
ಹಳಿಯಾಳ:-
ಹಳಿಯಾಳದ ಆರ್‍ಎಸ್ ಎಸ್ ಬ್ಯಾಂಕ್ ಹಾಗೂ ಬೆಳವಟಗಿಯ ಬಸವೇಶ್ವರ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಸಣ್ಣ-ಪುಟ್ಟ ಮಾತಿನ ಚಕಮಕಿ ನಡೆದಿದ್ದರೇ ಹೊರತು ಪಡಿಸಿದರೇ ತಾಲೂಕಿನ 11 ಸಹಕಾರಿ ಸಂಘ (ಸೊಸೈಟಿ)ಗಳಿಗೆ ಶನಿವಾರ ನಡೆದ ಚುನಾವಣೆ ಶಾಂತಿಯುತವಾಗಿ ಸಂಪನ್ನಗೊಂಡಿದೆ.
ಕೆಡಿಸಿಸಿ ಬ್ಯಾಂಕ್‍ಗೆ ನಿರ್ದೇಶಕರಾಗಿ ಆಯ್ಕೆಯಾಗಲು ಹಳಿಯಾಳದ ರೈತರ ಸೇವಾ ಸಹಕಾರಿ ಬ್ಯಾಂಕ್(ಆರ್‍ಎಸ್‍ಎಸ್) ಚುನಾವಣೆಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ಸ್ಪರ್ದಿಸುವುದರಿಂದ ಈ ಬ್ಯಾಂಕ್ ಚುನಾವಣೆ ಅತ್ಯಂತ ತುರುಸಿನಿಂದ ಕೂಡಿರುತ್ತೇ ಅಲ್ಲದೇ ಇದು ಘೊಟ್ನೇಕರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಪ್ರತಿಷ್ಠೆಯ ಕಣವಾಗಿ ತಾಲೂಕಿನ ಜನತೆಯ ಲಕ್ಷ್ಯವೆಲ್ಲ ಇದೆ ಸೊಸೈಟಿಯ ಬೆಳವಣಿಗೆಯ ಮೇಲಿರುತ್ತದೆ.

ಈ ಬಾರಿ ಸಹಕಾರಿ ಸಂಘಗಳ ಕಾಯ್ದೆಯನ್ವಯ ಸಾವಿರಾರು ಶೇರುದಾರ ರೈತ ಸದಸ್ಯರು ತಮ್ಮ ಮತದಾನ ಹಕ್ಕು ಕಳೆದುಕೊಂಡಿದ್ದರಿಂದ ಕಾಂಗ್ರೇಸ್ ಹಾಗೂ ಬಿಜೆಪಿಯವರು ಹೈಕೊರ್ಟ ಮೊರೆ ಹೊಗಿದ್ದರಿಂದ ಕೈಬಿಟ್ಟ ಕೆಲವು ಮತದಾರರಿಗೆ ಮಾತ್ರ ಮತದಾನದ ಹಕ್ಕು ನೀಡಿ ಹೈಕೊರ್ಟ ತೀರ್ಪು ನೀಡಿತು.
ಹಳಿಯಾಳ ಆರ್‍ಎಸ್‍ಎಸ್ ಬ್ಯಾಂಕ್ ಸಾಲಗಾರರ ಕ್ಷೇತ್ರ ವಾರ್ಡ ನಂ1ರಲ್ಲಿ ಮೊದಲು 558 ಮತಗಳು ಇದ್ದವು ಬಳಿಕ ಹೈಕೊರ್ಟ ಆದೇಶದಿಂದ 119,149,188 ಹೀಗೆ 456 ಹೊಸ ಮತಗಳು, ಹವಗಿ ಕ್ಷೇತ್ರಕ್ಕೆ 176 ಮೊದಲು ಬಳಿಕ 54, ಕರ್ಲಕಟ್ಟಾ ಕ್ಷೇತ್ರಕ್ಕೆ ಮೊದಲು 141 ಬಳಿಕ 195 ಹೊಸದಾಗಿ, ಸಾಲಗಾರರಲ್ಲದ ಕ್ಷೇತ್ರ 163 ಮೊದಲು ಬಳಿಕ 171 ಆದ ಬಳಿಕ ಹಳಿಯಾಳ ಕ್ಷೇತ್ರಕ್ಕೆ ಮೊದಲು ಇದ್ದ 1038 ಮತದಾರರಲ್ಲಿ ಕೈಬಿಟ್ಟ 876 ಮತದಾರರು ಸೇರ್ಪಡೆಯಾಗಿ 1914 ಮತದಾರರ ಹೊಸ ಯಾದಿ ಶುಕ್ರವಾರ ಬೆಳಗಿನ ಜಾವದ ವರೆಗೆ ತಯಾರಿ ಮಾಡಲಾಯಿತು.

