
ಜೋಯಿಡಾ –
ಜೋಯಿಡಾ ತಾಲೂಕಿನ ಕಾರ್ಟೋಲಿ ಜಾತ್ರೆಯಲ್ಲಿ ಜೋಯಿಡಾ ಪೋಲಿಸ್ ಇಲಾಕೆಯ ಎ.ಎಸ್.ಐ ನರೇಂದ್ರ ಆಚಾರಿ ಅವರಿಗೆ ಸನ್ಮಾನಿಸಲಾಯಿತು.
ಈ ಬಗ್ಗೆ ಮಾತನಾಡಿದ ಸಂಘಟನೆಯ ಮುಖ್ಯಸ್ಥ ರಮೇಶ ನಾಯ್ಕ ನಮ್ಮ ದೇವಸ್ಥಾನ ಕಟ್ಟಿಕೊಡುತ್ತೇನೆ ಎಂದು ಹೇಳಿ ಬೆಳಗಾವಿ ಮೂಲದ ಇಂಜಿನಿಯರ್ ಮೌನಿಷ್ ಪಾಟೀಲ್ ಎನ್ನುವ ವ್ಯಕ್ತಿ ನಮ್ಮ ಕಮಿಟಿ ಇಂದ 6 ಲಕ್ಷ ಹಣ ತೆಗೆದುಕೊಂಡು ನಮ್ಮನ್ನು ಯಾಮಾರಿಸಿದ್ದರು. ನಂತರದಲ್ಲಿ ನಮಗೆ ಸಿಗದೇ ಮೋಸ ಮಾಡಿದ್ದರು. ಈ ಬಗ್ಗೆ ನಮ್ಮ ಕಮಿಟಿ ವತಿಯಿಂದ ಜೋಯಿಡಾ ಪೋಲಿಸ್ ಠಾಣೆಗೆ ಈ ಬಗ್ಗೆ ದೂರು ದಾಖಲು ಮಾಡಿದ್ದೇವು . ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಆಪಾದಿತನಿಂದ ೬ ಲಕ್ಷ ಹಣವನ್ನು ನಮ್ಮ ಕಮಿಟಿಗೆ ವಾಪಾಸ್ ನೀಡುವಂತೆ ಮಾಡಿ ಇಂದು ನಮ್ಮ ದೇವಸ್ಥಾನ ಕಟ್ಟಲು ಸಹಕಾರಿಯಾದ ಪೋಲಿಸ್ ಅಧಿಕಾರಿ ನರೇಂದ್ರ ಆಚಾರಿ ಅವರನ್ನು ಸನ್ಮಾನಿಸುತ್ತಿರುವುದು ಸಂತಸ ತಂದಿದೆ , ಜೋಯಿಡಾ ಪೋಲಿಸ್ ಠಾಣೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯ ಇದೆ ಎಂದರು.
ಈ ಬಗ್ಗೆ ಮಾತನಾಡಿದ ಜೋಯಿಡಾ ಪೋಲಿಸ್ ಠಾಣೆಯ ನರೇಂದ್ರ ಆಚಾರಿ ನಾನು ನಮ್ಮ ಹಿರಿಯ ಅಧಿಕಾರಿಗಳ ಮಾರ್ಗ ದರ್ಶನದಿಂದ ಈ ಪ್ರಕರಣ ಬೇದಿಸಿದ್ದೇನೆ. ದೇವಸ್ಥಾನಕ್ಕೆ ವಂಚನೆ ಮಾಡಿದವರನ್ನು ಹಿಡಿಯುವ ಕರ್ತವ್ಯ ಮಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕಮಿಟಿಯ ಅಧ್ಯಕ್ಷ ಸುರೇಶ ವೆಳಿಪ್,ರಾಜೇಶ್ ಗಾವಾಡಾ ಇತರರು ಉಪಸ್ಥಿತರಿದ್ದರು .
Leave a Comment