
ಹಳಿಯಾಳ ;
ದೇಶದ್ರೋಹಿ ಚಟುವಟಿಕೆಗಳಿಗೆ ಪ್ರಚೋದನೆ ನೀಡುವ ಹಾಗೂ ಮೊನ್ನೆಯ ಮಂಗಳೂರಿನ ಹಿಂಸಾಚಾರದಲ್ಲಿ ನೇರವಾಗಿ ಭಾಗಿಯಾಗಿರುವ ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳಿಗೆ ಸರ್ಕಾರ ಕೂಡಲೇ ನಿμÉೀಧ ಹೇರಬೇಕೆಂದು ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದ್ದಾರೆ.
ಪಟ್ಟದಲ್ಲಿ ಬಿಜೆಪಿ ಪಕ್ಷ ಆಯೊಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇರಳ ಮೂಲದ ದೇಶ ವಿರೋಧಿ ಸಂಘಟನೆಗಳಾಗಿರುವ ಪಿಎಫ್ಐ ಹಾಗೂ ಎಸ್ಡಿಪಿಐ ಕಾರ್ಯಕರ್ತರಿಂದಲೇ ಮಂಗಳೂರಿನಲ್ಲಿ ಅಶಾಂತಿ ವಾತಾವರಣ ಉಂಟಾಗಿದ್ದು ಈಗಾಗಲೇ ಮೇಲ್ನೋಟಕ್ಕೆ ಸಾಬೀತಾಗಿದ್ದು ಕೂಡಲೇ ಈ ಸಂಘಟನೆಗಳ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದರು.
ಮಂಗಳೂರಿನಲ್ಲಿ ಹಿಂಸಾಚಾರ ಮಾಡಿ ಸಾರ್ವಜನಿಕ ಹಾಗೂ ಸರ್ಕಾರದ ಆಸ್ತಿಪಾಸ್ತಿ ಹಾನಿ ಮಾಡಿದವರಿಂದಲೇ ನಷ್ಟವನ್ನು ಭರಿಸಿಕೊಳ್ಳಬೇಕು.
ಹಿಂಸಾಚಾರದಲ್ಲಿ ಪಾಲ್ಗೊಂಡು ಸಾವಿಗೀಡಾದವರಿಗೆ ಸರ್ಕಾರ ಘೋಷಿಸಿದ್ದ ಪರಿಹಾರ ಮೊತ್ತ ಸ್ಥಗಿತಗೊಳಿಸಿರುವುದು ಸ್ವಾಗತಾರ್ಹವಾಗಿದೆ.
ಮುಂದೆಯು ಇದೆ ರೀತಿ ಹಾನಿ ಮಾಡುವವರಿಂದಲೇ ಹಾನಿಯನ್ನು ಭರಿಸಿಕೊಳ್ಳುವ ಕೆಲಸ ನಡೆಯಬೇಕು ಅಲ್ಲದೇ ಈ ವಿಷಯದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರ ಕೈಗೊಂಡ ಕ್ರಮ ರಾಜ್ಯಕ್ಕೂ ಅಳವಡಿಸಿಕೊಳ್ಳಬೇಕೆಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಎನ್ಆರ್ಸಿ ಜಾರಿಯಾಗಿದೆ. ಆದರೇ ಈಗ ಪೌರತ್ವ ತಿದ್ದುಪಡಿ ವಿಧೇಯಕದ ಬಗ್ಗೆ ಕಾಂಗ್ರೆಸ್ ಪಕ್ಷ ಹಾಗೂ ಕಮ್ಯುನಿಸ್ಟ್ ಪಕ್ಷಗಳು ಮುಸ್ಲಿಮರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಾಂಗ್ಲಾದೇಶ, ಪಾಕಿಸ್ತಾನ ಇತರ ಮುಸ್ಲಿಂ ದೇಶಗಳಿಂದ ಬರುವವರಿಗೆ ಭಾರತದಲ್ಲಿ ಪೌರತ್ವ ನೀಡುವ ಪ್ರಶ್ನೆಯೇ ಇಲ್ಲವೆಂದು ಸುನೀಲ್ ಹೆಗಡೆ ಸ್ಪಷ್ಟಪಡಿಸಿದರು.
ಭಾರತ ದೇಶದ ಮುಸ್ಲಿಂ ಬಾಂಧವರು ಉಹಾಪೆÇೀಹಗಳಿಗೆ, ಸುಳ್ಳು ಸುದ್ದಿಗಳಿಗೆ ದಾರಿ ತಪ್ಪಬೇಡಿ ಮೋದಿ ಸರ್ಕಾರದ್ದು ಸಬಕಾ ಸಾತ್ ಸಬಕಾ ವಿಕಾಸ್ ಸರ್ಕಾರ ಆಗಿದೆ ಎಂದು ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಗಣಪತಿ ಕರಂಜೆಕರ, ಪ್ರಧಾನ ಕಾರ್ಯದರ್ಶಿ ಅನಿಲ ಮುತ್ನಾಳ, ಪುರಸಭೆ ಸದಸ್ಯರಾದ ಸಂತೋಷ ಘಟಕಾಂಬಳೆ, ಚಂದ್ರು ಕಮ್ಮಾರ, ಉದಯ ಹೂಲಿ, ಪ್ರಮುಖರಾದ ಶಂಕರ ಗಳಗಿ, ವಿಎಮ್ ಪಾಟೀಲ, ವಿಲಾಡ ಯಡವಿ, ಸಂತಾನ ಸಾವಂತ, ಮಂಜು ಪಂಡಿತ, ವಿಜಯ ಬೋಬಾಟಿ ಇತರರು ಉಪಸ್ಥಿತರಿದ್ದರು.
