
ಹಳಿಯಾಳ:- ಅಪ್ರಾಪ್ತ ಯುವತಿಯನ್ನು ಅಪಹರಿಸಿ ಅತ್ಯಾಚಾರಗೈದ ಆರೋಪದ ಮೆಲೆ ಓರ್ವನ ಮೇಲೆ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಆತನನ್ನು ಬಂಧಿಸಿ ಕಾರವಾದ ಜಿಲ್ಲಾ ಕಾರಾಗೃಹಕ್ಕೆ ಅಟ್ಟಲಾಗಿದೆ.
ಹಳಿಯಾಳಕ್ಕೆ ಕಬ್ಬು ಕಟಾವಿಗೆ ಆಗಮಿಸಿದ್ದ ಹಗರಿಬೊಮ್ಮನಹಳ್ಳಿ- ಹೊಸಹಡಗಲಿಯ ವೆಂಕಟಾಪುರ(ಡನಾಪುರ) ಗ್ರಾಮದ ಗಾಳೆಪ್ಪಾ ಮಾಯನ್ನವರ ಎನ್ನುವಾತ ತಮ್ಮ ಕಬ್ಬು ಕಟಾವು ತಂಡದೊಂದಿಗೆ ಬಂದಿದ್ದ ಸಂಬಂಧಿಕರ 14 ವರ್ಷ ಪ್ರಾಯದ ಅಪ್ರಾಪ್ತ ಯುವತಿಯನ್ನು ಫುಸಲಾಯಿಸಿ ಅಪಹರಿಸಿಕೊಂಡು ಹೊಗಿದ್ದ.
ರಾಜ್ಯದ ವಿವಿಧ ಕಡೆ ತಿರುಗಾಡಿ ಯುವತಿಯ ಮೇಲೆ ಅತ್ಯಾಚಾರ ಗೈದಿದ್ದ ಎನ್ನಲಾಗಿದೆ. ಈ ಕುರಿತು ಹಳಿಯಾಳ ಠಾಣೆಯಲ್ಲಿ ಡಿಸೆಂಬರ್ ತಿಂಗಳ ದಿ.17 ರಂದು ಯುವತಿ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿತ್ತು ಅಲ್ಲದೇ ಗಾಳೆಪ್ಪ ಮೇಲೆ ಸಂಶಯ ವ್ಯಕ್ತಪಡಿಸಲಾಗಿತ್ತು.
ಬಳಿಕ ಉಕ ಜಿಲ್ಲಾ ಎಸ್ಪಿ ಶಿವಪ್ರಕಾಶ ದೇವರಾಜ ಅವರ ಮಾರ್ಗದರ್ಶನದಲ್ಲಿ ಹಳಿಯಾಳ ಪಿಎಸ್ಐ ಯಲ್ಲಾಲಿಂಗ್ ಕುನ್ನೂರ ಅವರು ಕಾರ್ಯಾಚರಣೆ ನಡೆಸಿ ಬಳ್ಳಾರಿಯಲ್ಲಿ ಆರೋಪಿ ಗಾಳೆಪ್ಪನನ್ನು ಬಂಧಿಸಿ ತರುವಲ್ಲಿ ಯಶಸ್ವಿಯಾಗಿದ್ದು ಅಪ್ರಾಪ್ತ ಯುವತಿಯನ್ನು ರಕ್ಷಿಸಲಾಗಿದೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Comment