
#ಖಾನಾಪುರ: ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು ೭೦ವರ್ಷ ಕಳೆದರೂ, ಈ ಗ್ರಾಮಕ್ಕೆ ಬೇಕಾದ ಮೂಲಭೂತ ಸೌಲಭ್ಯದ ಸ್ವಾತಂತ್ರ್ಯ ಇನ್ನೂ ಸಿಕ್ಕಿರಲಿಲ್ಲ. ಯಾಕಪ್ಪ ಅಂದರೆ ಆ ಗ್ರಾಮದ ನಾಲ್ಕು ದಿಕ್ಕಿಗೂ ಕಂಡುಬರುವುದು ದಟ್ಟವಾದ ಅರಣ್ಯ ಪ್ರದೇಶ. ಹೀಗಿರುವಾಗ ಊರಿನ ಹೆಸರು ಕೆಳಿದರೆ ಸಾಕು ಯಾವೊಬ್ಬ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹ ಅದರ ಬಗ್ಗೆ ಆಲೋಚಿಸಲು ಹಿಂಜರೆಯುತ್ತಿದ್ದರೂ.
ಇದೆನಪ್ಪಾ, ಎಲ್ಲಿದೆ ಇದು ಅಂದುಕೊಂಡಿದಿರಾ ಅದುವೇ ಕಣ್ರಿ ಮಲೆನಾಡ ಸೋಬಗಿನ ಮಡಿಲಲ್ಲಿರುವ ಖಾನಾಪುರ ತಾಲೂಕಿನ, ದಟ್ಟಾರಣ್ಯ ಪ್ರದೇಶದಲ್ಲಿರುವ #ಮಾನ ಗ್ರಾಮದ ಕಥೆಯಿದು.

ಹೌದು ಊರಿನ ಹೆಸರಿರುವುದು *ಮಾನ* ಅಂತಾ ಆದರೆ ಇಷ್ಟು ದಿನ ಆಗಿದ್ದು ಮೂಲಭೂತ ಸೌಲಭ್ಯಗಳ *ಅವಮಾನ* ಆದರೆ ಇಂತಹ ಗ್ರಾಮಗಳ ಕಡೆಯೇ ಹೆಚ್ಚಿನ ಗಮನಹಿರಿಸಿ, ಒತ್ತು ಕೊಟ್ಟು ಸರಕಾರದಿಂದ ಅನುದಾನ ಮಂಜೂರು ಮಾಡಿಸಿಕೊಂಡು ಬಂದು ಕೆಲಸಗಳಿಗೆ ಚಾಲನೆ ಮಾಡುತ್ತಿರುವ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ ಕಾರ್ಯ ಶ್ಲಾಘನೀಯವಾಗಿದೆ.
ಮಳೆಗಾಲ ಬಂತೆಂದರೆ ಸಾಕು *ಮಾನ* ಗ್ರಾಮದಲ್ಲಿ ವಾಸಿಸುವ ಜನರ ಪರಿಸ್ಥಿತಿ ಹೇಳತಿರದು, ಏಕೆಂದರೆ ಅಕ್ಕಪಕ್ಕದ ಗ್ರಾಮಗಳಿಗೆ, ಗ್ರಾಮಪಂಚಾಯಿತಿಗೆ, ಪಟ್ಟಣಕ್ಕೆ, ತಾಲೂಕು ಕಚೇರಿಗಳಿಗೆ, ಆಸ್ಪತ್ರೆ ಹೋಗಲು ಸಂಪರ್ಕ ಕಲ್ಪಿಸುವ ರಸ್ತೆಗಳು ಇದ್ದರೂ ಇಲ್ಲದಂತಾಗಿದ್ದವು.
ಜೋತಗೆ ಈ ಗ್ರಾಮಕ್ಕೆ ಸರ್ಕಾರದ ಸವಲತ್ತುಗಳು ಕೊಡಿಸುವಲ್ಲಿ ಎಲ್ಲ ಜನಪ್ರತಿನಿಧಿಗಳು ವಿಫಲರಾಗಿದ್ದರು. ಗ್ರಾಮಸ್ಥರ ಪರಿಸ್ಥಿತಿಯನ್ನು ಕಂಡ *ಖಾನಾಪುರ ಶಾಸಕಿ ಡಾ ಅಂಜಲಿತಾಯಿ ನಿಂಬಾಳಕರ* ಅವರು ಇಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ವತಿಯಿಂದ ಸುಮಾರು ಅಂದಾಜು ಮೊತ್ತ *ರೂಪಾಯಿ 40,00,000/- (ನಲವತ್ತು ಲಕ್ಷ ರೂ.) ವೆಚ್ಚದ ಸುಮಾರು 1.2 ಕಿ ಮೀ* ಅಂತರದ ರಸ್ತೆ ಸುಧಾರಣೆ ಕಾಮಗಾರಿಗೆ ಗುರುವಾರದಂದು ಭೂಮಿಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು.

ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ ಅವರ ಈ ಕಾರ್ಯಕ್ಕೆ *ಮಾನ* ಗ್ರಾಮದ ವತಿಯಿಂದ ಗ್ರಾಮಸ್ಥರೆಲ್ಲರೂ ಸೇರಿ ಊರಿಗೆ ಬಂದ ಶಾಸಕರಿಗೆ ಅದ್ಧೂರಿಯಾಗಿ ಸ್ವಾಗತಿಸಿ, ಸನ್ಮಾನಿಸಿ ಅವರ ಅಭಿವೃದ್ಧಿಯ ಕಾರ್ಯದ ಬಗ್ಗೆ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು..
Leave a Comment