ನ್ಯಾಯಾಲಯದಿಂದ ಆದೇಶ ತೆಗೆದುಕೊಳ್ಳಲೇಬೇಕಾದ ಪರಿಸ್ಥಿತಿ ಇರುವುದರಿಂದ ಚುನಾವಣಾಧಿಕಾರಿಗಳು ಶನಿವಾರ ಬೆಳಗಿನ ಜಾವ 4 ಗಂಟೆಯವರೆಗೆ ಅನರ್ಹರ ಪಟ್ಟಿ ಹಾಗೂ ನ್ಯಾಯಾಲಯದಿಂದ ಮತದಾನದ ಹಕ್ಕು ಪಡೆದ ಬಂದವರ ಪಟ್ಟಿಯನ್ನು ಪರಿಶೀಲಿಸಿ ಎರಡರಲ್ಲೂ ತಾಳೆ ಮಾಡಿ ಗಣನೆಗೆ ತೆಗೆದುಕೊಂಡು ಮತಗಟ್ಟೆವಾರು ಮತದಾನಕ್ಕೆ ವಿಂಗಡಿಸಲಾಯಿತು ಎಂದು ಚುನಾವಣಾಧಿಕಾರಿಗಳು ತಿಳಿಸಿದರು.
ಹಳಿಯಾಳದ ಆರ್‍ಎಸ್‍ಬ್ಯಾಂಕ್ ಮತಗಟ್ಟೆ ಎದುರು ಮತದಾರರನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನದ ವಿಚಾರವಾಗಿ ವಿಪ ಸದಸ್ಯರು ಹಾಗೂ ಚುನಾವಣಾ ಅಭ್ಯರ್ಥಿಯು ಆಗಿರುವ ಎಸ್.ಎಲ್.ಘೊಟ್ನೇಕರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಸಮ್ಮುಖದಲ್ಲಿಯೇ ಕಾಂಗ್ರೇಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಭಾರಿ ಮಾತಿನ ಚಕಮಕಿ, ವಾದ ವಿವಾದ ನಡೆಯಿತು. ಬಳಿಕ ಪೋಲಿಸರು ಮಧ್ಯ ಪ್ರವೇಶಿಸಿ ಹದಗೆಡುತ್ತಿದ್ದ ವಾತಾವರಣವನ್ನು ತಹಬದಿಗೆ ತಂದರು.
ಇನ್ನೂ ತಾಲೂಕಿನ ಬೆಳವಟಗಿಯ ಬಸವೇಶ್ವರ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಕೂಡ ಕೊರ್ಟನಿಂದ ಮತದಾನದ ಹಕ್ಕು ಪಡೆದು ಬಂದು ಮತದಾನಕ್ಕೆ ಬಂದವರ ಯಾದಿಯ ಕುರಿತು ಗೊಂದಲ ಉಂಟಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದೆ. ಬಾಕಿ ಉಳಿದಂತೆ ಎಲ್ಲೆಡೆ ಶಾಂತಿಯುತ ಮತದಾನ ನಡೆದಿದೆ.
ಆರ್‍ಎಸ್‍ಎಸ್ ಬ್ಯಾಂಕ್‍ನ ಮತಗಟ್ಟೆಯಲ್ಲಿ ಚುನಾವಣಾ ಅಭ್ಯರ್ಥಿಯು ಆಗಿರುವ ವಿಪ ಸದಸ್ಯ ಘೊಟ್ನೆಕರ ಅವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ವಿಡಿ ಹೆಗಡೆ ಅವರು ಅಂಜುಮನ್ ಶಾಲೆಯಲ್ಲಿ ತೆರೆಯಲಾದ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಶನಿವಾರ ಸಾಯಂಕಾಲ ಮತದಾನ ಪ್ರಕ್ರಿಯೇ ಮುಗಿದಿದ್ದು ಇದೆ ದಿನ ರಾತ್ರಿಯವರೆಗೆ ಚುನಾವಣಾ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

Leave a Comment