
ಹಳಿಯಾಳ:- ಪ್ರತಿ ಚುನಾವಣೆಯಲ್ಲಿ ಭಾರಿ ಪೈಪೊಟಿ ಹಾಗೂ ತುರುಸಿನಿಂದ ಕೂಡಿರುವ ಹಳಿಯಾಳದ ರೈತರ ಸೇವಾ ಸಹಕಾರಿ ಬ್ಯಾಂಕ್(ಆರ್ಎಸ್ಎಸ್) ಚುನಾವಣೆಯು ಈ ಬಾರಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಒಟ್ಟೂ 12 ಜನ ನಿರ್ದೇಶಕರನ್ನು ಹೊಂದಿರುವ ಆರ್ಎಸ್ಎಸ್ ಬ್ಯಾಂಕ್ಗೆ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು. ಜ18 ಶನಿವಾರದಂದು ಬೆಳಿಗ್ಗೆ 9ರಿಂದ ಸಾಯಂಕಾಲ 4ಘಂಟೆಯವರಗೆ ಮತದಾನ ಪ್ರಕ್ರಿಯೇ ನಡೆಯಲಿದ್ದು ಚುನಾವಣೆಯ ಫಲಿತಾಂಶವು ಅದೇ ದಿನದಂದು ಸಾಯಂಕಾಲ ಪ್ರಕಟಿಸಲಾಗುತ್ತದೆ ಎಂದು ಚುನಾವಣಾಧಿಕಾರಿ ಪಾಂಡುರಂಗ ಮಾನೆ ಮಾಹಿತಿ ನೀಡಿದ್ದಾರೆ.
ಒಟ್ಟು ಮೂರು ವಾರ್ಡಗಳ ಪೈಕಿ ವಾರ್ಡ ಸಂಖ್ಯೆ-1 ಹಳಿಯಾಳ, ವಾರ್ಡ ಸಂ.-2 ಹವಗಿ, ಹಾಗೂ ವಾರ್ಡ ಸಂ.-3, ಕರ್ಲಕಟ್ಟಾ ಎಂದು ನಿಗದಿಪಡಿಸಲಾಗಿದೆ.
1038 ಮತದಾರರು ಈ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದು, ಅದರಲ್ಲಿ ಸಾಲಗಾರರಲ್ಲದ ಮತಗಳು 163 ಸಾಲಗಾರರ ಮತಗಳು 875 (ಮೂರು ವಾರ್ಡಗಳು ಸೇರಿ) ಅದರಲ್ಲಿ ವಾರ್ಡ ಸಂ.ಒಂದರಲ್ಲಿ ಸಾಮಾನ್ಯ 3, ಪ.ಜಾ. 1, ಪ.ಪಂ 1, ಹಿಂದುಳಿದ ಬವರ್ಗ 1, ವಾರ್ಡ ಸಂಖ್ಯೆ ಎರಡಲ್ಲಿ ಸಾಮಾನ್ಯ-1 ಹಿಂದುಳಿದ ಅ ವರ್ಗ-1 ವಾರ್ಡ ಸಂ. ಮೂರರಲ್ಲಿ ಸಾಮಾನ್ಯ-1 ಮಹಿಳೆ-1 ಅದರ ಜೊತೆಗೆ ಸಾಲಗಾರರಲ್ಲದ ಕ್ಷೇತ್ರ ಒಂದು ಒಟ್ಟು ಆಯ್ಕೆಯಾಗಬೇಕಾದ ಸದಸ್ಯರ ಸಂಖ್ಯೆ 12 ಎಂದು ಚುನಾವಣೆ ಅಧಿಕಾರಿ ತಿಳಿಸಿದ್ದಾರೆ.

