
ಶಿರಸಿ/ ಕೇಂದ್ರ ಸರ್ಕಾರ ಕಾರವಾರದಲ್ಲಿ ಕೈಗೊಂಡಿರುವ ಸಾಗರಮಾಲಾ ಬಂದರು ವಿಸ್ತರಣೆ ಹಾಗೂ ಅಲೆ ತಡೆಗೋಡೆ ಯೋಜನೆಯನ್ನು ಅಲ್ಲಿನ ಮೀನುಗಾರರ ಹಿತದೃಷ್ಟಿಯಿಂದ ಪುನರ್ ಪರಿಶೀಲಿಸುವಂತೆ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸ್ವರ್ಣವಲ್ಲೀ ಶ್ರೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರವಾರ ಬಂದರು ವಿಸ್ತರಣಾ ಯೋಜನೆ ಬಗ್ಗೆ ಕಾರವಾರದ ಮೀನುಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಮೀನುಗಾರರ ಬುದುಕಿಗೆ ಈ ಯೋಜನೆಯಿಂದ ತೀವೃ ತೊಂದರೆ ಆಗಲಿದೆ ಎಂದು ನಿರಂತರ ಸತ್ಯಾಗ್ರಹ ಚಳುವಳಿ ನಡೆಸುತ್ತಿದ್ದಾರೆ. ಕಾರವಾರದ ನಾಗರಿಕರು ಸಹಾ ಬಂದರು ವಿಸ್ತರಣಾ ಯೋಜನೆ ಅಸಾಧು, ಅವ್ಯವಹಾರಿಕ ಎಂದು ವಿರೋಧ ವ್ಯಕ್ತ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಕಾರವಾರ ಬಂದರು ವಿಸ್ತರಣಾ ಯೋಜನೆ ಬಗ್ಗೆ ಪುನರ್ ವಿಮರ್ಶೆ ಮಾಡಬೇಕು. ಅಭಿವೃದ್ಧಿ ಯೋಜನೆಗಳು ಮೀನುಗಾರರ ಬದುಕಿಗೆ ತೊಂದರೆ ತರಬಾರದು. ಕರಾವಳಿ ಪ್ರದೇಶದ ರೈತರು ಮೀನುಗಾರರ ಹಿತರಕ್ಷಣೆ ಜೊತೆ ಅಭಿವೃದ್ಧಿ ಯೋಜನೆಗಳು ಆಗುವಂತೆ ಕ್ರಮ ಕೈಗೊಳ್ಳಲು ಶ್ರೀಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

Leave a Comment