೋಪಯೋಗಿ ಇಲಾಕೆ ಅಧಿಕಾರಿಗಳಿಗೆ ತಿಳಿಸಲಾಯಿತು.

watermarked 19 jyd 2


    ಆರೋಗ್ಯ ಇಲಾಖೆಯವರು ಜಾತ್ರೆಯ ಮೊದಲಿನ ದಿನದಿಂದಲೇ ಇಲ್ಲಿ ಇರಬೇಕು, ಹಾಗೂ ಬೇರೆ ತಾಲೂಕಿನ ವೈದ್ಯರ ಅವಶ್ಯಕತೆ ಇದ್ದು ಕೆಲ ವೈದ್ಯರನ್ನು  ತರಸಿಕೊಳ್ಳಿ ಎಂದು ಸಭೆಯಲ್ಲಿ ತಿಳಿಸಲಾಯಿತು.
  ಅರಣ್ಯ ಇಲಾಕೆ ವತಿಯಿಂದ ಭಕ್ತಾಧಿಗಳಿಗೆ ದಾರಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ಜಾತ್ರೆಯಲ್ಲಿ ಬೆತ್ತ,ಹಾಗೂ ಬಿದಿರು ತರಿಸಿಕೊಡುವಂತೆ ಸೂಚಿಸಲಾಯಿತು.
    ಹೆಸ್ಕಾಂ ಇಲಾಕೆಯವರು ಜಾತ್ರೆಯ ೩೪ ಘಂಟೆ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ಕರೆಂಟ್ ಹೋಗದೆ ಇರುವ ತರ ನೋಡಿಕೊಳ್ಳಲು ತಿಳಿಸಲಾಯಿತು.
  ಇನ್ನೂಳಿದಂತೆ ಪಶು ಇಲಾಕೆ, ಕೆ.ಎಸ್.ಆರ್.ಟಿ.ಸಿ. ಕೃಷಿ ಇಲಾಖೆ ಹಾಗೂ ಇನ್ನೂಳಿದ ಇಲಾಕೆಗಳಿಗೆ  ಜಾತ್ರೆಯಲ್ಲಿ ತಮ್ಮ ಕರ್ತವ್ಯದ ಬಗ್ಗೆ ನೆನಪಿಸಲಾಯಿತು.
ಈ ಬಾರಿ ಜಾತ್ರೆಗೆ ಮುಖ್ಯ ಮಂತ್ರಿಗಳು ಆಗಮಿಸುವ ಸಾಧ್ಯತೆ ಇದ್ದು ಹೆಲಿಪ್ಯಾಡ್ ವ್ಯವಸ್ಥೆ ಮಾಡುವಂತೆ ಸೂಚಿಸಲಾಯಿತು.
  ಈ ಸಂದರ್ಭದಲ್ಲಿ ಜೋಯಿಡಾದ ತಹಶಿಲ್ದಾರರ ಸಂಜಯ ಕಾಂಬಳೆ, ಉಳವಿ ಚನ್ನಬಸವೇಶ್ವರ ಕಮಿಟಿ ಅಧ್ಯಕ್ಷ ಗಂಗಾಧರ ಕಿತ್ತೂರ,ಉಪಾಧ್ಯಕ್ಷ ಸಂಜಯ ಕಿತ್ತೂರ,ಜಿ.ಪಂ.ಸದಸ್ಯ ರಮೇಶ ನಾಯ್ಕ, ಉಳವಿ ಗ್ರಾ.ಪಂ.ಅದ್ಯಕ್ಷ ಮಂಜುನಾಥ ಮೊಕಾಶಿ ತಾ.ಪಂ.ಅದ್ಯಕ್ಷೆ ನರ್ಮದಾ ಪಾಟ್ನೇಕರ, ತಾಲೂಕಾ ಕಾರ್ಯನಿರ್ವಣಾಧಿಕಾರಿ  ಆನಂದ.ಬಿ. ಜೋಯಿಡಾ ಸಿ.ಪಿ.ಐ ಬಾಬಾಸಾಬ ಹುಲ್ಲಣ್ಣನವರ, ಬಸವರಾಜ ಬಿಕ್ಕಣ್ಣವರ,ಉಳವಿ ಪಿಡಿಓ ಮಹಮದ್ ಹನೀಪ್ ಇತರರು ಉಪಸ್ಥಿತರಿದ್ದರು .

IMG 20191213 WA0004

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Haliyal News Tagged With: ಉತ್ತರ ಕರ್ನಾಟಕದ ಪ್ರಸಿದ್ದ ಜಾತ್ರೆ, ಕುಂಬಾರವಾಡಾ ರಸ್ತೆ, ಪೂರ್ವಭಾವಿ ಸಭೆ., ಪೋಟೋಲಿ - ಉಳವಿ, ಪ್ರಸಿದ್ದ, ಪ್ರಸಿದ್ದ ಉಳವಿ ಜಾತ್ರೆ‌ ಹಿನ್ನೆಲೆ‌, ಲೋಕೋಪಯೋಗಿ ಇಲಾಕೆ, ಸರ್ಕಾರಿ ಇಲಾಕೆ ಅಧಿಕಾರಿ

Explore More:

About Sandesh Desai

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...