
ಖಾನಾಪುರ: ದೇಶದಲ್ಲಿ ಎಲ್ಲಕ್ಕಿಂತಲೂ ಮುಂಚಿತವಾಗಿ ಪ್ರಥಮ ಬಾರಿಗೆ ಮಹಿಳಾ ಸೈನ್ಯವನ್ನು ಕಟ್ಟಿ ಹೋರಾಡಿದ ಧೀರ ಮಹಿಳೆ, ಅವರು ದೇಶಕ್ಕಾಗಿ ಹಾಗೂ ಸಮಾಜಕ್ಕಾಗಿ ತಮ್ಮ ಪ್ರಾಣವನ್ನೆ ಮುಡಿಪಾಗಿಟ್ಟು ಹೋರಾಡಿದ್ದಾರೆ, ಇಂತಹ ಮಹಾನ ವ್ಯಕ್ತಿಗಳು ನಮ್ಮೆಲ್ಲರಿಗೆ ಆದರ್ಶವಾಗಿದ್ದಾರೆ ಎಂದು ಖಾನಾಪುರ ತಹಶಿಲ್ದಾರ ರೇಶ್ಮಾ ತಾಳಿಕೋಟಿ ಹೇಳಿದರು.
ತಾಲೂಕಿನ ಗಡಿಗ್ರಾಮ ಲಿಂಗನಮಠದಲ್ಲಿ ಜಿಲ್ಲೆಗೆ ಪಾದಾರ್ಪಣೆ ಮಾಡಿದ ಬೆಳವಡಿ ಮಲ್ಲಮ್ಮ ಉತ್ಸವದ ಜ್ಯೋತಿಯನ್ನು ತಾಲೂಕಾಡಳಿತ ವತಿಯಿಂದ ಬರಮಾಡಿಕೊಂಡು ಮಾತನಾಡಿದರು.
ರಾಜ್ಯದ ರಕ್ಷಣೆಗಾಗಿ ಯುದ್ಧದಲ್ಲಿ ಹೋರಾಡುವಾಗ ಬೆಳವಡಿ ಮಲ್ಲಮ ಅವರ ರಾಜ್ಯವು ಬಹಳ ಸುರಕ್ಷಿತವೂ ಮತ್ತು ಸೋಲಿಸಲಾಗದಂತಾಗಿತ್ತು. ಆಗ ಯುದ್ಧದಲ್ಲಿ ಶಿವಾಜಿಯ ಸೈನಿಕನು ಅವಳು ಸವಾರಿ ಮಾಡುತ್ತಿದ್ದ ಕುದುರೆಯ ಕಾಲನ್ನು ಕತ್ತರಿಸಿದಾಗ ಅವಳು ಕೆಳಗೆ ಬಿದ್ದಳು. ಆದರೂ ಎದೆಗೆಡದೆ ಎದ್ದು ಅವಳು ಹೋರಾಟವನ್ನು ಮುಂದುವರೆಸಿದಳು. ಶಿವಾಜಿಯ ಸೈನಿಕರು ಧಾವಿಸಿ ಓಡಿ ಬಂದು ಮಲ್ಲಮ್ಮ ನನ್ನು ಬಂಧಿಸಿ ಶಿವಾಜಿಯ ಬಳಿಗೆ ಕರೆದುಕೊಂಡು ಹೋದರು. ಶಿವಾಜಿಯು ಮಲ್ಲಮ್ಮಳನ್ನು ತನ್ನ ರಾಜ್ಯಭಾರದಲ್ಲಿ ಹೊಗಳಿ ಹೇಳಿದ “ತಾಯಿ ನಾನು ತಪ್ಪು ಮಾಡಿದೆ, ದಯವಿಟ್ಟು ನನ್ನನ್ನು ಕ್ಷಮಿಸು. ನನಗೆ ನಿಮ್ಮ ರಾಜ್ಯ ಬೇಕಿಲ್ಲ” ಎಂದು ಬೆಳವಡಿ ಮಲ್ಲಮ್ಮಳನ್ನು ಬಿಡುಗಡೆ ಮಾಡಿದನು. ಇಂತಹ ವೀರ ಮಹಿಳೆ ಶತ್ರುಗಳ ಜೋತೆ ಕುದುರೆ ಮೇಲೆ ಸವಾರಿ ಹೋರಾಡಿದಳು ಎಂದು ನುಡಿದರು.
