
ರಾಜ್ಯದಲ್ಲಿ ಸದೃಡ ಹಾಗೂ ಪ್ರಗತಿಪರ ಆಡಳಿತವನ್ನು ನೀಡುವ ಕಾರ್ಯ ಬಿಜೆಪಿ ಸರ್ಕಾರ ಮಾಡಲಿದೆ. ಮುಂದಿನ 3 ವರ್ಷದ ಮೂರು ತಿಂಗಳು ಕಾಲ ಯಾವುದೇ ಅಡ್ಡಿ ಇಲ್ಲದೇ ಸರ್ಕಾರ ಸೂಸುತ್ರವಾಗಿ ಮುನ್ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತನಾರಾಯಣ ಮಾಧ್ಯಮದ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದರು.
ಹೊನ್ನಾವರ ತಾಲೂಕಿನ ಕೆಳಗಿನೂರು ಒಕ್ಕಲಿಗ ಸಭಾಭವನ ಉದ್ಘಾಟನೆಯ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಪ್ರತಿ ಜಿಲ್ಲೆಗೆ ಆಯಾ ಜಿಲ್ಲೆಯವರೇ ಉಸ್ತುವಾರಿ ಸಚೀವರ ನೇಮಕವಾಗಲಿದೆ. ಈಗಾಗಲೇ ಸಚೀವ ಸಂಪುಟ ವಿಸ್ತರಣೆಯಾಗಿದ್ದು ಕೆಲ ಖಾತೆ ಹಂಚಿಕೆಯಲ್ಲಿ ಅಸಮಧಾನವಿದೆ. ಆದರೆ ಅದನ್ನು ಚರ್ಚೀಸಿ ಖಾತೆ ಬದಲಾವಣೆ ಅಥವಾ ಪುನರ್ ರಚನೆ ಮಾಡುವ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಬಿಜೆಪಿ ಸರ್ಕಾರ ರಚನೆಯಾದ ನಂತರವೂ ಖಾತೆ ಸರ್ಕಸ್ ಮುಂದುವರೆದಿದೆ ಎನ್ನುವ ವಿರೋಧ ಪಕ್ಷದ ಆರೋಪದ ಬಗ್ಗೆ ಪ್ರಶ್ನಿಸಿದಾಗ ಸ್ಪಷ್ಟ ಬಹುಮತ ಸಿಗದ ಕಾರಣ ಮೈತ್ರಿ ಸರ್ಕಾರ ರಚನೆಯಾಯಿತು. ಕುಮಾರಸ್ವಾಮಿ ಮುಖ್ಯಮಂತ್ರಿ ಅವಧಿಯಲ್ಲಿ ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತೆನೋ ಗೊತ್ತಿಲ್ಲ. ಅವರ ಕೃಪೆ, ಇವರ ಕೃಪೆ ಹೇಳಿ ಅವರು ಅಧಿಕಾರ ನಡೆಸಿದರೆ ಹೊರತು ಜನಪರ ಆಡಳಿತ ನಡೆಸಲು ವಿಫಲವಾದರು. ಇದರ ಪರಿಣಾಮದಿಂದ ಆ ಪಕ್ಷದಿಂದ ರಾಜಿನಾಮೆ ನೀಡಿ ಬಂದರು. ನಮ್ಮ ಮುಂದಿರುವ ಗುರಿ ಜನಪರ ಆಡಳಿತ ನೀಡುವುದು ಒಂದೇ ಆಗಿದೆ ಅದನ್ನು ನಾವು ನೀಡಲಿದ್ದೇವೆ ಎಂದು ಭರವಸೆ ಇದೆ ಎಂದರು. ದೆಹಲಿ ಫಲಿತಾಂಶ ಬಿಜೆಪಿ ಹಿನ್ನಡೆಯಲ್ಲವೇ ಎಂದು ಪ್ರಶ್ನಿಸಿದಾಗ ಒಂದು ರಾಜ್ಯದ ಫಲಿತಾಂಶ ಪಕ್ಷಕ್ಕೆ ಹಿನ್ನಡೆಯಲ್ಲ ಕಳೆದ ಬಾರಿಗಿಂತ ನಾವು ಹೆಚ್ಚು ಸ್ಥಾನ ಗೆಲುವು ಸಾಧಿಸಿದ್ದೇವೆ. ಅಲ್ಲದೇ ಬೆಂಗಳೂರಿನ ಮಹಾನಗರ ಪಾಲಿಕೆಯಷ್ಟು ಚಿಕ್ಕದಾದ ಒಂದು ರಾಜ್ಯದ ಚುನಾವಣೆ ಇದು ರಾಷ್ಟ್ರ ರಾಜಕಾರಣದಲ್ಲಿ ಪರಿಣಾಮ ಬೀರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಶಾಸಕರಾದ ಸುನೀಲ ನಾಯ್ಕ, ದಿನಕರ ಶೆಟ್ಟಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

[…] ಆಯಾ ಜಿಲ್ಲೆಯವರೆ ಉಸ್ತುವಾರಿ ಸಚೀವರಾಗಿ ನೇ… […]