
ಕಣ್ಣ ಹೊಡೆದು, ಓಡಿ ಹೋದೆನಿಂಗೆ ಹಿಂಬಾಲಿಸಿದೆ ನಾಒಮ್ಮೆ ಬಂದು ಕಣ್ಣೆದುರು ನಿಂತುನನ್ನನೆ ಪ್ರೀತಿಸು, ನಲ್ಲೆ ನನ್ನನೆ ಪ್ರೇಮಿಸುಹೃದಯದಲ್ಲಿ ನಿಂದೆ ಜ್ಞಾನ ಮಾಡಿದೆಆ ಬಡಿತದ ಉಸಿರೆ ನಿನ್ನದಾಗಿದೆಈ ನನ್ನ ಪ್ರಾಣವು, ನಿನೇ ಬೇಕೆಂದಿದೆ.
ಮಾತನಾಡದೆ ಒಮ್ಮೆ ಕಾಯಿಸಿ ಮನಸಾರೆ ನಿನ್ನ ಪ್ರೀತಿಸಿನನ್ನ ಮಾತು ಕೇಳದೆ ಕಣ್ಣುಗಳೆರಡು, ನಿನ್ನೆ ನೋಡಿದೆಯಾಕಾಯ್ತು ನನಗೆ ನಿನ್ನ ಪ್ರೀತಿಯ ಗಾಯನಿ ಬಂದು ಮುಟ್ಟು ಸಾಕು ಆಗುವುದು ಮಾಯಇನ್ನಾಗದು ಚಿಕ್ಕ ಗಾಯ, ಅದಕ್ಕೆ ನಿನ್ನದೆ ಭಯಪುಟ್ಟ ಮಗುವಿನ ಹಾಗೆ ನೋಡಿ, ಕಾಪಾಡೆಯ.
ಹಗಲು ರಾತ್ರಿ ಎಂಬ ಹೊತ್ತಿಗೆಸೂರ್ಯ ಚಂದ್ರ ಇಬ್ಬರ ಬೆಳಕಿಗೆಪ್ರಿಯತಮನಾದೆ ನಿನ್ನ ಹೃದಯದ ಆಸ್ತಿಗೆಬಚ್ಚಿಟ್ಟ ಎಲ್ಲಾ ನನ್ನ ಮನದಾಸೆಗೆಅದೃಷ್ಟವಾಗಿ ಸಿಕ್ಕಿದೆ, ಈ ಬಡಪಾಯಿಗೆನೀ ಮಾಡಬೇಡ ಕಣೇ ತುಸು ನಾಚಿಗೆ.
ಪ್ರೀತಿ ಕಾಳಜಿಯ ವಹಿಸಬೇಕಾಸಿಹಿ ಮುತ್ತನು ನೀಡಬೇಕಾನೀ ನನಗೆ ಇಷ್ಟದ ಚಿನ್ನಾ ಹೊಡೆದಿರುವೆ ನನಗೆ ಸಾಕಷ್ಟು ಕಣ್ಣಾನೋಡಿಕೊಳ್ಳುವೆ ನಿನಗೆ ತುಂಬಾ ಜೋಪಾನಆಗಿ ಹೋದೆನು ನಿನ್ನ ಬಾಳ ಯಜಮಾನ.

✍? *ಪುಷ್ಪಹಾಸ ಬಸ್ತಿಕರ, ಗೋಕರ್ಣ*
Leave a Comment