ಬೆಳವಡಿ ಮಲ್ಲಮ್ಮ ಉತ್ಸವದ ಜ್ಯೋತಿಯನ್ನು ಲಿಂಗನಮಠ ಗ್ರಾಮದ ಮೂಲಕ ಬೆಳಗಾವಿ ಜಿಲ್ಲೆಗೆ ಬರಮಾಡಿಕೊಂಡು ಕಾರ್ಯಕ್ರಮಕ್ಕೆ ಬಂದಂತಹ ಎಲ್ಲರನ್ನೂ ಲಿಂಗನಮಠ ಗ್ರಾಪಂ ಅಧ್ಯಕ್ಷ ಕೆ.ಬಿ.ಹಿರೇಮಠ ಸ್ವಾಗತಿಸಿ, ಸ್ವಾಗತಪರ ಭಾಷಣ ಮಾಡಿದರು. ತದನಂತರ ಗ್ರಾಮಸ್ಥರ ಪರವಾಗಿ ಪ್ರಾಥಮಿಕ ಶಾಲೆ ಎಸ್.ಡಿ.ಎಮ್.ಸಿ ಅಧ್ಯಕ್ಷ ಪಾಂಡುರಂಗ ಮಿಟಗಾರ ಬೆಳವಡ ಮಲ್ಲಮ್ನ ಕುರಿತು ಸವಿಸ್ತಾರವಾಗಿ ಭಾಷಣ ಮಾಡಿದರು.

ಬೆಳವಡಿ ಮಲ್ಲಮ್ಮ ಉತ್ಸವದ ಜ್ಯೋತಿಯನ್ನು ಗ್ರಾಮದ ಚನ್ನಬಸವೇಶ್ವರ ದೇವಸ್ಥಾನದ ಹತ್ತಿರ ಪೂಜೆ ಮಾಡಿ ಬರಮಾಡಿಕೊಂಡರು. ತದನಂತರ ಗ್ರಾಮದ ಚನ್ನಬಸವೇಶ್ವರ ಮತ್ತು ನಂದೀಶ್ವರ ಭಜನಾ ಸಂಘದ ಸದಸ್ಯರು ಭಜನೆ ಮಾಡಿ ಮಂಗಳಾರತಿ ಹಾಡಿ ಜ್ಯೋತಿ ಬೆಳಗಿಸಿದರು. ತದನಂತರ ಲಿಂಗನಮಠದ ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳು ಹಾಗೂ ಗ್ರಾಮದ ಎಲ್ಲ ಸಂಘ ಸಂಸ್ಥೆಯ ಪದಾಧಿಕಾರಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಜ್ಯೋತಿಯನ್ನು ಸುತ್ತಾಡಿ ತದನಂತರ ಗ್ರಾಮದ ಕೊನೆಯಲ್ಲಿ ಬಿಳ್ಕೋಟ್ಟರು.
ಕಾರ್ಯಕ್ರಮವನ್ನು ಪತ್ರಕರ್ತ ಕಾಶೀಮ ಹಟ್ಟಿಹೊಳಿ ನಿರೂಪಿಸಿ, ವಂದಿಸಿದರು.
ಈ ಸಂಧರ್ಭದಲ್ಲಿ ಖಾನಾಪುರ ತಹಶಿಲ್ದಾರ ರೇಶ್ಮಾ ತಾಳಿಕೋಟಿ, ಉಪ ತಹಶಿಲ್ದಾರ ಚಿದಾನಂದ, ಕಂದಾಯ ನೀರಿಕ್ಷಕ ಶಿಮಾನೆ, ಪಿಡಿಓ ಕಾವೇರಿ ಹಿಮಕರ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ, ಕರವೇ ಅಧ್ಯಕ್ಷ ಮಹಾಂತೇಶ ಸಂಗೋಳ್ಳಿ, ಪಾಂಡುರಂಗ ಮಿಟಗಾರ, ಗ್ರಾಮೀಣ ಸೇವಾ ಸಂಸ್ಥೆ ಅಧ್ಯಕ್ಷ ಆನಂದ ಮಾಟೋಳ್ಳಿ, ಬಸನಗೌಡ ಪಾಟೀಲ, ರಾಜು ಸಂಗೋಳ್ಳಿ, ಶಿವಾನಂದ ಬಾಗೇವಾಡಿ, ಗ್ರಾಮಸ್ಥರಾದ ಶಿವರಾಜ ಬಿಜಾಪುರ, ಆಶೋಕ ಮಾಟೋಳ್ಳಿ, ರಮೇಶ ಭಜಂತ್ರಿ, ಶಂಕರ ಪಾಟೀಲ, ಈರಣ್ಣಾ ಮಾಟೋಳ್ಳಿ, ಗ್ರಾಪಂ ಸದಸ್ಯರು ಮತ್ತು ಸಿಬ್ಬಂಧಿ ಬಳಗ, ಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕವೃಂದ, ಶಾಲೆಯ ಮಕ್ಕಳು, ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕವೃಂದ, ಶಾಲೆಯ ಮಕ್ಕಳು, ಗ್ರಾಮೀಣ ಸೇವಾ ಸಂಸ್ಥೆಯ ಸದಸ್ಯರು, ಚನ್ನಬಸವೇಶ್ವರ ಮತ್ತು ನಂದೀಶ್ವರ ಭಜನಾ ಸಂಘದವರು, ಗ್ರಾಮದ ಇನ್ನೂಳಿದ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

Leave a Comment