ಹಳಿಯಾಳ :- ಹಿಂದವಿ ಸ್ವರಾಜ್ಯ ಸಂಸ್ಥಾಪಕ – ಅಪ್ರತಿಮ ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 393 ನೇ ಜಯಂತ್ಯೋತ್ಸವ ಕಾರ್ಯಕ್ರಮ #ಹಳಿಯಾಳದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದ ಮರಾಠಾ ಭವನದಲ್ಲಿ ಜಿಲ್ಲಾ ಮಟ್ಟದ ಸರ್ಕಾರಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಇದಕ್ಕೂ ಮೋದಲು ಮರಾಠಾ ಭವನದಿಂದ ಆರಂಭವಾದ ಭವ್ಯ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಸಂಚರಿಸಿತು. ಹಳಿಯಾಳ ನಗರದಲ್ಲಿ ಭವ್ಯ ಶೋಭಾಯಾತ್ರೆ. ಮಹಿಳೆಯರಿಂದ ಪುರ್ಣಕುಂಭದೊಂದಿಗೆ ಜಾಂಜ್ಪದಕ, ಡೊಳ್ಳು, ಸಿದ್ದಿ ಸಮುದಾಯ ಹಾಗೂ ಬುಡಕಟ್ಟು ಸಮುದಾಯದ ವಿಶೇಷ ಸಾಂಪ್ರದಾಯಿಕ ನೃತ್ಯ, ಮಕ್ಕಳ ಛದ್ಮವೇಷ ಗಳು , ಬೃಹತ್ ಕೇಸರಿ ಭಗವಾ ಧ್ವಜಗಳು ಎಲ್ಲೆಡೆ ಕೇಸರಿಮಯ ವಾತಾವರಣ ನಿರ್ಮಾಣವಾಗಿ ಅದ್ದೂರಿಯ ಶೋಭಾಯಾತ್ರೆ ಹಳಿಯಾಳ ಶಿವಾಜಿ ಜಯಂತಿಗೆ ಮೆರಗು ತಂದಿತು.
Leave a Comment