
ಹಳಿಯಾಳ:- ಸಹಕಾರಿ ಸಂಘಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಹಳಿಯಾಳದ ರೈತರ ಸೇವಾ ಸಹಕಾರಿ ಸಂಘದಲ್ಲಿ ಮತದಾರರ ಪಟ್ಟಿಯಿಂದ ಕೈ ಬಿಟ್ಟಿದ್ದ ಮತದಾರರಲ್ಲಿ 360ಜನರಿಗೆ ಹೈಕೊರ್ಟ ಮತದಾನದ ಹಕ್ಕು ನೀಡಿ ತೀರ್ಪು ನೀಡಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ನಡೆಯುತ್ತಿರುವ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಪಟ್ಟಣದ ರೈತರ ಸೇವಾ ಸಹಕಾರಿ ನಿಯಮಿತದಲ್ಲಿ ಸಾವಿರಾರು ಶೇರುದಾರ ಸದಸ್ಯ ರೈತ ಮತದಾರರನ್ನು ದುರುದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ಆರೋಪಿಸಿದರು.
ಆರ್.ಎಸ್.ಎಸ್ ಬ್ಯಾಂಕ್ ನಿರ್ದೇಶಕರು ಆಗಿರುವ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ಕೆಡಿಸಿಸಿ ಬ್ಯಾಂಕ್ಗೆ ನಿರ್ದೇಶಕರಾಗಿ ಹೊಗಲು ಸಹಕಾರ ಕಾಯ್ದೆಯ ದುರುಪಯೋಗ ಪಡಿಸಿಕೊಂಡಿದ್ದಾರೆ. ಪಟ್ಟಣದ ಮತದಾರರಿಗೆ ಮೊಸ ಮಾಡಲಾಗಿದೆ ಎಂದು ಆಪಾದಿಸಿದ ಹೆಗಡೆ ಆಡಳಿತ ಮಂಡಳಿಯವರೇ ಯಾದಿ ತಯಾರಿಸಿದ್ದು ಷಡ್ಯಂತ್ರದ ಮೂಲಕ ಕೆಲವರ ಮತದಾನದ ಹಕ್ಕನ್ನು ಕಸಿಯಲಾಗಿದೆ. ಆದರೇ ಜನರ ದಿಕ್ಕು ತಪ್ಪಿಸಲು ಆರ್ಎಸ್ಎಸ್ ಅಧ್ಯಕ್ಷ ನುಚ್ಚಂಬ್ಲಿ ಅವರು ಸುದ್ದಿಗೊಷ್ಠಿ ನಡೆಸಿದ್ದಾರೆ ವಿನಃ ಇದರಲ್ಲಿ ಮತದಾರ ರೈತರ ಪರ ಕಾಳಜಿ ಇಲ್ಲವೆಂದರು.

ಈಗಾಗಲೇ ಹೈಕೊರ್ಟಗೆ ಹೊದವರಲ್ಲಿ 360 ಜನರಿಗೆ ಮತದಾನದ ಹಕ್ಕು ನೀಡಲಾಗಿದ್ದು ಇನ್ನುಳಿದವರ ಪರವು ತೀರ್ಪು ಬರುವ ವಿಶ್ವಾಸವಿದೆ ಎಂದರು.
ಹಳಿಯಾಳದ ಪಿಎಲ್ಡಿ ಬ್ಯಾಂಕ್ನ 14 ಜನರಲ್ಲಿ 9 ಜನರು ಬಿಜೆಪಿ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದು ಇನ್ನುಳಿದವರು ಆಯ್ಕೆಯಾಗುವ ವಿಶ್ವಾಸವಿದೆ ಎಂದರು.
11 ಸೊಸೈಟಿಗಳ ಚುನಾವಣೆಯಲ್ಲಿ 8 ರಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆಂದು ಭವಿಷ್ಯ ನುಡಿದ ಹೆಗಡೆ ಕಾಂಗ್ರೇಸ್ ಪಕ್ಷದ ದುರಾಡಳಿತಕ್ಕೆ ರೈತರು ತಕ್ಕ ಪಾಠ ಕಲಿಸಲಿದ್ದಾರೆಂದರು.
ಸುದ್ದಿಗೊಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಗಣಪತಿ ಕರಂಜೆಕರ, ಶಿವಾಜಿ ನರಸಾನಿ, ಅನಿಲ ಮುತ್ನಾಳ್, ಸಂತೋಷ ಘಟಕಾಂಬಳೆ, ಉದಯ ಹೂಲಿ ಇದ್ದರು.

Leave a Comment