• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅರ್ಜುನ(ಮತ್ತಿ ಮರ)# Terminalia arjuna #ಔಷಧಿಗುಣಗಳು

February 24, 2020 by KV Parthasarathi Kshatriya 1 Comment

ಅರ್ಜುನ,ಮತ್ತಿ ಮರ, Terminalia arjuna

ಕಕುಭ ನದೀ ಸರ್ಜ ಶರದ್ರುಮ ಮದ್ದಿ ಮತ್ತಿ ಕರಿಮತ್ತಿ ಬಿಳಿಮತ್ತಿ ತೊರೆಮತ್ತಿ ಅರ್ಜುನ್ ಯರ್ರಮಡ್ಡಿ ತೆಲ್ಲಮಡ್ಡಿ ಮರುದ ಮರಂ ಎಂಬ ಹೆಸರುಗಳಿಂದ ಕರೆಯುತ್ತಾರೆ.
ದಟ್ಟ ಅರಣ್ಯಗಳಲ್ಲಿ,ಬೆಟ್ಟಗುಡ್ಡಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ.ರಸ್ತೆ ಪಕ್ಕದಲ್ಲಿ ಸಾಲು ಮರಗಳಾಗಿ,ಹೊಲದ ಬದಿಗಳ ಮೇಲೆ ಸಹಾ ಬೆಳೆಸುತ್ತಾರೆ. 60 ರಿಂದ 100 ಅಡಿಯವರಿಗೂ ಬೃಹದ್ಧಕಾರವಾಗಿ ಬೆಳೆಯುತ್ತವೆ.ಇದರ ತೊಗಟೆ ತುಂಬಾ ದಪ್ಪವಾಗಿರುತ್ತೆ.ಸಣ್ಣಸಣ್ಣ ಪುಷ್ಪ ಮಂಜರಿ ಜೋಡಿಸಲ್ಪಟ್ಟಿರುತ್ತವೆ.
ಮತ್ತಿಯ ಅಂಶದಿಂದ ಕೂಡಿದ ಯಜ್ಞದ ಧೂಮವು ಸುತ್ತಲ ವಾತಾವರಣದಲ್ಲಿಯ ಮಲಿನತೆಯನ್ನು ದೂರ ಮಾಡಬಲ್ಲದು….! ಮುಗಿಲಿಗೇರುವ ಈ ಧೂಮವು ಮೋಡಗಳು ಗರ್ಭಧರಿಸುವಂತೆ ಮಾಡಿ,ನಿಯಮಿತ ಕಾಲದಲ್ಲಿ ಋತ ಧರ್ಮಕ್ಕೆ ಅನುಸಾರವಾಗಿ ಮಳೆಯು ಸುರಿಯುವಂತೆ ಮಾಡಬಲ್ಲದು.

