
ಹಳಿಯಾಳ :- ಹಳಿಯಾಳದ ವಿ.ಆರ್.ಡಿ.ಎಮ್ ಟ್ರಸ್ಟ್‍ಗೆ ಇಸ್ರೇಲ್ ದೇಶದ ಮಾಜಿ ಸಚಿವರು, ವಿವಿಧ ವಿದೇಶಿ ವ್ಯವಹಾರಗಳ ನಿರ್ದೇಶಕರು, ಉದ್ಯಮಿ ಮತ್ತು ಸಲಹೆಗಾರರಾದ ಎಲಿಝರ (ಮೂಡಿ)ಸ್ಯಾಂಡಬರ್ಗರವರು ತಮ್ಮ ಧರ್ಮ ಪತ್ನಿ ಸಮೇತ ಭೇಟಿ ನೀಡಿದರು.
ಟ್ರಸ್ಟ್‍ನಆವರಣದಲ್ಲಿ ಮೊದಲಿಗೆ ಶ್ರೀಗಂಧದ ಗಿಡ ನೆಟ್ಟು, ವಿ.ಆರ್.ಡಿ.ಎಮ್‍ಟ್ರಸ್ಟ್ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಸ್ವ-ಉದ್ಯೋಗಗಳ ತರಬೇತಿಯ ಕುರಿತು ಮಾಹಿತಿ ಪಡೆದು ಪಟ್ಟಣದ ಪ್ರಸಿದ್ದ ಶ್ರೀ ತುಳಜಾಭವಾನಿ ದೇವಿಯ ದರ್ಶನ ಮಾಡಿ ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್.ಸೆಟಿ ಹಾಗೂ ವಿಮಲ ವಿ. ದೇಶಪಾಂಡೆ ಸ್ಕೂಲ್‍ಆಫ್‍ಎಕ್ಸಲೆನ್ಸನ ವಿದ್ಯಾರ್ಥಿಗಳೊಂದಿಗೆ ಇಸ್ರೇಲ್ ದೇಶದ ಮಾಹಿತಿ ಮತ್ತು ತಂತ್ರಜ್ಞಾನÀ, ಕೃಷಿ ಪದ್ಧತಿ, ಹೊಸ-ಹೊಸ ಆವಿಷ್ಕಾರ ಮತ್ತು ಅಭಿವೃದ್ಧಿಯ ಕುರಿತು ಸಂಕ್ಷೀಪ್ತ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಅವರೊಂದಿಗೆ ವಿ.ಆರ್.ಡಿ. ಎಮ್. ಟ್ರಸ್ಟನ್ ಅಧ್ಯಕ್ಷರು ಆಗಿರುವ ಶಾಸಕ ಆರ್.ವಿ.ದೇಶಪಾಂಡೆ, ಧರ್ಮದರ್ಶಿ ಪ್ರಸಾದ ದೇಶಪಾಂಡೆ ಮತ್ತು ಆಡಳಿತಾಧಿಕಾರಿ ಪ್ರಕಾಶ ಪ್ರಭು ಇದ್ದು ಟ್ರಸ್ಟ್‍ನ ಕಾರ್ಯವೈಖರಿಯ ಕುರಿತು ಮಾಹಿತಿ ನೀಡಿದರು.
ಕೆನರಾ ಬ್ಯಾಂಕ್‍ಆರ್ ಸೆಟಿಯ ನಿರ್ದೇಶಕ ನಿತ್ಯಾನಂದ ವೈದ್ಯ, ಡಿ.ಪಿ.ಐ.ಟಿ.ಐ ನ ಪ್ರಾಚಾರ್ಯ ದಿನೇಶ ನಾಯ್ಕ ಇದ್ದರು.

Leave a Comment