• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಾಗರಮಾಲಾ‌ ಯೋಜನೆಯಿಂದ ಮೀನುಗಾರರಿಗೆ ತೊಂದರೆ ಇಲ್ಲ- ಯೋಜನೆ ಬಗ್ಗೆ ತಪ್ಪು ತಿಳುವಳಿಕೆ‌ ಬೇಡ- ಮಾಜಿ ಶಾಸಕ‌ ಸುನೀಲ್ ಹೆಗಡೆ ವಿನಂತಿ.

January 16, 2020 by Yogaraj SK Leave a Comment

X mla sunil hegde press meet

ಹಳಿಯಾಳ:- ಸಾಗರಮಾಲಾ ಯೋಜನೆಯ ಪ್ರತಿಭಟನೆ ಸಂದರ್ಭದಲ್ಲಿ ಕೆನರಾ ಸಂಸದ ಅನಂತಕುಮಾರ ಹೆಗಡೆ ಮತ್ತು ಶಾಸಕಿ ರೂಪಾಲಿ ನಾಯ್ಕರ ಭಾವಚಿತ್ರಗಳಿಗೆ ಮಸಿ ಬಳಿದು, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ತೀವೃವಾಗಿ ಖಂಡಿಸುವುದಾಗಿ ಹೇಳಿದ ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಎಲ್ಲರ ಹಕ್ಕು ಆದರೇ ನಿಂದನೆ ಮಾಡುವುದು ಸರಿಯಲ್ಲ ಎಂದರು.
ಪಟ್ಟಣದಲ್ಲಿ ಸಂಕ್ರಾಂತಿ ಹಬ್ಬದ ದಿನ ಬಿಜೆಪಿ ಪಕ್ಷದವರು ಕರೆದ ತುರ್ತು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಇದ್ದಾಗ ಡಿಸೆಂಬರ್ 2017ರಲ್ಲೇ ಸಾಗರಮಾಲಾ ಯೋಜನೆಗೆ ಶಿಲಾನ್ಯಾಸ ಮಾಡಲಾಗಿತ್ತು. ಅಂದು ಕಾರವಾರಕ್ಕೆ ಸತೀಶ ಸೈಲ್ ಶಾಸಕರಿದ್ದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

IMG 20200117 WA0019


ಅಲ್ಲದೇ ಈ ಯೋಜನೆಯಲ್ಲಿ ಕಾರವಾರ ಕೈತಪ್ಪಿ ಮಂಗಳೂರು ಸೇರ್ಪಡೆಯಾದಾಗ ಇದೇ ಸೈಲ್ ಸಿದ್ದರಾಮಯ್ಯನವರ ಮೇಲೆ ಒತ್ತಡ ಹಾಕಿ ಸಂಸದ ಅನಂತಕುಮಾರ ಹೆಗಡೆ ಅವರ ಪ್ರಯತ್ನದಿಂದ ಕಾರವಾರಕ್ಕೆ ಯೋಜನೆ ಮಂಜೂರಿ ಮಾಡಿಸಿಕೊಂಡಿದ್ದರು ಆದರೇ ಇಂದು ಮುಗ್ದ ಮೀನುಗಾರರ ದಿಕ್ಕು ತಪ್ಪಿಸಿ ಯೋಜನೆ ವಿರೋಧಿಸುವ ನಾಟಕವಾಡುತ್ತಿರುವುದು ಇವರ ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದರು.
ಸಾಗರಮಾಲಾ ಯೋಜನೆ (ದ ಗ್ರೇಟ್ ಗ್ರೌಂಡ್ ಪೊರ್ಟ) ಅನುಷ್ಠಾನದಿಂದ ಬಂದರು ಅಭಿವೃದ್ದಿಗೊಂಡು ಉತ್ತರ ಕರ್ನಾಟಕದ ಚಿತ್ರಣವೇ ಬದಲಾಗಲಿದೆ. ಉತ್ತರ ಕನ್ನಡ ಜಿಲ್ಲೆ ಸರಕು ಸಾಗಾಣೆಯ ಹೆಬ್ಬಾಗಿಲು ಆಗಲಿದೆ. ಇಲ್ಲಿ 5 ಲಕ್ಷ ಮೆಟ್ರಿಕ್ ಟನ್ ಸರಕು ಸಾಗಾಣೆ ಆಗುವ ಮೂಲಕ ಜಿಲ್ಲೆ ಸಂಪರ್ಕಿಸುವ ಎಲ್ಲ ಹೆದ್ದಾರಿಗಳು ಅಭಿವೃದ್ದಿಗೊಳ್ಳುತ್ತವೆ. ಈ ಮೂಲಕ ಪ್ರವಾಸೋಧ್ಯಮ ಬೆಳೆಯುತ್ತದೆ. ಜಿಲ್ಲೆಯ ಯುವಕರಿಗೆ ಹೆರಳ ಉದ್ಯೋಗಾವಕಾಶ ದೊರೆಯಲಿದೆ ಎಂದು ಸುನೀಲ್ ಹೆಗಡೆ ವಿವರಿಸಿದರು.