ಅರ್ಜುನ,ಮತ್ತಿ ಮರ, Terminalia arjuna


ಈ ವೃಕ್ಷದ ಸ್ಪರ್ಶ ಮಾತ್ರದಿಂದಲೇ ಹೃದ್ರೋಗಗಳು ದೂರಾಗುವುವು. ಅಷ್ಟೇ ಅಲ್ಲದೆ ಈ ವೃಕ್ಷವಿರತಕ್ಕ ಪರಿಸರದಲ್ಲಿ ವಾಸಿಸುವುದರಿಂದ ಹೃದ್ರೋಗಗಳು ಬರುವ ಸಾಧ್ಯತೆಯೇ ಇರುವುದಿಲ್ಲ ಎಂದು ಋಷಿ ಮುನಿಗಳು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಆದುದ್ದರಿಂದಲೇ ಪೂರ್ವಿಕರಲ್ಲಿ ಮನೆಯ ಬಾಗಿಲು ಕಿಟಕಿ ಕಂಬ ಇತ್ಯಾದಿಗಳನ್ನು ಮತ್ತಿಯ ಮರದಿಂದ ಮಾಡಿಸುತ್ತಿದ್ದರು. ಮತ್ತಿಯ ಈ ಅಪೂರ್ವ ಗುಣದಿಂದಾಗಿ ಋಷಿಗಳು ಇದನ್ನು “ದೇವ ವೃಕ್ಷ”ಎಂದು ಕರೆದಿದ್ದಾರೆ.
ಮತ್ತಿ ಮರದ ತೊಗಟೆಯನ್ನು ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು, ಬೆಳಿಗ್ಗೆ ಸಂಜೆ ಹಸುವಿನ ಹಾಲಿನಲ್ಲಿ ಬೆರಸಿ, ಪ್ರತಿ ದಿನವೂ ಸೇವಿಸುತ್ತಿದ್ದರೆ, ಅಜೀವ ಪರ್ಯಂತ ಯಾವ ಕಾಯಿಲೆಗಳು ಬರುವುವ ಅವಕಾಶವೇ ಇರದು….! ಮಕ್ಕಳು ಮುದಕರು ಸ್ತ್ರೀ ಪುರುಷರಾಧಿಯಾಗಿ ಯಾರು ಬೇಕಾದರೂ ಈ ವೈದ್ಯವನ್ನು ಮಾಡಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ.
ಮತ್ತಿಯಲ್ಲಿ ಕ್ಯಾಲ್ಸಿಯಂ, ಅಲ್ಯೂಮಿನಿಯಂ, ಮೆಗ್ನಿಶಿಯಂ ಅಧಿಕ ಇರುವುದರಿಂದ,ಈ ವೃಕ್ಷದ ತೊಗಟೆಯನ್ನು ಉಪಯುಕ್ತ ಹಾಗೂ ಶಕ್ತಿದಾಯಕ ಎಂದು ವೈಜ್ಞಾನಿಕವಾಗಿ ಗುರ್ತಿಸಿ, ಇದನ್ನು ಅನೇಕ ಔಷಧಿಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ಎರಡಿಂಚು ಮತ್ತಿಯ ತೊಗಟೆ, ಒಂದು ಸಣ್ಣ ತುಂಡು ಶುಂಠಿ ಒಂದು ಮಣ್ಣಿನ ಮಡಿಕೆಯಲ್ಲಿ ಜಜ್ಜಿ ಹಾಕಿ, ಅದಕ್ಕೆ 150ml ನೀರು ಹಾಕಿ ಒಲೆಯ ಮೇಲಿಟ್ಟು ಚೆನ್ನಾಗಿ ಮಂದದುರಿಯಲ್ಲಿ ಕುದಿಸಿ 50ml ಆದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ ಸೋಸಿ 1ಲೋಟ ಹಸುವಿನ ಹಾಲಿನಲ್ಲಿ ಕಲಸಿ, ಬೆಳಿಗ್ಗೆ ಸಂಜೆ ಸೇವಿಸುತ್ತಾ ಬಂದರೆ,ಎಂತಹ ಹೃದ್ರೋಗ ಸಮಸ್ಯೆ ಇದ್ದರೂ ವಾಸಿಯಾಗುತ್ತೆ….! ಇದರ ಸೇವನೆಯಿಂದ ಹೃದಯಕ್ಕೆ ರಕ್ತ ಸಂಚಾರ ಸುಗುಮವಾಗಿ ಸಂಚರಿಸಲು ಸಹಾಯವಾಗುತ್ತೆ….!
1 ಚಮಚ ಮತ್ತಿ ತೊಗಟೆಯ ಚೂರ್ಣಕ್ಕೆ 1 ಚಮಚ ಜೇನುತುಪ್ಪ ಸೇರಿಸಿ, ರಂಗಳಿಸಿ ನೆಕ್ಕುತ್ತಾ ಬಂದರೆ ಶ್ವಾಸಕೋಶಗಳು ಶುಭ್ರಗೊಳಿಸಿ ಅಸ್ತಮಾ ಕಾಯಿಲ್ಲೆಯನ್ನು ಅತೋಟಿಗೆ ತರುತ್ತೆ.

