
ಜೋಯಿಡಾ –
ಇತ್ತಿಚಿನ ದಿಗಳಲ್ಲಿ ಉತ್ತರಕನ್ನಡ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಬಿಟ್ಟರೇ ಬೇರಾವ ಜಿಲ್ಲೆಗಳಲ್ಲಿಯೂ ಯಕ್ಷಗಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿಲ್ಲ, ಯಕ್ಷಗಾನವನ್ನು ಉಳಿಸಿ ಬೆಳೆಸಿದಾಗ ಮಾತ್ರ ಅದು ಜನಪ್ರಿಯವಾಗುತ್ತದೆ ಎಂದು ಗುಂದದ ಮಾತೃ ಮಂಡಳಿ ಅಧ್ಯಕ್ಷೆ ರಾಧಾ ಹೆಗಡೆ ಹೇಳಿದರು.
ಅವರು ಯರಮುಖ ಸೋಮೇಶ್ವರ ಜಾತ್ರೆಯ ಅಂಗವಾಗಿ ಸೋಮೇಶ್ವರ ದೇವಸ್ಥಾನ ಟ್ರಸ್ಟ,ಹಾಗೂ ಮಾರಿಕಾಂಬಾ ಯಕ್ಷಗಾನ ಹಾಗೂ ಸಾಂಸ್ಕ್ರತಿಕ ಕ್ರೀಡಾ ಸಂಘ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆ ಕಾರವಾರ ಇವರು ನಡೆಸಿಕೊಟ್ಟ ಯಕ್ಷಗಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು, ಯಕ್ಷಗಾನ ಕಲೆಯನ್ನು ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟಿದ್ದಾರೆ, ಇಂದಿನ ದಿನಗಳಲ್ಲಿ ಯಕ್ಷಗಾನದಂತಹ ಕಲೆಗಳು ನಶಿಸಿ ಹೋಗುತ್ತಿದೆ, ಮಕ್ಕಳು ಮೋಬೈಲ ಮತ್ತು ಟಿವಿಗಳ ಕಡೆ ಹೆಚ್ಚು ಆಕರ್ಷಿತರಾಗಿದ್ದಾರೆ, ಆದರೆ ಗುಂದದಂತ ದಟ್ಟ ಕಾಡಿನ ಪ್ರದೇಶದಲ್ಲೂ ಇಲ್ಲಿನ ಮಹಿಳೆಯರು ಯಕ್ಷಗಾನವನ್ನು ಬೆಳೆಸುತ್ತಿರುವುದು ಸಂತಸದ ವಿಷಯ ಎಂದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್,ಟಿ,ದಾನಗೇರಿ ಮಾತನಾಡಿ ಯಕ್ಷ ರಂಗದಲ್ಲಿ ಅನೇಕರು ಸಾಧನೆ ಮಾಡಿದ್ದಾರೆ, ನಮ್ಮೂರಿನಲ್ಲಿಯೂ ಯಕ್ಷ ಕಲಾವಿದರು ಉತ್ತಮ ಪ್ರದರ್ಶನ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ದೇವಸ್ಥಾನ ಕಮಿಟಿ ಅಧ್ಯಕ್ಷ ದತ್ತಾತ್ರೇಯ ಹೆಗಡೆ ಮಾತನಾಡಿ ಪ್ರತಿ ವರ್ಷವೂ ಜಾತ್ರೆಯ ಅಂಗವಾಗಿ ಕಾರ್ಯಕ್ರಮ ಮಾಡುತ್ತೇವೆ, ಈ ವರ್ಷ ಯಕ್ಷಗಾನ ಮಾಡುತ್ತಿರುವುದರಿಂದ ಜಾತ್ರೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಅಂಕೋಲಾದ ಕಲಾವಿದರು ಮತ್ತು ಊರಿನ ಕಲಾವಿದರಿಂದ ಸುಧನ್ವಾರ್ಜುನ ಯಕ್ಷಗಾನ ನಡೆಯಿತು.

Leave a Comment