
ಜೋಯಿಡಾ ಯವ ಬ್ರೀಗೆಡ ಕಾರ್ಯಕರ್ತರು ರವಿವಾರ ದಾಂಡೇಲಿ -ಜೋಯಿಡಾ ಯುವ ಬ್ರೀಗೆಡ್ ಮುಖಂಡ ಗಣೇಶ ಹೆಗಡೆ ನೇತ್ರತ್ವದಲ್ಲಿ ವಿವೇಕಾನಂದ ಜಯಂತಿ ಅಂಗವಾಗಿ ದಾಂಡೇಲಿಯ ಬೈಲಪಾರದಿಂದ ಶ್ರೀಕ್ಷೇತ್ರಉಳವಿ ವರೆಗೆ ಪಾದಯಾತ್ರೆ ನಡೆಸಿ ಯುವಕರಿಗೆ ವಿವೇಕಾನಂದರ ಕುರಿತು ಜಾಗ್ರತಿ ಮೂಡಿಸಿದರು.
ಜೋಯಿಡಾ ತಾಲೂಕಾಕೇಂದ್ರದ ಸರ್ಕಲ್‍ನಲ್ಲಿ, ಜನತಾ ಕಾಲೋನಿ ಹಾಗ ಟೌನಶಿಪ್ ಗಳಲ್ಲಿ ಜಾತಾ ನಡೆಸಿದರು. ನಂತರ ಜೋಯಿಡಾ ಕೇಂದ್ರದಲ್ಲಿ ವಿವೇಕಾನಂದರ ಆದರ್ಶ ಹಾಗೂ ಅವರು ನಡೆದು ಬಂದ ದಾರಿ ಕುರಿತು ಮಾತನಾಡಿನ ಮಂಗಳೂರಿನ ಪರಿಸರವಾದಿ ದಿನೇಶ ಹೊಳ್ಳ, ವಿವೇಕಾನಂದರು ಭಾರತದಲ್ಲಿ ಯುವಜನತೆಗೆ ಮಾರ್ಗದರ್ಶಕರಾಗಿ, ದೇಶದ ಮುನ್ನಡೆಗೆ ದಾರಿ ದೀಪ ತೋರಿದ ನಾಯಕರು.ದೇಶದ ಸಂಸ್ಕøತಿ ಉಳಿವಿಗೆ ಶ್ರಮಿಸಿದ ಮಹಾನು ಭಾವರು. ಇವರ ದಾರಿಯಲ್ಲಿ ನಾವುಗಳು ನಡೆಯುತ್ತಾ, ಇವರ ಆದರ್ಶ ಪಾಲಿಸುವದರೊಂದಿಗೆ ಅವರ ಕನಸಿನ ದೇಶ ಕಟ್ಟೊಣ ಎಂದು ಕರೆನೀಡಿದರು.
ಗಣೇಶ ಹೆಗಡೆ ಜೋಯಿಡಾ ನೇತ್ರತ್ವದಲ್ಲಿ ನಡೆದ ಈ ರ್ಯಾಲಿ ಶ್ರೀ ಕ್ಷೇತ್ರ ಉಳವಿವರೆಗೆ ಜಾತಾ ನಡೆಸಿ, ದಾರಿ ಮಧ್ಯದ ಹಳ್ಳಿಹಳ್ಳಿಗಲ್ಲಿ ನಿಂತು ವಿವೇಕಾನಂದರ ಸಂದೇಶ ಸಾರುವ ಕರಪತ್ರವನ್ನು ವಿತರಿಸಿದರು. ಶ್ರೀ ಕ್ಷೇತ್ರ ಚೆನ್ನ ಬಸವೇಶ್ವರರ ಧರ್ಶನದೊಂದಿಗೆ ಜಾತಾ ಮುಕ್ತಾಯ ಗೊಳಿಸಿದರು. ಈ ಸಂದರ್ಭದಲ್ಲಿ ಸ್ವಪ್ನೇಲ ಶೇಟ್, ಉದಯ ಪಾಟಿಲ, ಅರವಿಂದ ಹಳದನಕರ, ಪ್ರದೀಪ ಹರಿಕಾಂತ್ರ, ಕುಮಾರ ಪೆಡ್ನೇಕರ, ಮುಂತಾದ ಸುಮಾರು 75ಕ್ಕೂ ಹಚ್ಚು ಕಾರ್ಯಕರ್ತರು ಪಾದಯಾತ್ರೆಂiÀiಲ್ಲಿ ಪಾಲ್ಗೊಂಡಿದ್ದರು.


Leave a Comment