83604583 275093870118147 3001678215686127616 n


ಮತ್ತಿ ತೊಗಟೆಯ ಚೂರ್ಣವನ್ನು ಜೇನುತುಪ್ಪ ಕಲಸಿ ಸೇವಿಸುತ್ತಾ ಬಂದಲ್ಲಿ, ಮುರಿದ ಮೂಳೆಗಳು ಬೇಗನೆ ಕೂಡಿಕೊಳ್ಳುತ್ತವೆ.ಮುರಿದ ಮೂಳೆ ಕೂಡಿಕೊಳ್ಳಲು ಇದು ದಿವೌಷಧ….! ಇದರಲ್ಲಿರುವ ಅಧಿಕವಾದ ಕ್ಯಾಲ್ಸಿಯಂ ಅಂಶ ಮೂಳೆಗಳಿಗೆ ಶಕ್ತಿ ಬಂದು ಬೇಗನೆ ಕೂಡಿಕೊಳ್ಳಲು ನೆರವಾಗುತ್ತೆ.ಮೂಳೆ ಮುರಿದ ಜಾಗಕ್ಕೆ ಇದನ್ನು ಲೇಪನ ಮಾಡಿ ಬಿದರು ದಬ್ಬೆ ಹಾಕಿ ಕಟ್ಟು ಸಹಾ ಕಟ್ಟಬಹುದು.
ಇಂದಿನ ಯುವ ಸಮುದಾಯದಲ್ಲಿ ಮುಖದಲ್ಲಿನ ಮೊಡವೆ ಸಮಸ್ಯೆ ವಿಪರೀತ, ತೊಗಟೆಯ ಚೂರ್ಣಕ್ಕೆ ಜೇನುತುಪ್ಪ ಕಲಸಿ, ಕಲಸಿದ ಪೇಸ್ಟನ್ನು ಮೊಡವೆಗಳಿಗೆ ಲೇಪನ ಮಾಡುತ್ತಾ ಬಂದರೆ, ಮೊಡವೆಗಳು, ಮೊಡವೆಯಿಂದಾದ ಕಲೆಗಳು, ಮಚ್ಚೆಗಳು ಸಹಾ ಬೇಗನೆ ಮಾಯವಾಗುತ್ತವೆ.ಮೊಡವೆಗಳಿಗೆ ಇದು ಅದ್ಭುತವಾಗಿ ಕೆಲಸ ಮಾಡುತ್ತೆ.
ಮತ್ತಿ ತೊಗಟೆಯ ಚೂರ್ಣಕ್ಕೆ ಜೇನುತುಪ್ಪ ಅಥವಾ ಕಲ್ಲುಸಕ್ಕರೆ ಸೇರಿಸಿ ಹಸುವಿನ ಹಾಲಿನಲ್ಲಿ ಸೇವಿಸುತ್ತಾ ಬಂದರೆ ವೀರ್ಯಾಣು ವೃದ್ಧಿಯಾಗಿ ನಪುಂಷಕತ್ವ ದೂರವಾಗುತ್ತೆ.
ಎಲೆಗಳ ರಸಕ್ಕೆ ಚಿಟಿಕೆ ಅರಸಿಣ ಸೇರಿಸಿ ಕೆಲವು ದಿನ ಸೇವಿಸಿದರೆ ಮೈಯಲ್ಲಿನ ಹುಣ್ಣುಗಳು ಗುಣವಾಗುತ್ತೆ.
ಅನೇಕ ಜನರಿಗೆ ಕೇವಲ “ಮತ್ತಿ” ಎಂಬ ಹೆಸರು ತಿಳಿದಿದೆಯೇ ವಿನಃ, ಅದರ ಅಪೂರ್ವ ಗುಣ ಹಾಗೂ ಪ್ರಭಾವ ತಿಳಿದಿಲ್ಲ ಎಂಬುವುದು ಒಂದು ವಿಪರ್ಯಾಸ.ಆದ್ದರಿಂದಲೇ ದೇವರ್ಷಿ, ಬ್ರಹ್ಮರ್ಷಿಗಳಿಂದ ತಿಳಿಸಲ್ಪಟ್ಟ ಈ ಸುಲಭ ವಿಧಾನದ ಮೂಲಕ ಮತ್ತಿಯನ್ನು ಬಳಸಿ, ಅದರಿಂದ ದೊರೆಯುವ ಸತ್ಫಲಗಳನ್ನರಿತು, ತೃಪ್ತರಾಗಿ ಎಂದು ಹೇಳಿದ್ದಾರೆ.ಇದರ ಉಪಯೋಗಗಳು ಅಪರಮಿತವಾದದ್ದು.

ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷವನ್ನು ಪರಿಚಯ ಮಾಡಿಕೊಳ್ಳೋಣ.
ವಂದನೆಗಳು

ಅರ್ಜುನ,ಮತ್ತಿ ಮರ, Terminalia arjuna

https://kn.wikipedia.org/wiki/%E0%B2%AE%E0%B2%A4%E0%B3%8D%E0%B2%A4%E0%B2%BF_(%E0%B2%94%E0%B2%B7%E0%B2%A7%E0%B3%80%E0%B2%AF_%E0%B2%B8%E0%B2%B8%E0%B3%8D%E0%B2%AF)

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, ಆರೋಗ್ಯ, ಮನೆಮದ್ದು Tagged With: Terminalia arjuna, ಅಜೀವ ಪರ್ಯಂತ, ಅರ್ಜುನ್ ಯರ್ರಮಡ್ಡಿ, ಆಯುರ್ವೇದ ಗ್ರಂಥ, ಋಷಿ ಮುನಿಗಳು, ಕಾಯಿಲೆಗಳು ಬರುವುವ ಅವಕಾಶವೇ ಇರದು, ಗರ್ಭಧರಿಸುವಂತೆ, ಜೇನುತುಪ್ಪ, ತೆಲ್ಲಮಡ್ಡಿ, ತೊಗಟೆಯ ಚೂರ್ಣ, ತೊರೆಮತ್ತಿ, ದಟ್ಟ ಅರಣ್ಯಗಳಲ್ಲಿ, ದಿವೌಷಧ, ನೈಸರ್ಗಿಕ, ಪ್ರತಿ ದಿನವೂ ಸೇವಿಸುತ್ತಿದ್ದರೆ, ಬಿಳಿಮತ್ತಿ, ಬೆಟ್ಟಗುಡ್ಡಗಳಲ್ಲಿ, ಬೆರಸಿ, ಮಕ್ಕಳು ಮುದಕರು ಸ್ತ್ರೀ, ಮಚ್ಚೆಗಳು, ಮತ್ತಿ ಕರಿಮತ್ತಿ, ಮರುದ ಮರಂ, ಮೂಳೆ ಕೂಡಿಕೊಳ್ಳಲು, ಮೊಡವೆಗಳು, ಮೊಡವೆಯಿಂದಾದ ಕಲೆಗಳು, ಯಜ್ಞದ ಧೂಮವು ಸುತ್ತಲ ವಾತಾವರಣ, ವೃಕ್ಷದ ಸ್ಪರ್ಶ, ಶ್ವಾಸಕೋಶಗಳು ಶುಭ್ರ, ಸಹಾ, ಸಾಲು ಮರಗಳಾಗಿ, ಹೊಲದ ಬದಿಗಳ ಮೇಲೆ

Explore More:

About KV Parthasarathi Kshatriya

Reader Interactions

Comments

  1. ಶ್ರೀ ಚರಣ ಸೇವಕ says

    July 28, 2020 at 7:20 pm

    ತುಂಬಾ ಚೆನ್ನಾಗಿ ಹೇಳಿದ್ದೀರಾ

    Reply

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...