IMG 20191213 WA0004


ಬಿಜೆಪಿ ಪಕ್ಷ ಜನರಿಗೆ ತೊಂದರೆ ಕೊಡುವ ಯಾವುದೇ ಯೋಜನೆ ಜಾರಿಗೆ ತರುವುದಿಲ್ಲ. ಮೀನುಗಾರರನ್ನು ಆರ್ಥಿಕವಾಗಿ ಮುಂದೆ ತರುವುದು, ಈ ಸಮುದಾಯವನ್ನು ಅಭಿವೃದ್ದಿ ಪಡಿಸುವುದು ಜೊತೆಗೆ ಅವರ ರಕ್ಷಣೆಗೆ ಬಿಜೆಪಿ ಪಕ್ಷ ಸದಾ ಬದ್ದವಾಗಿದೆ ಎಂದು ಸ್ಪಷ್ಟಪಡಿಸಿದ ಸುನೀಲ್ ಹೆಗಡೆ ಅವರು ಕಾರವಾರದಿಂದ ಹೊನ್ನಾವರ ವರೆಗೆ ಸಾಗರಮಾಲಾ ಯೋಜನೆಯಿಂದ ಬಂದರು ಅಭಿವೃದ್ದಿಗೊಂಡು ಉದ್ಯೋಗಾವಕಾಶಗಳು ದೊರೆತು ಜನರು ಆರ್ಥಿಕವಾಗಿ ಮುಂದೆ ಬರಲಿದ್ದಾರೆಂದು ಹೇಳಿದರು.
ತಾನೇ ಶಾಸಕನಿದ್ದಾಗ ಯೋಜನೆ ಆರಂಭಿಸಿದ್ದ ಸೈಲ್ ಅಂದು ವಿರೋಧ ವ್ಯಕ್ತಪಡಿಸದೆ ಇಂದು ಗುತ್ತಿಗೆದಾರರಿಂದ ಕಮಿಷನ್‍ಗಾಗಿ ಮುಗ್ದ ಜನರನ್ನು ಬಲಿಪಶು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆಪಾದನೆ ಮಾಡಿದ ಹೆಗಡೆ ಸಾಗರಮಾಲಾ ಯೋಜನೆಯಿಂದ ಕಾರವಾರದ ಸೌಂದರ್ಯ ಹಾಳಾಗುವ ಪ್ರಶ್ನೆಯೇ ಇಲ್ಲ, ಎಲ್ಲ ಸಾಧಕ ಬಾಧಕಗಳು ಹಾಗೂ ಪರಿಸರ ಸಂರಕ್ಷಣೆ ವಿವಿಧ ಎಲ್ಲ ಆಯಾಮಗಳಲ್ಲಿ ಸುಧೀರ್ಘ ಚಿಂತನೆ ಮಾಡಿಯೇ ಸರ್ಕಾರ ಕಾಮಗಾರಿಗೆ ಹಸಿರು ನಿಶಾನೆ ತೊರಿಸಿದೆ ಎಂದರು.
ಮಿನುಗಾರರು ಹಾಗೂ ಸ್ಥಳೀಯ ಜನರು ಯೋಜನೆಯ ಸಂಪೂರ್ಣ ವಿವರವನ್ನು ಸರಿಯಾಗಿ ತಿಳಿದುಕೊಳ್ಳಬೇಕು ಅದನ್ನು ಬಿಟ್ಟು ತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ದ್ವಿಮುಖ ನೀತಿ ತೊರುತ್ತಿರುವ ಸೈಲ್, ಆನಂದ ಅಸ್ನೋಟಿಕರ ಇತರರ ಮಾತು ಕೇಳಿ ತಪ್ಪು ಕಲ್ಪನೆ ಹೊಂದಬಾರದು ಎಂದು ಮನವಿ ಮಾಡಿದರು.
ಸುದ್ದಿಗೊಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಗಣಪತಿ ಕರಂಜೆಕರ, ಶಿವಾಜಿ ನರಸಾನಿ, ಅನಿಲ ಮುತ್ನಾಳ್, ಸಂತೋಷ ಘಟಕಾಂಬಳೆ, ಉದಯ ಹೂಲಿ ಮೊದಲಾದವರು ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Haliyal News Tagged With: ಕಾರವಾರ ಕೈತಪ್ಪಿ ಮಂಗಳೂರು ಸೇರ್ಪಡೆ, ಮೀನುಗಾರರಿಗೆ ತೊಂದರೆ ಇಲ್ಲ, ಯೋಜನೆ ಬಗ್ಗೆ ತಪ್ಪು ತಿಳುವಳಿಕೆ‌ ಬೇಡ- ಮಾಜಿ ಶಾಸಕ‌ ಸುನೀಲ್ ಹೆಗಡೆ ವಿನಂತಿ., ಸಂಕ್ರಾಂತಿ ಹಬ್ಬದ ದಿನ ಬಿ, ಸಾಗರಮಾಲಾ ಯೋಜನೆಯ ಪ್ರತಿಭಟನೆ, ಸಾಗರಮಾಲಾ‌ ಯೋಜನೆಯಿಂದ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,129 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...