
ಹಳಿಯಾಳ:- ರೈತರ ಸೇವಾ ಸಹಕಾರಿ ಸಂಘ ನಿಯಮಿತ(ಆರ್ಎಸ್ಎಸ್) ಹಳಿಯಾಳ ಸೊಸೈಟಿಗೆ ನೂತನ ನಿರ್ದೇಶಕರ ಆಯ್ಕೆಗೆ ನಡೆಯಲಿರುವ ಚುನಾವಣೆಗೆ ಗುರುವಾರ ವಿಧಾನ ಪರಿಷತ್ ಸದಸ್ಯರು ಆಗಿರುವ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೊಟ್ನೇಕರ ನಾಮಪತ್ರ ಸಲ್ಲಿಸಿದರು.
ದಿ.10 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ಈವರೆಗೆ ಮೂವರು ಮಹಿಳೆಯರು ಹಾಗೂ 21 ಪುರುಷ ಉಮೇದುವಾರರು ಸೇರಿ ಒಟ್ಟೂ 24 ನಾಮಪತ್ರ ಸಲ್ಲಿಕೆಯಾಗಿವೆ. ಗುರುವಾರ ಹಳಿಯಾಳದ ವಾರ್ಡ ನಂ1 ಸಾಲಗಾರರ ಕ್ಷೇತ್ರ(ಸಾಮಾನ್ಯ) ದಿಂದ ಘೊಟ್ನೇಕರ ಅವರು ಚುನಾವಣಾಧಿಕಾರಿ ಪಾಂಡುರಂಗ ಮಾನೆ ಅವರಿಗೆ ನಾಮಪತ್ರ ಸಲ್ಲಿಸಿದರು.
ಆರ್ಎಸ್ಎಸ್ ಸೊಸೈಟಿಗೆ 12 ಜನ ನಿರ್ದೇಶಕರ ಆಯ್ಕೆಗೆ ಈ ಚುನಾವಣೆ ನಡೆಯಲಿದೆ ಎಂದು ಅಧಿಕಾರಿ ಪಾಂಡುರಂಗ ಮಾನೆ ಮಾಹಿತಿ ನೀಡಿದರು.

Leave a Comment