ಕೋಟ್:
ಬಿಜೆಪಿ ಪಕ್ಷದ ಹಳಿಯಾಳ ಮಂಡಳ, ತಾಲೂಕಾ ಪದಾಧಿಕಾರಿಗಳ ಬದಲಾವಣೆ ಆಗಿದೆ. ಅಲ್ಲದೇ ಜ. 13 ರಿಂದ 15 ರವರೆಗೆ ಹಳಿಯಾಳ ಬಿಜೆಪಿ ಪಕ್ಷದಿಂದ ಯಾವುದೇ ಅಧಿಕೃತ ಪ್ರತಿಭಟನೆ, ಸಾರ್ವಜನಿಕ ಸಭೆಗಳು ಇಲ್ಲ. ಯಾರಾದರೂ ಸಿಎಬಿ ಸಮರ್ಥನೆಯಲ್ಲಿ ಕಾರ್ಯಕ್ರಮ ಮಾಡಿದರೇ ಒಳ್ಳೆಯದು ನಮ್ಮ ತಕರಾರಿಲ್ಲ ಆದರೇ ಬಿಜೆಪಿ ಪಕ್ಷದ ಬಾವುಟದ ಅಡಿ ಮಾಡಿದರೇ ತಪ್ಪು.
-ಸುನೀಲ್ ಹೆಗಡೆ. ಮಾಜಿ ಶಾಸಕರು, ಹಳಿಯಾಳ.
ಪೌರತ್ವ ಕಾಯ್ದೆ ಜನಜಾಗೃತಿ ಅಭಿಯಾನ:
ಜ. 1 ರಿಂದ 15 ರವರೆಗೆ ವಿವಿಧ ಹಂತದಲ್ಲಿ ಪೌರತ್ವ ಕಾಯ್ದೆ ಬಗ್ಗೆ ಜನಜಾಗೃತಿ ಅಭಿಯಾನ ನಡೆಸಲು ಬಿಜೆಪಿ ಪಕ್ಷ ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿಸಿದ ಹೆಗಡೆ ಅವರು ಜ.1 ರಿಂದ 5 ರವರೆಗೆ ಬೂತ್ ಮಟ್ಟದಿಂದ ಕಾರ್ಯಕರ್ತರಿಂದ ಮನೆ ಮನೆ ಸಂಪರ್ಕ, ಜ.6 ರಿಂದ 8ರವರೆಗೆ ಪೌರತ್ವ ಜಾಗೃತಿ ನಡಿಗೆ ಮತ್ತು ಚಾಯ ಪೇ ಚರ್ಚಾ, ಜ.9 ಹಾಗೂ 10 ರಂದು ಎಲ್ಲರೊಂದಿಗೆ ಮುಕ್ತ ಸಂವಾದ ಮತ್ತು ಭಾರತ ಮಾತಾ ಪೂಜನೆ, ಜ. 11 ಮತ್ತು 12 ರಂದು ಸಹಿ ಸಂಗ್ರಹ ಅಭಿಯಾನ, ಹೇಳಿಕೆ ಪಡೆಯುವುದು, ಸಭೆ ನಡೆಸುವುದು, ಪತ್ರ ಅಭಿಯಾನ.
ಜ. 13 ರಿಂದ 15 ರವರೆಗೆ ಒಂದು ದಿನ ಸಾರ್ವಜನಿಕ ಸಭೆ ಹಾಗೂ ಹಳಿಯಾಳ ಪಟ್ಟಣದಲ್ಲಿ ಸಿಎಬಿ, ಎನ್ಆರ್ಸಿ ಪರವಾಗಿ ಬೆಂಬಲಿಸಿ ಬೃಹತ್ ಮೆರವಣಿಗೆ ನಡೆಸಲಾಗುವುದು ಇದರಲ್ಲಿ ಸಂಸದ ಅನಂತಕುಮಾರ ಹೆಗಡೆ ಸೇರಿದಂತೆ ರಾಜ್ಯ ಮಟ್ಟದ ನಾಯಕರು ಭಾಗವಹಿಸಲಿದ್ದಾರೆಂದರು.
ಈ ಕಾರ್ಯಕ್ರಮಗಳು ಯಾವುದೇ ಸಮುದಾಯದ ವಿರುದ್ಧ ಅಲ್ಲ ಬದಲಾಗಿ ಪೌರತ್ವ ಕಾಯ್ದೆಯ ಮಹತ್ವ ತಿಳಿಸುವ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ ಎಂದು ಸುನೀಲ್ ಹೆಗಡೆ ಸ್ಪಷ್ಟಪಡಿಸಿದರು.
Leave a Comment