
ಜೋಯಿಡಾ –
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ವಿರುದ್ದ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಭಾಷಣವೊಂದರಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಜೋಯಿಡಾ ಬ್ಲಾಕ್ ಕಾಂಗ್ರೇಸ್ ಕಾರ್ಯಕರ್ತರು ಪ್ರತಿಭಟಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಜೋಯಿಡಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾನಂದ ದಬ್ಗಾರ ಮಹಾತ್ಮಾ ಗಾಂಧೀಜಿ ಅವರು ದೇಶದ ಸಲುವಾಗಿ ತಮ್ಮ ಜೀವನವನ್ನೆ ತ್ಯಾಗ ಮಾಡಿದ ಮಹಾನ ನಾಯಕರು, ಇವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಂಸದ ಅನಂತ ಕುಮಾರ ಹೆಗಡೆ ಅವರನ್ನು ಕೂಡಲೇ ಅನರ್ಹಗೊಳಿಸಬೇಕೆಂದು ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ನ ಕಾರ್ಯಕರ್ತರಾದ ಅರುಣ ದೇಸಾಯಿ, ಆರ,ಎ,ಭಟ್ಟ, ಎರ್,ವಿ,ದಾನಗೇರಿ, ವಿನಯ ದೇಸಾಯಿ, ಸದಾನಂದ ಉಪಾಧ್ಯ, ಗಜಾನನ, ರಫೀಕ್, ಶ್ರೀಧರ ದಬ್ಗಾರ ಇತರರು ಉಪಸ್ಥಿತರಿದ್ದರು.

Leave a Comment