
ಜೋಯಿಡಾ ತಾಲೂಕಿನಲ್ಲಿ ಮನುಷ್ಯರಿಗೆ ಬೆಲೆಯೇ ಇಲ್ಲದಂತಾಗಿದೆ,ಇಲ್ಲಿ ಬದುಕುವ ಜನರಿಗೆ ಯಾವುದಾದರೂ ಸೌಲಬ್ಯವನ್ನು ನೀಡಲು ಇಲ್ಲಿನ ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿದೆ. ನಾವು ಇಲ್ಲಿ ಬದುಕುವುದು ಹೇಗೆ. ತಾಲೂಕಿನ ೧೧ ಗ್ರಾಮ ಪಂಚಾಯತ್ ಗಳಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗೀತವಾಗಿದೆ,ಅರಣ್ಯ ಇಲಾಕೆಯ ಉದ್ದೇಶ ಇಲ್ಲಿ ಜನರು ಬದುಕುವುದೇ ಬೇಡ ಎನ್ನುವಂತಿದೆ ಎಂದು ಕುಂಬಾರವಾಡಾ ಗ್ರಾ.ಪಂ.ಅದ್ಯಕ್ಷ ಪುರುಷೋತ್ತಮ ಕಾಮತ್ ಹೇಳಿದರು.
ಅವರು ಇಂದು ಶುಕ್ರವಾರ ನಡೆದ ತಾ.ಪಂ.ಕೆ.ಡಿ.ಪಿ.ಸಭೆಯಲ್ಲಿ ಮಾತನಾಡುತ್ತಿದ್ದರು,ಅರಣ್ಯ ಇಲಾಕೆಯವರು ತಮಗೆ ಬೇಕಾದಲ್ಲಿ ರಸ್ತೆ ಮಾಡುತ್ತಾರೆ,ಜನರಿಗೆ ರಸ್ತೆ ಆಗಬೇಕಾದರೆ ತಡೆಯುತ್ತಾರೆ.ಈ ರೀತಿಯಾದರೆ ಹೇಗೆ ಕಳೆದ ೧ ವರ್ಷ ದಿಂದ ಸಭೆಯಲ್ಲಿ ಚರ್ಚೆಆಗುತ್ತದೆ ಬಿಟ್ಟರೆ ಯಾವುದೇ ಅಭಿವೃದ್ಧಿ ಆಗಲು ಅರಣ್ಯ ಇಲಾಕೆ ಬಿಡುತ್ತಿಲ್ಲ, ಇಂದು ಈ ಸಭೆಯಲ್ಲೇ ತೀರ್ಮಾನ ಆಗಲಿ ಅರಣ್ಯ ಅಧಿಕಾರಿಗಳು ಪ್ರಗತಿ ಕೆಲಸಗಳು ಮಾಡಲು ಬಿಡುತ್ತಾರೋ ಇಲ್ಲವೂ ಎಂದು ತಿಳಿಸಲಿ ಇಲ್ಲವಾದರೆ ಸಭೆ ಬಹಿಷ್ಕಾರಿಸಿ ಹೊರ ನಡೆಯುತ್ತವೆ ಎಂದು ಪುರುಷೋತ್ತಮ ಕಾಮತ್ ಹೇಳಿದ ಕೂಡಲೇ ತಾಲೂಕಿನ ಎಲ್ಲಾ ಜನಪ್ರತಿನಿಧಿಗಳು ಸಭೆ ಬಹಿಷ್ಕಾರ ಮಾಡಿ ಹೊರ ಬಂದರು.