ದಿ.18 ರಂದು ನಡೆಯುವ ಚುನಾವಣೆಗೆ ಒಟ್ಟೂ 5 ಮತಗಟ್ಟೆಗಳನ್ನು ತೆರೆಯಲಾಗಿದೆ. ಹಳಿಯಾಳದ ಆರ್ಎಸ್ಎಸ್ ಬ್ಯಾಂಕ್ ಆವರಣದಲ್ಲಿ 2 ಹಾಗೂ ಅರ್ಬನ್ ಬ್ಯಾಂಕ್ ವೃತ್ತದಲ್ಲಿರುವ ಅಂಜುಮನ್ ಶಾಲೆಯಲ್ಲಿ 3 ಮತಗಟ್ಟೆಗಳನ್ನು ತೆರೆಯಲಾಗಿದ್ದು. ಸೂಕ್ಷ್ಮ ಮತಗಟ್ಟೆಯಾಗಿರುವ ಇಲ್ಲಿ ಭಾರಿ ಪೋಲಿಸ್ ಬಂದೋಬಸ್ತನ್ನು ಈಗಾಗಲೇ ನಿಯೋಜಿಸಲಾಗಿದೆ.
ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆಗಿರುವ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ಜಿಲ್ಲಾ ಮಧ್ಯವರ್ತಿ ಕೆಡಿಸಿಸಿ ಬ್ಯಾಂಕ್ಗೆ ನಿರ್ದೇಶಕರಾಗಿ ಆಯ್ಕೆಯಾಗಲು ಅವರು ಸ್ಪರ್ದಿಸಿರುವ ಕ್ಷೇತ್ರದಿಂದ ಆಯ್ಕೆಯಾಗಬೇಕಿದೆ ಅಲ್ಲದೇ ಅವರ ಬೆಂಬಲಿತರು ಆಯ್ಕೆಯಾಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಇನ್ನೂ ಶತಾಯಗತಾಯ ಘೊಟ್ನೇಕರ ಅವರನ್ನು ಪರಾಜಿತಗೊಳಿಸಬೇಕೆಂದು ಅವರ ಬದ್ದ ರಾಜಕೀಯ ವೈರಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಎಲ್ಲಿಲ್ಲದ ಕಸರತ್ತು ನಡೆಸಿದ್ದು ಈ ಚುನಾವಣೆ ತೀರಾ ತುರುಸಿನಿಂದ ಕೂಡಿದೆ.
ಅಲ್ಲದೇ ಈ ಬಾರಿ ಸಾವಿರಾರು ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿರುವುದು ಇವರಲ್ಲಿ ತಮ್ಮ ಪಕ್ಷ ಬೆಂಬಲಿತರಿಗೆ ಮತದಾನ ಮಾಡುವವರನ್ನು ಮತದಾರರ ಯಾದಿಯಲ್ಲಿ ಗುರುತಿಸಿ ಹೈಕೊರ್ಟ ಮೊರೆ ಹೊಗಿ ಅಲ್ಲಿಂದ ಮತದಾನದ ಹಕ್ಕು ಪಡೆಯುವ ಕಾರ್ಯವನ್ನು ಕಾಂಗ್ರೇಸ್ ಹಾಗೂ ಬಿಜೆಪಿಗರು ಮಾಡಿದ್ದು ಶುಕ್ರವಾರ ಮಧ್ಯರಾತ್ರಿಯ ವರೆಗೆ ಮತದಾರರ ಸಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ.
ಈಗಾಗಲೇ ಹೈಕೊರ್ಟನಿಂದ ಮತದಾನದ ಹಕ್ಕು ಪಡೆದು ನ್ಯಾಯಾಲಯದ ಆದೇಶದ ಪ್ರತಿ ತಂದಿರುವವರು ಚುನಾವಣಾಧಿಕಾರಿಗಳಲ್ಲಿ ಅವುಗಳನ್ನು ಸಲ್ಲಿಸುತ್ತಿದ್ದು ಇದರ ಪರಿಶೀಲನೆ ನಡೆಯುತ್ತಿದ್ದು ರಾತ್ರಿಯಿಡಿ ಕರ್ತವ್ಯ ನಿರ್ವಹಿಸಬೇಕಾದ ಸಂದಿಗ್ದ ಪರಿಸ್ಥಿತಿ ಚುನಾವಣಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಬಂದಿದೆ.
Leave a Comment