
ಹಳಿಯಾಳ:- ಹಳಿಯಾಳ ತಾಲೂಕಿನ ಗ್ರಾಮೀಣ ಹಾಗೂ ನಗರ ಭಾಗದ ರೈತ ಬಾಂದವರಿಗೆ ಭಾರತೀಯ ಜನತಾ ಪಾರ್ಟಿ ವತಿಯಿಂದ ಮನವಿ ಮಾಡಿಕೊಳ್ಳುವದೇನೆಂದರೆ ಶನಿವಾರ ದಿನಾಂಕ: 18-01-2020 ರಂದು ತಾಲೂಕಿನ ರೈತ ಸ್ವ ಸಹಾಯ ಸಂಘಗಳಿಗೆ 5 ವರ್ಷದ ಆಡಳಿತ ಮಂಡಳಿಯ ಚುನಾವಣೆ ಜರುಗಲಿದ್ದು ತಾವೆಲ್ಲರು ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಮುಂದಿನ 5 ವರ್ಷದಲ್ಲಿ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಸೊಸೈಟಿಗಳಲ್ಲಿ ಮುಕ್ತವಾಗಿ ರೈತರ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಹಳಿಯಾಳ ತಾಲುಕಾ ಬಿಜೆಪಿ ಅಧ್ಯಕ್ಷ ಗಣಪತಿ ಕರಂಜೆಕರ ವಿನಂತಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಕೆ.ಡಿ.ಸಿ.ಸಿ ಬ್ಯಾಂಕಿಗೆ ಹಳಿಯಾಳ ತಾಲೂಕಿನಿಂದ ಪ್ರತಿನಿಧಿಯಾಗಿ ಕೆ.ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದವರು ಸಮಾಜದ ಹೆಸರಿನಲ್ಲಿ ರೈತರ ಮತವನ್ನು ಪಡೆದು ಸ್ವ ಸಹಾಯ ಸಂಘಗಳಲ್ಲಿ ಟ್ರ್ಯಾಕ್ಟರ, ಕೊಟ್ಟಿಗೆ ರೀಪೆರಿದಂತಹ ಹಲವಾರು ಯೋಜನೆಗಳಿಗೆ ಕಡಿಮೆ ಬಡ್ಡಿದರದಲ್ಲಿ ನೀಡುವ ಸಾಲಗಳಿಗೆ ವ್ಯಕ್ತಿಗತ ವಿಚಾರದಿಂದ ತಡೆಹಿಡಿದು ರೈತರಿಗೆ ಅನ್ಯಾಯ ಮಾಡಿದ್ದು ತಮಗೆಲ್ಲರಿಗೂ ಗೊತ್ತಿರುವ ವಿಷಯ. ಈ ಮುಂದಿನ 5 ವರ್ಷದಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಟ್ಟಲ್ಲಿ ಯಾವುದೇ ಪಕ್ಷ. ವ್ಯಕ್ತಿ ಭೇದಭಾವವಿಲ್ಲದೇ ತಾಲೂಕಿನ ಬಹುಸಂಖ್ಯಾತ ಸಮಾಜವಾದ ಮರಾಠ ಸಮಾಜದ ವ್ಯಕ್ತಿಯನ್ನು ಬಿ.ಜೆ.ಪಿ ಬೆಂಬಲದೊಂದಿಗೆ ಕೆ.ಡಿ.ಸಿ.ಸಿ. ಬ್ಯಾಂಕಿನ ಪ್ರತಿನಿಧಿಯಾಗಿ ಆಯ್ಕೆ ಮಾಡಲು ನಮ್ಮ ಪಕ್ಷದ ಮುಖಂಡರು ನಿರ್ಣಯಿಸಿದ್ದಾರೆ. ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ನೇತ್ರತ್ವದ ಸರ್ಕಾರ ರೈತರಿಗೆ ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ ಯೋಜನೆಯಡಿಯಲ್ಲಿ ಪ್ರತಿ ರೈತರ ಖಾತೆಗೆ ನೇರವಾಗಿ ಪ್ರತಿ ವರ್ಷ ರೂ.6000/- ಗೌರವಧನ ನೀಡುವುದರ ಜೊತೆಗೆ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ, ಬಿ.ಪಿ.ಎಲ್ ಕಾರ್ಡ ಹೊಂದಿದ ರೈತರಿಗೆ ಉಚಿತವಾಗಿ ಪಂ. ದೀನದಯಾಳ ಉಪಾಧ್ಯಾಯ ಯೋಜನೆಯಡಿಯಲ್ಲಿ ವಿದ್ಯುತ್, ಉಜ್ವಲಾ ಯೋಜನೆಯಡಿಯಲ್ಲಿ ಉಚಿತ ಗ್ಯಾಸ ಸಿಲಿಂಡರ್ ನೀಡಿರುವುದು ಅಭಿವೃದ್ದಿಗೆ ಸಹಕಾರಿಯಾಗಿದೆ. ಮಾನ್ಯ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರ ಸರ್ಕಾರ ರೈತರಿಗೆ ವರ್ಷಕ್ಕೆ ರೂ.4000/- ಗೌರವಧನ ಹಾಗೂ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕೃಷಿ ಬಜೆಟ್ ಮಂಡನೆ, ರೈತರ ಸಾಲಕ್ಕೆ ಬಡ್ಡಿ ರಿಯಾಯತಿ ಹಾಗೂ ಸಾಲಮನ್ನಾ ಮಾಡುವುದರ ಮುಖಾಂತರ ರೈತರ ಆರ್ಥಿಕ ಅಭಿವೃದ್ದಿಯಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿದ್ದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಎಲ್ಲ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನಮ್ಮ ಪಕ್ಷದ ಮುಖಂಡರಾದ ಮಾಜಿ ಶಾಸಕ ಸುನೀಲ್ ಹೆಗಡೆಯವರ ನೇತೃತ್ವದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದು ವಿನಯ ಪೂರ್ವಕವಾಗಿ ಕೇಳಿಕೊಳ್ಳುತ್ತೇವೆ ಎಂದಿರುವ ಕರಂಜೆಕರ ಹಾಗೂ ಮಾಜಿ ಅಧ್ಯಕ್ಷ ಶಿವಾಜಿ ನರಸಾನಿ, ಕಾರ್ಯದರ್ಶಿ ಅನಿಲ ಮುತ್ನಾಳ್, ವಿಎಮ್ ಪಾಟೀಲ್, ವಾಸು ಪೂಜಾರಿ, ತಾನಾಜಿ ಪಟ್ಟೇಕರ, ವಿಜಯ ಬೋಬಾಟಿ, ಮಂಜು ಪಂಡಿತ, ವಿಲಾಸ ಯಡವಿ ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಕೊರಿದ್ದಾರೆ.

Leave a Comment