ತಾ.ಪಂ.ಸದಸ್ಯ ಶರತ ಗುರ್ಜರ ಮಾತನಾಡಿ ಜೋಯಿಡಾ ತಾಲೂಕಿನಲ್ಲಿ ಅರಣ್ಯ ಅಧಿಕಾರಿಗಳಿಗೆ ಒಂದು ಕಾನೂನು ಸಾಮಾನ್ಯ ಜನರಿಗೆ ಒಂದು ಕಾನೂನು ಆಗಿದೆ.ರಸ್ತೆ ಮಾಡಿದರೆ ಅದರಲ್ಲಿ ಜನಪ್ರತಿನಿಧಿಗಳು ಕೂಡಾ ತಿರುಗಾಡುವುದಿಲ್ಲವೇ ಅವರೇನು ಹೆಲಿಕಾಪ್ಟರ್ ಮೂಲಕ ತಿರುಗಾಡುತ್ತಾರೆಯೇ ಎಂದು ಗುಡುಗಿದರು.
ತದ ನಂತರ ಜಿ.ಪಂ.ಸದಸ್ಯ ರಮೇಶ ನಾಯ್ಕ ಜನಪ್ರತಿನಿಧಿಗಳ ಮನ ವೊಲಿಸಿ, ಅರಣ್ಯ ಇಲಾಕೆ ಸಿಬ್ಬಂದಿಗಳ ಜೊತೆ ಮಾತನಾಡಿ ೩ ದಿನದ ಒಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ತಾಲೂಕಿನ ಕುಂಬಾರವಾಡಾ ,ಉಳವಿ ,ಗುಂದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು ಈ ಬಗ್ಗೆ ಪ್ರತಿ ಸಭೆಯಲ್ಲಿ ಹಾಡಿದ್ದೆ ಹಾಡು ಕಿಸಬಾಯಿ ದಾಸ ಎಂಬತೆ ಹೇಳಿ ಹೇಳಿ ಬೇಸರ ಬಂದಿದೆ. ವೈದ್ಯರನ್ನು ಕೊಡಲು ಆಗದೇ ಹೊದರೆ ಆಸ್ಪತ್ರೆ ಏಕೆ? ನಾಳೆಯಿಂದಲೇ ಆಸ್ಪತ್ರೆ ಬಂದ ಮಾಡಿ ಎಂದು ಜನಪ್ರತಿನಿಧಿಗಳು ವೈದ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಉಳಿದಂತೆ ಇದುಲೋಕೋಪಯೋಗಿ ಇಲಾಕೆ,ಜಿ.ಪಂ ಇಲಾಕೆ ,ತೋಟಗಾರಿಕಾ ಇಲಾಕೆ ವರದಿ ನೀಡಲಾಯಿತು.
ತಾ.ಪಂ.ಅದ್ಯಕ್ಷೆ ನರ್ಮದಾ ಪಾಟ್ನೇಕರ ಅದ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ರಮೇಶ ನಾಯ್ಕ, ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಆನಂದ ಬಾಡಕುಂದ್ರಿ,ಇತರರು ಉಪಸ್ಥಿತರಿದ್ದರು.
ಇಂದಿನ ಕೆಡಿಪಿ ಸಭೆಯಲ್ಲಿ ಜನಪ್ರತಿನಿಧಿಗಳಿಗೆ ಕುಳಿತು ಕೊಳ್ಳಲು ಜಾಗ ಇಲ್ಲದೇ ನಿಂತು ಕೆಡಿಪಿ ಸಭೆ ಮಾಡುವಂತೆ ಆಯಿತು.ಸಭೆ ಬಹಿಷ್ಕಾರ ಮಾಡಿದಾಗ ಸಭೆ ಕೆಲ ಕಾಲ ನಿಂತು ಮತ್ತೆ ನಡೆಯಿತು. ಅರಣ್ಯ ಇಲಾಕೆ ಹಿರಿಯ ಅಧಿಕಾರಿಗಳು ಬರಲೇ ಬೇಕು ಎಂದು ಜನಪ್ರತಿನಿಧಿಗಳು ಪಟ್ಟು ಹಿಡಿದ ಘಟನೆ ನಡೆಯಿತು.

Leave a Comment