
ಜಲವಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ನಾರಾಯಣ (ಜಯಂತ) ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಕೇಶವ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಲವಳ್ಳಿ ಸೊಸೈಟಿಯ ಮುಂದಿನ ಐದು ವರ್ಷಗಳ ಅವಧಿಗೆ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಹಿಂದಿನ ಅವಧಿಯ ಅಧ್ಯಕ್ಷರಾಗಿದ್ದ ನಾರಾಯಣ ನಾಯ್ಕ ನೇತೃತ್ವದ ತಂಡ ಎಲ್ಲಾ 11 ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವುದನ್ನು ಖಾತ್ರಿಪಡಿಸಿಕೊಂಡಿತ್ತು.
ನಿರೀಕ್ಷೆಯಂತೆಯೇ ಬುಧವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ಔಪಚಾರಿಕತೆ ಪೂರ್ಣಗೊಂಡಿದ್ದು ನಾರಾಯಣ ನಾಯ್ಕ ಮತ್ತೊಮ್ಮ ಅಧ್ಯಕ್ಷರಾಗಿ ಮತ್ತು ಕೇಶವ ಗೌಡ ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

Leave a Comment