
ಹಳಿಯಾಳ:- ರಾಷ್ಟ್ರ ಮಟ್ಟದ ಖೇಲೋ ಇಂಡಿಯಾ ಕುಸ್ತಿ ಸ್ಪರ್ಧೆಗೆ ಹಳಿಯಾಳದ ಗ್ರಾಮೀಣ ಪ್ರತಿಭೆ ಗಾಯಿತ್ರಿ ಸುತಾರ ಆಯ್ಕೆಯಾಗಿದ್ದಾಳೆ.
ಇದೆ ಜನೆವರಿ ತಿಂಗಳ ದಿ. 14ರಿಂದ ದಿ. 20 ರವರೆಗೆ ಗುವ್ಹಾಟಿ(ಆಸ್ಸಾಂ)ನಲ್ಲಿ ನಡೆಯಲಿರುವ ಖೇಲೋ ಇಂಡಿಯಾ 17ವರ್ಷ ವಯೋಮಿತಿಯೊಳಗಿನ ಬಾಲಕಿಯರ ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಹಳಿಯಾಳ ಕ್ರೀಡಾ ವಸತಿ ನಿಲಯದ ಗಾಯತ್ರಿ ರಮೇಶ ಸುತಾರ ಭಾಗವಹಿಸಲಿದ್ದಾಳೆ.
ತಾಲೂಕಿನ ಯಡೋಗಾ ಗ್ರಾಮದವಳಾಗಿರುವ ಇವಳು ಪಟ್ಟಣದ ಲಿಟ್ಲಲ್ ಫ್ಲಾವರ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಹಳಿಯಾಳದ ಗಣ್ಯರು, ಪಾಲಕರು ಅಭಿನಂದಿಸಿದ್ದಾರೆ.

Leave a Comment